ವ್ಯಾಯಾಮ ಇಲ್ಲದೆ ಜಾಗಿಂಗ್ ಮಾಡಿದರೆ ನಿಮ್ಮ ಮಂಡಿಗಳಿಗೆ ಹಾನಿ!
ಸೂಕ್ತ ವ್ಯಾಯಾಮಗಳಿಲ್ಲದೆ ಜಾಗಿಂಗ್ ಮಾಡುವುದರಿಂದ ಮಂಡಿಯ ಸಂಧಿಗಳಿಗೆ ಗಾಯವಾಗುವ ಸಾಧ್ಯತೆ ಇದೆ ಮತ್ತು ಧೀರ್ಘ ಕಾಲ ಸಮಸ್ಯೆ ಮುಂದುವರಿಯಬಹುದು ಎಂದು ಮಂಡಿ ತಜ್ಞರು ಹೇಳುತ್ತಾರೆ. ಜಾಗಿಂಗ್ ಮಾಡಲು ಬಯಸುವ ಯಾರೇ ಆದರೂ ಎರಡು ತಿಂಗಳು ನಡೆದು ಅಭ್ಯಾಸ ಮಾಡಬೇಕು. ಅದರಿಂದ ದೇಹವು ಸ್ವಲ್ಪ ಹಿಗ್ಗಿಕೊಳ್ಳುತ್ತದೆ ಮತ್ತು ಮಂಡಿ ಮೇಲಿನ ಹೊರೆ ಕಡಿಮೆಯಾಗುತ್ತದೆ.
ಬಹಳಷ್ಟು ಮಂದಿ ನೇರವಾಗಿ ಜಾಗಿಂಗ್ ಮಾಡಲು ಆರಂಭಿಸುತ್ತಾರೆ. ದೇಹದ ಕೊಬ್ಬು ಕಳೆಯುವುದು ಅವರ ಉದ್ದೇಶ. ಆದರೆ ವ್ಯಾಯಾಮದತ್ತ ಗಮನ ಹರಿಸುವುದಿಲ್ಲ. ಇದರಿಂದ ಮಂಡಿಗಳಿಗೆ ಗಂಭೀರ ಗಾಯವಾಗುತ್ತದೆ ಎಂದು ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮಂಡಿ ತಜ್ಞ ಪಲಶ್ ಗುಪ್ತಾ ಹೇಳಿದ್ದಾರೆ.
ಅಂತಹ ಪ್ರಕರಣಗಳು ಮಹಿಳೆಯರಲ್ಲಿ ಶೇ 70ರಷ್ಟಿರುತ್ತದೆ ಎಂದು ಅವರು ಹೇಳುತ್ತಾರೆ.
ಬಹುತೇಕ ಕೊಬ್ಬು ಕಳೆಯುವ ವ್ಯಾಯಾಮಗಳು ಮಂಡಿ ಮೇಲೆ ಪರಿಣಾಮ ಬೀರುತ್ತವೆ. ಮಂಡಿ ಮತ್ತು ಸಂಧಿಗಳ ನಡುವೆ ಗ್ಯಾಪ್ ತರುತ್ತವೆ. ರೋಗಿಗಳು ಸರ್ಜರಿ ಮೂಲಕ ಸೂಕ್ತ ಸಮಯದಲ್ಲಿ ಇದಕ್ಕೆ ಪರಿಹಾರ ಕಂಡುಕೊಳ್ಳದಿದ್ದರೆ ಸಮಸ್ಯೆ ಧೀರ್ಘಕಾಲ ಮುಂದುವರಿಯಲಿದೆ ಎಂದು ಗುಪ್ತಾ ಹೇಳಿದ್ದಾರೆ.
ಎಐಐಎಂಎಸ್‌ನ ಆರ್ಥೋಪೆಡಿಶನ್ ರಾಜೇಶ್ ಮಲ್ಹೋತ್ರ ಕೂಡ ಅವರ ಅಭಿಪ್ರಾಯ ಒಪ್ಪಿಕೊಳ್ಳುತ್ತಾರೆ. ಸಂಪೂರ್ಣ ದೇಹದ ತೂಕ ಮಂಡಿಗಳ ಮೇಲಿರುವ ಕಾರಣ ಧೀರ್ಘ ಕಾಲದ ಅದರ ಮೇಲೆ ಹೊರೆ ಬೀಳುವ ವ್ಯಾಯಾಮ ಮಾಡಬಾರದು. ಅಲ್ಲದೆ ಸಂಸ್ಕರಿತ ಆಹಾರದಿಂದ ಕೊಬ್ಬು ಅಧಿಕವಾಗುತ್ತದೆ ಎನ್ನುತ್ತಾರೆ ರಾಜೇಶ್.
ವ್ಯಕ್ತಿಯೊಬ್ಬ ಬೆಳಗಿನ ಜಾವ ನಿತ್ಯವೂ ನಡೆಯುವ ಅಭ್ಯಾಸ ಹೊಂದಿದ್ದರೆ ಅವರ ದೇಹವು ಫ್ಲೆಕ್ಸಿಬಲ್ ಆಗಿರುವ ಕಾರಣ ಜಾಗಿಂಗ್ ಸಂದರ್ಭದಲ್ಲಿ ಮಂಡಿ ಮೇಲೆ ಹೆಚ್ಚು ಹೊರೆ ಬೀಳುವುದಿಲ್ಲ. ಸೂಕ್ತ ವ್ಯಾಯಾಮವಿಲ್ಲದೆ ನೇರ ಜಾಗಿಂಗ್ ನೋವು ತರುವ ಜೊತೆಗೆ ವ್ಯಕ್ತಿಗೆ ನಡೆಯಲು ಕಷ್ಟವಾಗುತ್ತದೆ ಮತ್ತು ಪೌಷ್ಠಿಕಾಂಶದ ಕೊರತೆ ಮೂಳೆಗಳನ್ನು ದುರ್ಬಲಗೊಳಿಸುತ್ತದೆ ಎಂದು ಮಲ್ಹೋತ್ರ ಹೇಳಿದ್ದಾರೆ.
ಮೂಳೆ ಬದಲಿ ಅತಿಯಾದ ಪ್ರಕರಣಗಳಲ್ಲಿ ಮಾತ್ರ ಪರಿಹಾರವಾಗಿರುತ್ತದೆ. ಕಂಪ್ಯೂಟರ್ ನೇವಿಗೇಶನ್ ಕೂಡ ಮೂಳೆಗಳ ರೋಗ ಪತ್ತೆ ಹಚ್ಚಲು ಬಳಸಬಹುದು. ಪ್ರತಿಯೊಬ್ಬರು ಮೂಳೆಯ ಸಾಂದ್ರತೆಯನ್ನು ಪರೀಕ್ಷಿಸಬೇಕು. ಹಾಗೆ ಏನಾದರೂ ಆಕಾರದಲ್ಲಿ ಸಮಸ್ಯೆ ಇದ್ದರೆ ಅಥವಾ ಮಂಡಿಗಳಲ್ಲಿ ಸಮಸ್ಯೆ ಇದ್ದಲ್ಲಿ ಕಂಡುಕೊಳ್ಳಬಹುದು. ತಾಯಿಯ ಮೂಳೆಗಳು ದುರ್ಬಲವಾಗಿದ್ದರೆ ಮಕ್ಕಳ ಮೂಳೆಗಳೂ ದುರ್ಬಲವಾಗುತ್ತವೆ ಎನ್ನಲಾಗಿದೆ.
ಕೃಪೆ: http://food.ndtv.com