ತೂಕ ಇಳಿಸಿಕೊಳ್ಳಲು ಈ ಬೇಸಿಗೆಗಿಂತ ಒಳ್ಳೆಯ ಅವಕಾಶ ಇನ್ನಿಲ್ಲ!
ಬೇಸಗೆ ತೂಕ ಇಳಿಸಿಕೊಳ್ಳಲು ಉತ್ತಮ ಸಮಯ. ಏಕೆ ಎನ್ನುವುದನ್ನು ಇಲ್ಲಿ ತಿಳಿದುಕೊಳ್ಳಿ.
1. ಹವಾಮಾನದಿಂದಾಗಿ ನಿಮಗೆ ಹಸಿವಾಗುವುದಿಲ್ಲ
ಚಳಿಗಾಲದಲ್ಲಿ ನಾವು ಅತಿಯಾದ ಕ್ಯಾಲರಿ ಆಹಾರ ಬಯಸುತ್ತೇವೆ. ಆದರೆ ಬೇಸಗೆಯಲ್ಲಿ ಹೆಚ್ಚಾಗುತ್ತಿರುವ ತಾಪಮಾನ ನಮ್ಮ ಹಸಿವೆನ್ನು ಇಳಿಸುತ್ತೆ ಮತ್ತು ಘನ ಪದಾರ್ಥಗಳಿಗಿಂತ ಪಾನೀಯಗಳೇ ಹೆಚ್ಚು ಬೇಕಾಗಿರುತ್ತದೆ.
2. ವಾಸ್ತವ ತಿಳಿಸುತ್ತದೆ
ಬೇಸಗೆಯಲ್ಲಿ ಹೆಚ್ಚುವರಿ ಬಟ್ಟೆ ತೆಗೆದಾಗ ಉಬ್ಬಿದ ದೇಹ ಸ್ಪಷ್ಟವಾಗಿ ಕಾಣುತ್ತದೆ. ಹೀಗಾಗಿ ನಿಮ್ಮ ಪ್ರಿಯ ಉಡುಪುಗಳು ಹೆಚ್ಚು ಶೇಪ್‌ನಲ್ಲಿ ಇರುವಂತೆ ಪ್ರಯತ್ನಿಸಲು ಉತ್ತೇಜಿಸುತ್ತದೆ.
3. ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಖರೀದಿಸುವ ಸಮಯ
ಬೇಸಗೆಯಲ್ಲಿ ಬಹಳಷ್ಟು ಹಣ್ಣು ಮತ್ತು ತಾಜಾ ತರಕಾರಿಗಳು ಸಿಗುತ್ತವೆ. ಇವು ಕಡಿಮೆ ಕ್ಯಾಲರಿ ಇರುವುದರಿಂದ ಹೊಟ್ಟೆಗೂ ಹಗುರವಾಗಿರುತ್ತದೆ.
4. ವ್ಯಾಯಾಮಕ್ಕೆ ಹೆಚ್ಚು ಸಮಯ
ಬೇಸಗೆಯಲ್ಲಿ ದಿನ ಹೆಚ್ಚಾಗಿ ರಾತ್ರಿ ಕಡಿಮೆ ಇರುತ್ತದೆ. ಹೀಗಾಗಿ ಹೆಚ್ಚುವರಿ ಚಟುವಟಿಕೆಗಳಲ್ಲಿ ತೊಡಗಿರುತ್ತೀರಿ.
5. ಹೆಚ್ಚು ನೀರು ಕುಡಿಯಬೇಕು
ಬೇಸಗೆಯಲ್ಲಿ ನಾವು ಹೆಚ್ಚು ನೀರು ಕುಡಿಯುತ್ತೇವೆ. ಇದು ತೂಕ ಇಳಿಸಲು ನೆರವಾಗುತ್ತದೆ.
ಕೃಪೆ: http://www.indiatimes.com