×
Ad

ಉಬೆರ್ ಕಪ್: ಅಂತಿಮ ಗ್ರೂಪ್ ಪಂದ್ಯದಲ್ಲಿ ಚೀನಾ ವಿರುದ್ದ ಭಾರತಕ್ಕೆ ಸೋಲು

Update: 2024-04-30 21:44 IST

ಶಾಂಘೈ: ಉಬೆರ್ ಕಪ್ ನಲ್ಲಿ ಮಂಗಳವಾರ ನಡೆದ ಅಂತಿಮ ಎ ಗುಂಪಿನ ಪಂದ್ಯದಲ್ಲಿ ಭಾರತದ ಮಹಿಳೆಯರ ಬ್ಯಾಡ್ಮಿಂಟನ್ ತಂಡ ಬಲಿಷ್ಠ ಚೀನಾ ತಂಡದ ವಿರುದ್ಧ 0-5 ಅಂತರದಿಂದ ಹೀನಾಯವಾಗಿ ಸೋತಿದೆ. ಯುವ ಆಟಗಾರ್ತಿ ಅನ್ಮೋಲ್ ಖರ್ಬ್ ಪಾದದ ನೋವಿನಿಂದಾಗಿ ಬ್ಯಾಡ್ಮಿಂಟನ್ ಅಂಗಣದಿಂದ ಕಣ್ಣೀರಿಡುತ್ತಾ ಹೊರ ನಡೆದಿದ್ದಾರೆ.

ಕೆನಡಾ ಹಾಗೂ ಸಿಂಗಾಪುರ ತಂಡಗಳ ವಿರುದ್ಧ ಸತತ ಗೆಲುವು ದಾಖಲಿಸಿ ಈಗಾಗಲೇ ಕ್ವಾರ್ಟರ್ ಫೈನಲ್ ತಲುಪಿರುವ ಭಾರತ ತಂಡದ ಅಶ್ಮಿತಾ ಚಲಿಹಾ 15 ಬಾರಿಯ ಚಾಂಪಿಯನ್ ಚೀನಾ ವಿರುದ್ಧ ಸ್ಪರ್ಧಿಸಿಲ್ಲ. ಡಬಲ್ ಒಲಿಂಪಿಯನ್ ಪಿ.ವಿ. ಸಿಂಧು ಕೂಡ ಪ್ರಸಕ್ತ ಟೂರ್ನಮೆಂಟ್ ನಿಂದ ಹೊರಗುಳಿದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News