ಯು.ಟಿ. ಇದಿನಬ್ಬ
Update: 2016-04-26 19:48 IST
ಉಪ್ಪಿನಂಗಡಿ: ಹಿರಿಯ ವರ್ತಕ ಉಪ್ಪಿನಂಗಡಿಯ ಬ್ಯಾಂಕ್ ರಸ್ತೆ ನಿವಾಸಿ, ಫಾತಿಮಾ ಬಿಲ್ಡಿಂಗ್, ಟ್ರೇಡರ್ಸ್ ಮಾಲಕ ಯು.ಟಿ. ಇದಿನಬ್ಬ (76) ಅಲ್ಪ ಕಾಲದ ಅಸೌಖ್ಯದಿಂದ ಮಂಗಳವಾರ ನಿಧನರಾದರು.
ಇದಿನಬ್ಬರವರು ಕಳೆದ 50 ವರ್ಷಗಳಿಂದ ಉಪ್ಪಿನಂಗಡಿಯಲ್ಲಿ ಫಾತಿಮಾ ಟ್ರೇಡರ್ಸ್ ದಿನಸಿ ಅಂಗಡಿ ಹೊಂದಿದ್ದರು. ಉಪ್ಪಿನಂಗಡಿ ಕೇಂದ್ರ ಜುಮಾ ಮಸೀದಿಯ ಕಾರ್ಯದರ್ಶಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಸಾರ್ವಜನಿಕವಾಗಿ ಗುರುತಿಸಿಕೊಂಡಿದ್ದ ಅವರು "ಇದಿನಬ್ಬಾಕ" ಎಂದೇ ಚಿರಪರಿಚಿತರಾಗಿದ್ದರು.
ಮೃತರ ಮನೆಗೆ ಸ್ಥಳೀಯ ಜನಪ್ರತಿನಿಧಿಗಳು, ಉಪ್ಪಿನಂಗಡಿ ವರ್ತಕ ಸಂಘದ ಪದಾಧಿಕಾರಿಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು ಭೇಟಿ ನೀಡಿ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.
ಯು.ಟಿ. ಇದಿನಬ್ಬರವರು ಪತ್ನಿ ಶ್ರೀಮತಿ ಅಲೀಮಮ್ಮ, ಪುತ್ರಿಯರಾದ ಜೊಹರಾ, ಝೀನತ್, ಯು.ಟಿ. ಸಿರಾಜ್, ಯು.ಟಿ. ನೌಶಾದ್, ಯು.ಟಿ. ಇರ್ಷಾದ್‌ರನ್ನು ಅಗಲಿದ್ದಾರೆ.