ಬಿಸಿಲ ಬೇಗೆಯಿಂದ ಪಾರಾಗುವ ಚುಚ್ಚುಮದ್ದು ಮುಳ್ಳುಸೌತೆ!
ಬಿಸಿಲ ಧಗೆ ಹಾಗೂ ಉಷ್ಣಗಾಳಿ ದೇಶದ ಮೂರನೇ ಒಂದರಷ್ಟು ಜನರನ್ನು ಕಂಗೆಡಿಸಿದೆ. ಬಿಸಿಲ ಬೇಗೆಯಿಂದ ಬೆಂದ ಮಂದಿಗೆ ತಂಪು ನೀಡುವ ವಿಶಿಷ್ಟ ಶಕ್ತಿ ಮುಳ್ಳುಸೌತೆಗೆ ಇದೆ ಎಂದರೆ ನೀವು ನಂಬುತ್ತೀರಾ? ಬಿಸಿಲ ಬೇಗೆಯ ದುಷ್ಪರಿಣಾಮವನ್ನು ತಡೆಯುವ ಏಳು ಪ್ರಮುಖ ಗುಣಗಳು ಈ "ಮಾಂತ್ರಿಕ ಚುಚ್ಚುಮದ್ದಿ"ಗೆ ಇದೆ. ಪ್ರತಿ ಸಲಾಡ್‌ಗಳಲ್ಲೂ ಸ್ಥಾನ ಪಡೆಯುವ ಮುಳ್ಳುಸೌತೆ, ಬೇಸಿಗೆಯ ಬೇಗೆ ತಡೆಯಲು ಕೂಡಾ ದಿವ್ಯ ಔಷಧ. ಇದು ವಿಟಮಿನ್ ಕೆ, ವಿಟಮಿನ್ ಸಿ, ಮ್ಯಾಗ್ನೇಶಿಯಂ, ರಿಬೊಫ್ಲವಿನ್, ಬಿ-6, ಫೊಲಾಟೆ, ಪಂಥೋಥೆನಿಕ್ ಆಮ್ಲ, ಕ್ಯಾಲ್ಸಿಯಂ, ರಂಜಕ, ಸತು ಹಾಗೂ ಸಿಲಿಕಾದಂತ ವೈವಿಧ್ಯಮಯ ಅಂಶಗಳ ಆಗರ. ಈ ತರಕಾರಿ ಶೇಕಡ 95ರಷ್ಟು ನೀರಿನಿಂದ ಕೂಡಿದ್ದು, ಕಡಿಮೆ ಕ್ಯಾಲೋರಿ, ಕೊಬ್ಬು ಹಾಗೂ ಕೊಲೆಸ್ಟ್ರಾಲ್ ಹೊಂದಿದೆ. 100 ಗ್ರಾಂ ಮುಳ್ಳುಸೌತೆ ಸೇವಿಸಿದರೆ ಕೇವಲ 12 ಕ್ಯಾಲೋರಿ ಹೈಡ್ರೋಕಾರ್ಬನ್ ಮಾತ್ರ ಸೇವಿಸಿದಂತಾಗುತ್ತದೆ.
ಏಳು ಪ್ರಯೋಜನ
* ಇದು ದೇಹದಲ್ಲಿ ಅಲ್ಕಲೈನ್ ಉತ್ಫಾದಿಸುವ ಸಾಮರ್ಥ್ಯ ಹೊಂದಿದೆ.
ಅಸಿಡಿಟಿ ಸಮಸ್ಯೆ ಇದ್ದವರಿಗಂತೂ ಇದು ದಿವ್ಯ ಔಷಧ. ನೀವು ಆರೋಗ್ಯವಂತರಾಗಿರಬೇಕಾದರೆ ದೇಹ ಸ್ವಲ್ಪಪ್ರಮಾಣದಲ್ಲಿ ಕ್ಷಾರೀಯ ಅಂಶಗಳನ್ನು ಹೊಂದಿರಬೇಕು.
* ಉತ್ತಮ ಪ್ರಸಾದನ
ಮುಳ್ಳುಸೌತೆಯಲ್ಲಿ ತ್ವಚೆಗೆ ಕಾಂತಿ ನೀಡುವ ಗುಣವಿದ್ದು, ಇದು ಉತ್ತಮ ಪ್ರಸಾದನ ಅಂಶವಾಗಿಯೂ ಇದು ಜನಪ್ರಿಯ. ವಿವಿಧ ಬಗೆಯ ಚರ್ಮರೋಗ, ಕಡು ವರ್ತುಲ ಸಮಸ್ಯೆ, ಕಣ್ಣಿನ ಕೆಳಭಾಗದಲ್ಲಿ ಊತದಂಥ ಸಮಸ್ಯೆಗಳನ್ನೂ ಇದು ತಡೆಯುತ್ತದೆ.
* ಸಿಲಿಕಾ ಮೂಲ
ಸಿಲಿಕಾ ಎನ್ನುವುದು ಸೌಂದರ್ಯದ ಖನಿಜ. ಇದು ಪರಸ್ಪರ ಸಂಬಂಧ ಕಲ್ಪಿಸುವ ಕೋಶಗಳನ್ನು ಬಂಧಿಸುವ ವಿಶಿಷ್ಟ ಖನಿಜವಾಗಿದೆ. ಅಂದರೆ ನಮ್ಮ ದೇಹವನ್ನು ಹಿಡಿದಿಡುವಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ. ಈ ಅಂಶ ಮುಳ್ಳುಸೌತೆಯಲ್ಲಿ ಹೇರಳವಾಗಿದೆ.
* ಕೂದಲ ಬೆಳವಣಿಗೆ
ಸಿಲಿಕಾನ್ ಹಾಗೂ ಗಂಧಕ ಅಂಶ ಕೂದಲ ಬೆಳವಣಿಗೆಯನ್ನು ಪ್ರಚೋದಿಸುತ್ತದೆ. ಕೆಲ ಪುದಿನ ಸೊಪ್ಪು ಮತ್ತು ಕ್ಯಾರೆಟ್‌ನೊಂದಿಗೆ ಸೌತೆಕಾಯಿಯ ರಸ ಬಳಸಿದರೆ, ಕೂದಲು ಬೆಳೆಯುವ ಪ್ರಕ್ರಿಯೆಗೆ ಇದು ಪೂರಕವಾಗುತ್ತದೆ.
* ಸ್ವಚ್ಛತೆಗೆ ಸಹಕಾರಿ
ಇದರಲ್ಲಿ ನೀರಿನ ಅಂಶ ಅತ್ಯಧಿಕವಾಗಿರುವುದರಿಂದ ದೇಹದ ವಿಷಕಾರಿ ಅಂಶವನ್ನು ಮತ್ತು ತ್ಯಾಜ್ಯ ಅಂಶಗಳನ್ನು ದೇಹದಿಂದ ಹೊರಕ್ಕೆ ಹಾಕುವಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ. ದೇಹದಿಂದ ಯೂರಿಕ್ ಆಮ್ಲವನ್ನು ತೆಗೆದುಹಾಕಲು ಸಹಕರಿಸುತ್ತದೆ. ಇದರಿಂದ ಆರ್ಥರೈಟಿಸ್ ಹಾಗೂ ಕೀಲುನೋವು ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇದದರಲ್ಲಿನ ಮ್ಯಾಗ್ನೇಶಿಯಂ ಅಂಶ ನರಮಂಡಲವನ್ನು ಆರಾಮಗೊಳಿಸುತ್ತದೆ.
* ದೇಹತೂಕ ಕಳೆದುಕೊಳ್ಳಲು
ಇದರಲ್ಲಿ ಶೇಕಡ 95ರಷ್ಟು ನೀರಿನ ಅಂಶ ಇರುವುದರಿಂದು ಬೇಗ ಹೊಟ್ಟೆ ತುಂಬಿಸುತ್ತದೆ. ಒಂದು ಕಪ್ ಸೌತೆಕಾಯಿಯಲ್ಲಿ ಕೇವಲ 16 ಕ್ಯಾಲೋರಿ ಮಾತ್ರ ಇರುತ್ತದೆ. ಜತೆಗೆ ಅಧಿಕ ಪೋಷಕಾಂಶಗಳೂ ಇದರಲ್ಲಿವೆ.
* ಹೃದಯ ಆರೋಗ್ಯಕ್ಕೆ
ಸೌತೆಕಾಯಿಯಲ್ಲಿರುವ ಲಿಗ್‌ನಾನ್ಸ್ ಎಂಬ ಅಂಶ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಹೃದ್ರೋಗ ಸಾಧ್ಯತೆಯನ್ನೂ ಇದು ಕಡಿಮೆ ಮಾಡುತ್ತದೆ. ಉತ್ತಮ ರಕ್ತದ ಒತ್ತಡವನ್ನು ಕಾಪಾಡುವಲ್ಲಿ ಸೌತೆಕಾಯಿಯಲ್ಲಿನ ರಂಜನ ಹಾಗೂ ಮ್ಯಾಗ್ನೇಶಿಯಂ ಅಂಶಗಳು ಸಹಕಾರಿ.