×
Ad

ನಿಮ್ಮ ಯಕೃತ್ತಿನ (ಲಿವರ್) ಬಗ್ಗೆ ನಿಮಗೆಷ್ಟು ಗೊತ್ತು?

Update: 2016-04-21 14:45 IST

ಯಕೃತ್ತು ಮಾನವ ದೇಹದ ಅತೀ ಪ್ರಮುಖ ಅಂಗ. ಅದು ನಿರ್ಣಾಯಕ ಜೈವಿಕ ಕಾರ್ಯಗಳನ್ನು ಮಾಡಿ ನಮ್ಮ ದೇಹವನ್ನು ಆರೋಗ್ಯಕಾರಿ ಮತ್ತು ಫಿಟ್ ಆಗಿಡುತ್ತದೆ. ಅದರ ಬಹುಕಾರ್ಯದ ಅಂಗವು ಜೊತೆಯಾಗಿ 200 ದೇಹದ ಕಾರ್ಯಗಳನ್ನು ಮಾಡಬಲ್ಲದು. ಅವುಗಳಲ್ಲಿ ಕೆಲವು ಇಲ್ಲಿವೆ.

ಡೀಟಾಕ್ಸಿಫೈಯಿಂಗ್ ಏಜೆಂಟ್

ಯಕೃತ್ತು ನಮ್ಮ ದೇಹದ ಡೀಟಾಕ್ಸಿಫೈಯಿಂಗ್ ಏಜೆಂಟ್. ದೇಹದ ದೊಡ್ಡ ಅಂಗವಾಗಿ ರಕ್ತವನ್ನು ಶುದ್ಧಿಗೊಳಿಸುತ್ತದೆ ಮತ್ತು ನಮ್ಮ ದೇಹದಲ್ಲಿ ಸಹಜವಾಗಿ ಬಿಡುಗಡೆಯಾದ ವಿಷಕಾರಿ ರಾಸಾಯನಿಕಗಳನ್ನು ಮುರಿಯುತ್ತದೆ.

ರಾಸಾಯನಿಕ ಕಾರ್ಖಾನೆ

ಆರೋಗ್ಯ ತಜ್ಞರು ಯಕೃತ್ತನ್ನು ದೇಹದ ರಾಸಾಯನಿಕ ಕಾರ್ಖಾನೆ ಎನ್ನುತ್ತಾರೆ. ಏಕೆಂದರೆ ಇದೊಂದೇ ದೇಹದಲ್ಲಿ 500 ರಾಸಾಯನಿಕ ಕ್ರಿಯೆಗಳನ್ನು ನಡೆಸುತ್ತದೆ.

ಹೀಲಿಂಗಿಗೆ ನೆರವಾಗುತ್ತದೆ

ಯಕೃತ್ತು ರಕ್ತ ಹೆಪ್ಪುಗಟ್ಟುವ ಅಂಶಗಳನ್ನು ಉತ್ಪಾದಿಸುತ್ತದೆ. ಅದರಿಂದ ರಕ್ತ ಹೆಪ್ಪುಗಟ್ಟುವ ರೂಪಕ್ಕೆ ಅವು ಕಾರಣ. ರಕ್ತ ಹೆಪ್ಪುಗಟ್ಟುವ ಅಂಶಗಳಿಲ್ಲದೆ ರಕ್ತ ಸ್ರಾವದ ರೋಗ ಬರಬಹುದು.

ಬೈಲ್ ಉತ್ಪಾದಕ

ಬೈಲ್ ಎಂದರೆ ಯಕೃತ್ತು ತಯಾರಿಸುವ ಹಸಿರುವ ಬಣ್ಣದ ದ್ರವ. ಅದು ಯಕೃತ್ತನ್ನು ಇತರ ಅಂಗಗಳಾದ ಗಾಲ್ ಬ್ಲೇಟರ್, ಸಣ್ಣ ಕರುಳು ಇತ್ಯಾದಿಗಳ ಜೊತೆಗೆ ಸಂಪರ್ಕಿಸುತ್ತದೆ. ಅದು ಸಣ್ಣ ಕರುಳಿನ ಕೊಬ್ಬುಗಳನ್ನು ಜೀರ್ಣಿಸಲು ಸಹ ನೆರವಾಗುತ್ತದೆ.

ದೇಹದ ಬ್ಯಾಟರಿ

ಯಕೃತ್ತು ನಮ್ಮ ದೇಹದ ಬ್ಯಾಟರಿಯಾಗಿ ಕೆಲಸ ಮಾಡುತ್ತದೆ. ಇದು ಸಕ್ಕರೆಯನ್ನು ಸಂಗ್ರಹಿಸಿಡುತ್ತದೆ ಮತ್ತು ನಮ್ಮ ದೇಹಕ್ಕೆ ಅಗತ್ಯವಿರುವಾಗ ಬಳಸುತ್ತದೆ. ಸರಳವಾಗಿ ಹೇಳಬೇಕೆಂದರೆ ಯಕೃತ್ತು ನಮ್ಮ ದೇಹದಲ್ಲಿರುವ ಸಕ್ಕರೆ ಅಂಶವನ್ನು ಪರಿಶೀಲಿಸುತ್ತದೆ.

ಪೌಷ್ಠಿಕಾಂಶಗಳ ಮಳಿಗೆ

ಇದು ನಮ್ಮ ದೇಹದಲ್ಲಿ ಪ್ರಮುಖ ಹಾರ್ಮೋನುಗಳು, ವಿಟಮಿನ್‌ಗಳು, ಲವಣಗಳನ್ನು ಸಂಗ್ರಹಿಸುತ್ತದೆ. ದೇಹಕ್ಕೆ ಇವುಗಳ ಕೊರತೆ ಬಂದಾಗ ಯಕೃತ್ತು ರಕ್ತದ ನಾಳಗಳ ಮೂಲಕ ದೇಹಕ್ಕೆ ಅವನ್ನು ವರ್ಗಾಯಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News