ಕಣ್ಣಿನ ಆರೋಗ್ಯ ಹೆಚ್ಚಿಸಲು ಬಾಳೆ ಹಣ್ಣು

Update: 2016-04-25 05:40 GMT

ನಾವೆಲ್ಲರೂ ಹಣ್ಣುಗಳು ಆರೋಗ್ಯಕ್ಕೆ ಉತ್ತಮ ಎನ್ನುವುದನ್ನು ತಿಳಿದಿದ್ದೇವೆ. ಇವುಗಳು ನಮ್ಮನ್ನು ರೋಗಮುಕ್ತರನ್ನಾಗಿ ಇಡುತ್ತವೆ ಎನ್ನುವುದೂ ಗೊತ್ತು. ಆದರೆ ಯಾವ ಹಣ್ಣು ಆರಿಸಬೇಕು ಎನ್ನುವ ಗೊಂದಲ ಸದಾ ಇರುತ್ತದೆ.

ಆದರೆ ನಿರ್ದಿಷ್ಟ ಹಣ್ಣೆಂದೇನೂ ಇಲ್ಲ. ನಿಮಗೆ ಬೇಕಾದ ಹಣ್ಣನ್ನು ಸೇವಿಸಬಹುದು. ಏಕೆಂದರೆ ಪ್ರತಿ ಹಣ್ಣಿನಲ್ಲೂ ನಿರ್ದಿಷ್ಟ ಉತ್ತಮ ಗುಣಗಳಿರುತ್ತವೆ. ಇತ್ತೀಚೆಗೆ ಸಂಶೋಧಕರು ಬಾಳೆಹಣ್ಣನ್ನು ನಿತ್ಯ ಸೇವಿಸುವುದು ಕಣ್ಣುಗಳ ಆರೋಗ್ಯಕ್ಕೆ ಉತ್ತಮ ಎನ್ನುವುದನ್ನು ಕಂಡುಕೊಂಡಿದ್ದಾರೆ.

ಬಾಳೆಹಣ್ಣು ತಿನ್ನುವುದು ಕಣ್ಣಿನ ಆರೋಗ್ಯವನ್ನು ವೃದ್ಧಿಸುವುದು ಮಾತ್ರವಲ್ಲ, ನಮ್ಮಲ್ಲಿನ ಎಲ್ಲಾ ದೃಷ್ಠಿ ದೋಷಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನೂ ನಿವಾರಿಸುತ್ತದೆ. ಬಾಳೆಹಣ್ಣುಗಳಲ್ಲಿ ಕ್ಯಾರೊಟಿನಾಯ್ಡಾ ಇರುತ್ತದೆ. ತರಕಾರಿ ಮತ್ತು ಹಣ್ಣುಗಳಿಗೆ ಕೆಂಪು ಬಣ್ಣ, ಹಳದಿ, ಕಿತ್ತಳೆ ಬಣ್ಣ ಕೊಡುವ ಈ ಸಂಯುಕ್ತವು ವಿಟಮಿನ್ ಎ ಆಗಿ ಬದಲಾಗಿ ಕಣ್ಣಿನ ಆರೋಗ್ಯಕ್ಕೆ ಅಗತ್ಯವಾದುದನ್ನು ಕೊಡುತ್ತದೆ.

ಬಾಳೆಹಣ್ಣುಗಳನ್ನು ನಿತ್ಯವೂ ಸೇವಿಸುವುದು ಮನುಷ್ಯರಲ್ಲಿರುವ ವಿಟಮಿನ್ ಎ ಕೊರತೆಯ ಸಮಸ್ಯೆಗಳಿಗೆ ರಾಮಬಾಣವಾಗಲಿದೆ. ಹಾಗೆಯೇ ಕಣ್ಣಿನ ಆರೋಗ್ಯಕ್ಕೂ ಸಹ.

ಕೃಪೆ: http://zeenews.india.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News