×
Ad

ಮನಗೂಳಿ ಪಟ್ಟಣ ಪಂಚಾಯತ್ ಚುನಾವಣೆ

Update: 2016-04-20 23:43 IST

ಬೆಂಗಳೂರು, ಎ. 20: ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಮನಗೂಲಿ ಪಟ್ಟಣ ಪಂಚಾಯತ್ ವಾರ್ಡ್ ನಂ-9ರಿಂದ 16ರ ವರೆಗಿನ ಚುನಾವಣೆಯನ್ನು ಮೇ 3ರಂದು ನಡೆಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ.ನಾಮಪತ್ರ ಸಲ್ಲಿಸಲು ಎ.22 ಕೊನೆಯ ದಿನ. ಎ.23ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಎ.25ಕೊನೆಯ ದಿನ. ಮೇ.3ರಂದು ಚುನಾವಣೆ ನಡೆಯಲಿದ್ದು, ಮೇ 5ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ತಿಳಿಸಲಾಗಿದೆ.

ಅಲ್ಲದೆ, ಮನಗೂಳಿ ಪಟ್ಟಣ ಪಂಚಾಯತ್‌ನ 1ರಿಂದ 8ರ ವರಗಿನ ವಾರ್ಡ್‌ಗಳಿಗೆ ಮತ ಎಣಿಕೆಯನ್ನು ಮೇ 5ರಂದು ನಡೆಸಲು ಮರು ನಿಗದಿಪಡಿಸಿದೆ ಎಂದು ಆಯೋಗದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News