×
Ad

ಆಡಳಿತಾರೂಢ ಕಾಂಗ್ರೆಸ್ ಜಯಭೇರಿ

Update: 2016-04-20 23:44 IST

ಬೆಂಗಳೂರು, ಎ.20: ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿಯಿದ್ದ 17 ಸ್ಥಾನಗಳಿಗೆ ನಡೆದಿದ್ದ ಉಪ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್-9, ವಿಪಕ್ಷ ಬಿಜೆಪಿ-3, ಪಕ್ಷೇತರರು-4 ಹಾಗೂ ಜೆಡಿಎಸ್ 1 ಸ್ಥಾನದಲ್ಲಿ ಜಯಗಳಿಸಿದೆ.

ಬೆಂ.ಗ್ರಾ.ನೆಲಮಂಗಲ ಪುರಸಭೆ(ವಾ.ನಂ.12)-ಕಾಂಗ್ರೆಸ್, ಚಿಕ್ಕಬಳ್ಳಾಪುರ ಬಾಗೇಪಲ್ಲಿ ಪು.ಸ-ಕಾಂಗ್ರೆಸ್, ಬೀದರ್ ಹುಮ್ನಾಬಾದ್ ಹಾಗೂ ಬಾಲ್ಕಿ-ಕಾಂಗ್ರೆಸ್, ಬಳ್ಳಾರಿ ಹೊಸಪೇಟೆ-ಬಿಜೆಪಿ, ಕೊಪ್ಪಳ ಗಂಗಾವತಿ-ಬಿಜೆಪಿ, ದಕ್ಷಿಣ ಕನ್ನಡ ಸುಳ್ಯ ನಗರಸಭೆ- ಕಾಂಗ್ರೆಸ್.

ಬಾಗಲಕೋಟೆ ಜಮಖಂಡಿ ನಗರಸಭೆ-ಕಾಂಗ್ರೆಸ್, ತೇರದಾಳ ಪುರಸಭೆ-ಬಿಜೆಪಿ, ಶಿರಸಿ ನಗರಸಭೆ ಕಾಂಗ್ರೆಸ್, ಭಟ್ಕಳ-ಪಕ್ಷೇತರ, ಬೆಳಗಾವಿಯ ಗೋಕಾಕ್ ಪಕ್ಷೇತರ, ರಾಮದುರ್ಗ-ಕಾಂಗ್ರೆಸ್ ಹಾಗೂ ಹಾಸನ ನಗರಸಭೆಯ ವಾರ್ಡ್ 6ಕ್ಕೆ ಜೆಡಿಎಸ್ ಆಯ್ಕೆಯಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News