×
Ad

Docoss X1 ಭಾರತದ ಅತ್ಯಂತ ಅಗ್ಗದ ಸ್ಮಾರ್ಟ್ ಫೋನ್ 888 ರೂ. ಗೆ !

Update: 2016-04-29 12:11 IST

ವಿಶ್ವದಲ್ಲೇ ಅತ್ಯಂತ ಅಗ್ಗದ ಸ್ಮಾರ್ಟ್ ಫೋನ್ ಎಂದು ಪ್ರಚಾರ ಪಡೆದು ರಿಂಗಿಂಗ್ ಬೆಲ್ ಕಂಪೆನಿಯ ಫ್ರೀಡಂ-251 ವಿವಾದದ ಸುಳಿಗೆ ಸಿಲುಕಿ ಹಾಕಿಕೊಂಡಿರುವುದು ಈಗ ಇತಿಹಾಸ. ಇದೀಗ ದೇಶದ ಅತ್ಯಂತ ಅಗ್ಗದ ಸ್ಮಾರ್ಟ್ ಫೋನ್ ಎನ್ನಲಾದ ಡೊಕೊಸ್-11 ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಇದರ ದರ ಕೇವಲ 888 ರೂಪಾಯಿ.

ಏಪ್ರಿಲ್ 29ರಂದು ರಾತ್ರಿ 10 ಗಂಟೆವರೆಗೂ ಇದಕ್ಕೆ ಬುಕಿಂಗ್ ಮಾಡಲು ಅವಕಾಶವಿದೆ. ಡೊಕೋಸ್-11 ಹ್ಯಾಂಡ್‌ಸೆಟ್‌ಗೆ ಮೊಬೈಲ್ ಸಂಖ್ಯೆ: 7666204430 ಅಥವಾ 9223222888ಗೆ ಎಸ್‌ಎಂಎಸ್ ಮೂಲಕವೂ ಬೇಡಿಕೆ ಸಲ್ಲಿಸಬಹುದು. ಗ್ರಾಹಕರು ಹೆಸರು, ವಿಳಾಸ, ನಗರ ಮತ್ತು ಅಂಚೆ ಕೋಡ್ ಎಸ್‌ಎಂಎಸ್ ಮಾಡಿದರೆ ಸಾಕು. ಈ ಸಂಖ್ಯೆಗೆ ಕರೆ ಮಾಡುವಂತಿಲ್ಲ ಎಂದು ಕಂಪೆನಿ ಸ್ಪಷ್ಟಪಡಿಸಿದೆ.

ಡೊಕೋಸ್ 11 ಸ್ಮಾರ್ಟ್‌ಫೋನ್ 4 ಇಂಚಿನ ಆಂಡ್ರಾಯ್ಡಾ ಸ್ಮಾರ್ಟ್‌ಫೋನ್ ಆಗಿದ್ದು, 1 ಜಿಬಿ ರ್ಯಾಮ್, 4 ಜಿಬಿ ಸ್ಟೋರೇಜ್ (32ಜಿಬಿಗೆ ವಿಸ್ತರಿಸಲು ಅವಕಾಶವಿದೆ) ಡ್ಯೂಯಲ್‌ಕೋರ್ ಪ್ರೊಸೆಸರ್, ಆಂಡ್ರಾಯ್ಡಾ 4.4 ಕಿಟ್‌ಕ್ಯಾಟ್, 2 ಮೆಗಾಪಿಕ್ಸೆಲ್ ಕ್ಯಾಮೆರಾ, 0.2 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ, 1300 ಎಂಎಎಚ್‌ನ ಲಘುತೂಕದ ಬ್ಯಾಟರಿ ಇದರಲ್ಲಿದೆ.

ಗ್ರಾಹಕರು ಹೇಗೆ ಬುಕ್ಕಿಂಗ್ ಮಾಡಬೇಕು ಎನ್ನುವ ಬಗ್ಗೆ ಮಾರ್ಗದರ್ಶನ ನೀಡುವ ಫೇಸ್‌ಬುಕ್ ಪೇಜ್ ಕೂಡಾ ಕಂಪೆನಿ ಹೆಸರಿನಲ್ಲಿದೆ. ಆದರೆ ಗೂಗಲ್‌ನಲ್ಲಿ ನೀವು ವೆಬ್‌ಕ್ಯಾಚ್ ಪೇಜ್‌ಗೆ ಹೋದರೆ ಈ ಸ್ಮಾರ್ಟ್ ಫೋನ್ ಬಗ್ಗೆ ಕೆಲ ಸಂದೇಹಗಳು ಮೂಡುತ್ತವೆ. ಕಂಪೆನಿಯ ವಿಳಾಸ 3ನೇ ಮಹಡಿ, ಹ್ಯಾಪಿ ಟವರ್, ಮಹಾರಾಣಿ ಫಾರ್ಮ್, ದುರ್ಗಾಪುರ, ಜೈಪುರ, ರಾಜಸ್ಥಾನ ಎಂದಿದೆ. ರಿಂಗಿಂಗ್ ಬೆಲ್ ಅನುಭವದ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಸೂಕ್ತ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News