ನೀವು ಹೊಟೇಲ್‌ನಿಂದ ಪಾರ್ಸೆಲ್ ತಂದ ಆಹಾರವನ್ನು ಮತ್ತೆ ಬಿಸಿ ಮಾಡುತ್ತೀರಾ?
ಹೊಟೇಲಿನ ಅಡುಗೆಯನ್ನು ಮನೆಗೆ ತೆಗೆದುಕೊಂಡು ಹೋಗಿ ಮರಳಿ ಬಿಸಿ ಮಾಡಿ ತಿನ್ನುವ ಅಭ್ಯಾಸ ನಮಗೆಲ್ಲರಿಗೂ ಇದೆ. ನಮ್ಮಲ್ಲಿ ಕೆಲವರು ಹೊಟೇಲಲ್ಲಿ ತಿಂದು ಉಳಿದದ್ದನ್ನೂ ಕಟ್ಟಿಸಿಕೊಂಡು ಮನೆಗೆ ಕೊಂಡು ಹೋಗಿ ತಿನ್ನುತ್ತೇವೆ. ಇಂಗ್ಲೆಂಡಿನಲ್ಲಿ ನಡೆದ ಸಮೀಕ್ಷೆಯ ಪ್ರಕಾರ ವಿಷಾಹಾರದ ಕಾರಣದಿಂದ ರೋಗಗಳಿಗೆ ತುತ್ತಾಗುವವರು ಕೆಲವು ಸರಳ ವಿಷಯಗಳನ್ನು ಮರೆಯುತ್ತಾರೆ.
ಆಹಾರವನ್ನು 82 ಸೆಲ್ಷಿಯಸ್ ಬಿಸಿ ಮಾಡುವ ಮೂಲಕ ಯಾವುದೇ ಹಾನಿಕರ ಬ್ಯಾಕ್ಟೀರಿಯ ಕೊಲ್ಲಬಹುದು ಎನ್ನುವುದು ಉದ್ದೇಶ. ಆದರೆ ಅಷ್ಟು ಸರಳವಲ್ಲ. ಹೊರಗೆ ಬಿಸಿಯಾಗಿದ್ದರೂ, ಒಳಗೆ ತಂಪಾಗೇ ಇರಬಹುದು ಮತ್ತು ಸಾಕಷ್ಟು ಬ್ಯಾಕ್ಟೀರಿಯ ಹುಟ್ಟಿರಬಹುದು. ಇದೇ ಕಾರಣಕ್ಕೆ ಆಹಾರ ಬಿಸಿ ಮಾಡುವಾಗ ಸೌಟು ಹಾಕಿ ಅಲುಗಾಡಿಸುತ್ತಿರಬೇಕು.
ಈ ಹಂತಗಳನ್ನು ಪಾಲಿಸಿದರೂ ಆಹಾರವನ್ನು ಒಂದು ಬಾರಿಗಿಂತ ಹೆಚ್ಚು ಸಲ ಬಿಸಿ ಮಾಡಬಾರದು. ಪ್ರತೀ ಬಾರಿ ತಂಪಾದಾಗ ಬ್ಯಾಕ್ಟೀರಿಯ ದ್ವಿಗುಣಗೊಂಡು ಮುಂದಿನ ಬಾರಿ ಅದನ್ನು ಕೊಲ್ಲಲು ಇನ್ನಷ್ಟು ಕಷ್ಟವಾಗುತ್ತದೆ. ಮೈಕ್ರೋವೇವ್ ಕೂಡ ವಿಫಲವಾಗಬಹುದು. ಮುಖ್ಯವಾಗಿ ಅನ್ನದ ವಿಷಯದಲ್ಲಿ ಇದು ನಿಜ. ಇದರಲ್ಲಿ ಬಾಸಿಲಸ್ ಸೆರೆಯಸ್ ಎನ್ನುವ ಬ್ಯಾಕ್ಟೀರಿಯ ಬೆಳೆಯುತ್ತದೆ. ಆಹಾರದಲ್ಲಿ ಅದು ವಿಷ ಬಿಡುತ್ತದೆ ಮತ್ತು ಅತಿಸಾರ ಮತ್ತು ವಾಂತಿಗೆ ಕಾರಣವಾಗುತ್ತದೆ. ನೀವು ಬಿಸಿ ಮಾಡಿ ಬ್ಯಾಕ್ಟೀರಿಯ ಕೊಂದರೂ ವಿಷ ಉಳಿದುಬಿಡುತ್ತದೆ. ಅನ್ನ ಬಿಸಿ ಮಾಡಿ ತಕ್ಷಣವೇ ತಂಪಾಗಿಸಬೇಕು. ಬ್ಯಾಕ್ಟೀರಿಯ ವಿಷ ಬಿಡುವ ಮುನ್ನ ಅದನ್ನು ರೆಫ್ರಿಜರೇಟರಲ್ಲಿ ಇಡಬೇಕು.
ಕೃಪೆ: www.bbc.com