ಇಂಗ್ಲೀಷ್‌ ಪ್ರೀಮಿಯರ್‌ ಲೀಗ್‌ನ 132 ವರ್ಷಗಳ ಇತಿಹಾಸದಲ್ಲಿ ಚೊಚ್ಚಲ ಕಿರೀಟ ಧರಿಸಿದ ಲೆಸ್ಟರ್ ಸಿಟಿ

Update: 2016-05-03 11:47 GMT


 ಲಂಡನ್, ಮೇ 3:  ಲೆಸ್ಟರ್ ಸಿಟಿ   ಇಂಗ್ಲೀಷ್‌ ಪ್ರೀಮಿಯರ್‌  ಲೀಗ್‌ನ 132 ವರ್ಷಗಳ ಇತಿಹಾಸದಲ್ಲಿ ಚೊಚ್ಚಲ  ಕಿರೀಟ ಧರಿಸಿದೆ.
ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ  ಟೊಟನ್ ಹಾಮ್ ಹಾಟ್ ಸ್ಟರ್ ಎಫ್ ಸಿ  ವಿರುದ್ಧ 2-2 ಡ್ರಾ ಸಾಧಿಸಿದ ಲೆಸ್ಟರ್ ಸಿಟಿ   ಮೊದಲ ಬಾರಿ ಕಿರೀಟ ಧರಿಸಿತು. ಈ ಐತಿಹಾಸಿಕ ವಿಜಯಕ್ಕೆ 41,545 ಮಂದಿ ಫುಟ್ಬಾಲ್‌ ಅಭಿಮಾನಿಗಳು ಸಾಕ್ಷಿಯಾದರು.
ಇಂಗ್ಲೆಂಡ್‌ನ ಗ್ಯಾರಿ ಕಾಹಿಲ್ (58ನೆ ನಿಮಿಷ) ಮತ್ತು ಬೆಲ್ಜಿಯಂನ ಸ್ಟ್ರೈಕರ್‌ ಈಡನ್‌ ಹಝಾರ್ಡ್‌ (83ನೆ ನಿಮಿಷ) ತಲಾ ಒಂದು ಗೋಲು ದಾಖಲಿಸಿ ತಂಡದ ಐತಿಹಾಸಿಕ ಸಾಧನೆಗೆ ನೆರವಾದರು.
ಟೊಟನ್ ಹಾಮ್ ಹಾಟ್ ಸ್ಟರ್  ಮೊದಲಾರ್ಧದಲ್ಲಿ  ಎರಡು ಗೋಲು ಗಳಿಸಿದ್ದರೂ, ಗೋಲು ಗಳಿಸಲು ಸಾಧ್ಯವಾಗದೆ ಹಿನ್ನಡೆ ಅನುಭವಿಸಿದ್ದ ಲೆಸ್ಟರ್ ಸಿಟಿ    ದ್ವಿತೀಯಾರ್ಧದಲ್ಲಿ ಎರಡು ಗೋಲು ಗಳಿಸಿ ಟ್ರೋಫಿ ಎತ್ತಿಕೊಂಡಿತು.
 35 ನೆ ನಿಮಿಷದಲ್ಲಿ ಇಂಗ್ಲೆಂಡ್‌ನ ಹ್ಯಾರಿ ಕೇನ್‌ ಗೋಲು ದಾಖಲಿಸಿ  ಟೊಟನ್ ಹಾಮ್ ಹಾಟ್ ಸ್ಟರ್ ತಂಡದ ಖಾತೆ ತೆರೆದಿದ್ದರು. 44ನೆ ನಿಮಿಷಲ್ಲಿ ದಕ್ಷಿಣ ಕೊರಿಯದ ಹಿಯಂಗ್‌ ಮಿನ್‌ ಸನ್‌ ಗೋಲು ಗಳಿಸಿ ತಂಡಕ್ಕೆ 2-0 ಮುನ್ನಡೆ ಸಾಧಿಸಲು ನೆರವಾದರು. ಆದರೆ ದ್ವಿತೀಯಾರ್ಧದಲ್ಲಿ ಚೆನ್ನಾಗಿ ಆಡಿದ  ಲೆಸ್ಟರ್   ಸಿಟಿ ತಂಡದ ಆಟಗಾರರು ಎರಡು ಗೋಲು ಕಬಳಿಸಿ ತಂಡಕ್ಕೆ ಯಶಸ್ಸು ತಂದುಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News