ಟಿ.ಎಂ.ಕಲೀಮುಲ್ಲಾ ಅಸಾದಿ
Update: 2016-04-23 18:48 IST
ಉಡುಪಿ, ಎ.23: ಶಿರ್ವದ ಟಿ.ಎಂ.ಕಲೀಮುಲ್ಲಾ ಅಸಾದಿ ಅಲ್ಪಕಾಲೀನ ಅಸೌಖ್ಯದಿಂದ ಗುರುವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು.
ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಕಲೀಮುಲ್ಲಾ, ಶಿರ್ವದ ಮಸ್ಜಿದೇ ಬಿಲಾಲ್‌ನ ಹಾಗೂ ಅರಬಿಕ್ ಶಾಲೆಯ ಅಧ್ಯಕ್ಷರಾಗಿ, ಉಡುಪಿ ಜಿಲ್ಲಾ ಜಮೀಯತುಲ್ ಫಲಾಹ್‌ನ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.
ಮೃತರು ಪತ್ನಿ, ಮೈಸೂರು ವಿಶ್ವವಿದ್ಯಾನಿಲಯದ ಅಧ್ಯಾಪಕರ ಸಂಘದ ಹಾಗೂ ರಾಜ್ಯಶಾಸ್ತ್ರ ವಿಭಾಗದ ಅಧ್ಯಕ್ಷ ಡಾ.ಮುಝಪ್ಫರ್ ಅಸಾದಿ ಸೇರಿದಂತೆ ಆರು ಮಂದಿ ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.