ಅವಳಿ ಮಕ್ಕಳಾಗುವುದು ಹೇಗೆ ಗೊತ್ತೆ?

Update: 2016-05-03 10:43 GMT

ಅವಳಿಗಳು ಹೇಗಾಗುತ್ತಾರೆ ಎನ್ನುವುದನ್ನು ವಂಶವಾಹಿನಿಗಳ ಅಧ್ಯಯನದಿಂದ ತಿಳಿದಿದ್ದಾರೆ. ಪರಸ್ಪರರಿಂದ ಭಿನ್ನವಾಗಿರುವ ಅವಳಿಗಳು ಜನಿಸಲು ಕಾರಣವಾಗಿರುವ ಎರಡು ವಂಶವಾಹಿನಿಗಳನ್ನೂ ಅಧ್ಯಯನಕಾರರು ಗುರುತಿಸಿದ್ದಾರೆ. ಹಾರ್ಮೋನ್ ಉತ್ಪನ್ನ ಮತ್ತು ಸಂಸ್ಕರಣೆಗೆ ಸಂಬಂಧಿಸಿದ ಎರಡು ವಂಶವಾಹಿನಿಗಳು ಊಸೈಟ್ಸ್ ಪ್ರಬುದ್ಧವಾಗಲು ನೆರವಾಗುತ್ತವೆ.

ಅವಳಿಗಳಲ್ಲಿ ಪರಸ್ಪರರಲ್ಲಿ ಹೋಲಿಕೆ ಇರಲು ಕಾರಣವಾಗುವ ವಂಶವಾಹಿನಿಗಳನ್ನು ನಾವು ಗುರುತಿಸಿದ್ದೇವೆ ಎಂದು ಆಮ್‌ರ್ಸ್ಟಡಾಮ್‌ನ ವೃಜೆ ವಿಶ್ವವಿದ್ಯಾಲಯದ ಜೈವಿಕ ಮನಶ್ಶಾಸ್ತ್ರಜ್ಞ ಡಾರೆಟ್ ಬೂಮ್ಸ್ಮಾ ಅವರು ಹೇಳಿದ್ದಾರೆ.

ಅವಳಿಗಳು ಹುಟ್ಟಲು ಎರಡು ಕಾರಣಗಳಿವೆ. ಒಂದು ಪ್ರಕರಣದಲ್ಲಿ ಗರ್ಭಿಣಿಯ ಅಂಡಗಳು ಎರಡು ಮೊಟ್ಟೆಗಳನ್ನು ಸಂತತಿಯ ಸಂದರ್ಭದಲ್ಲಿ ಬಳಸುತ್ತದೆ. ಅವರೆಡೂ ಫಲಿತವಾಗಿ ಭ್ರೂಣವಾಗುತ್ತವೆ. ಇದರಿಂದಾಗಿ ಹೆತ್ತವರ (ಫ್ರಾಟರ್ನಲ್) ಹೋಲಿಕೆ ಇರುವ ಅಥವಾ ಪರಸ್ಪರರನ್ನು ಹೋಲಿಕೆಯಿಲ್ಲದ ಅವಳಿಗಳು ಹುಟ್ಟುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ ಹೋಲಿಕೆ ಇರುವ ಅವಳಿಗಳು ಹುಟ್ಟಬೇಕಾದರೆ ಒಂದು ಭ್ರೂಣವು ಬೆಳವಣಿಗೆಯ ಪ್ರಾಥಮಿಕ ಘಟ್ಟದಲ್ಲಿ ಎರಡಾಗಿ ವಿಭಜನೆಯಾಗಿರುತ್ತದೆ.

ಅತೀ ಅಪರೂಪದ ಸಂದರ್ಭದಲ್ಲಿ ಅತೀ ಅಸಹಜ ಅವಳಿಗಳು ಹುಟ್ಟಬಹುದು. ವೈದ್ಯರು ಅರೆ ಹೋಲಿಕೆ ಇರುವ ಅವಳಿಗಳನ್ನೂ ಕಂಡಿದ್ದಾರೆ. ಅವರು ಒಂದೇ ಮೊಟ್ಟೆಯಿಂದ ಹುಟ್ಟಿದರೂ, ಭಿನ್ನ ವೀರ್ಯಗಳಿಂದ ಫಲಿತಗೊಂಡಿರುತ್ತಾರೆ. ಹಾಗೇ ಅಮ್ಮಂದಿರು ಒಂದೇ ಹೋಲಿಕೆ ಇರುವ ತ್ರಿವಳಿ ಮತ್ತು ನಾಲ್ಕು ಮಕ್ಕಳನ್ನೂ ಹೆತ್ತದ್ದಿದೆ. ಕೆಲವು ಮಹಿಳೆಯರು ತಮ್ಮ ಕೌಟುಂಬಿಕೆ ಇತಿಹಾಸದಲ್ಲೇ ತಂದೆಯ ಹೋಲಿಕೆಯ ಅವಳಿಗಳನ್ನು ಮುಖ್ಯವಾಗಿ ತಮ್ಮ ಮಹಿಳಾ ಸಂಬಂಧಿಕರಲ್ಲಿ ಕಂಡಿದ್ದಿದೆ. ಇಲ್ಲಿ ವಂಶವಾಹಿನಿ ಕೆಲಸ ಮಾಡಿರುತ್ತದೆ. ಕೆಲವು ಜನಸಮುದಾಯದಲ್ಲಿ ಅವಳಿಗಳು ಸಾಮಾನ್ಯವಾಗಿರುತ್ತವೆ. ಪಶ್ಚಿಮ ಆಫ್ರಿಕಾದ ಯೊರುಬ ಜನಾಂಗ ಇದಕ್ಕೆ ಉದಾಹರಣೆ. ಆದರೆ ಏಷ್ಯಾದಲ್ಲಿ ಇದು ಕಡಿಮೆ. ವಯಸ್ಕ ಮಹಿಳೆಯರು ಮತ್ತು ಸಂತಾನೋತ್ಪತ್ತಿ ಚಿಕಿತ್ಸೆ ಪಡೆದುಕೊಂಡವರಿಗೆ ಅವಳಿಗಳಾಗುವ ಸಂಭವ ಹೆಚ್ಚು.

ಅವಳಿಗಳು ಹುಟ್ಟುವಲ್ಲಿ ವಂಶವಾಹಿನಿಯ ಯಾವ ಆವೃತ್ತಿ ಹೆಚ್ಚು ಕೆಲಸ ಮಾಡಿದೆ ಎಂದು ತಿಳಿದುಕೊಳ್ಳಲು ಬೂಮ್ಸ್ಮಾ ಮತ್ತು ಸಹೋದ್ಯೋಗಿಗಳು 1980 ಮಹಿಳೆಯರ ಜಿನೋಮ್‌ಗಳನ್ನು ವಿಶ್ಲೇಷಿಸಿದ್ದಾರೆ. ಇವೆರಲ್ಲರೂ ಆಕಸ್ಮಿಕವಾಗಿ ಫ್ರಾಟರ್ನಲ್ ಅವಳಿಗಳನ್ನು ಹೆತ್ತವರು. ಅವರನ್ನು ಏಕ ಮಗು ಹೆತ್ತ 12,953 ಮಹಿಳೆಯರಿಗೆ ಹೋಲಿಸಲಾಯಿತು. ಅವಳಿಗಳನ್ನು ಹೆತ್ತ ಮಹಿಳೆಯರಲ್ಲಿ ಕೆಲವು ಸಮಾನ ವಂಶವಾಹಿನಿಗಳನ್ನು ಗುರುತಿಸಲಾಗಿದೆ.

ಒಂದು ಪ್ರಾಂತದಲ್ಲಿ ಕಂಡ ಒಂದು ರೀತಿಯ FSHB ವಂಶವಾಹಿನಿಯಲ್ಲಿ ನಿರ್ದಿಷ್ಟ ಹಾರ್ಮೋನೊಂದು ಇದ್ದದ್ದು ತಿಳಿದಿದೆ. ಈ ಫಾಲಿಕಲ್ ಪ್ರಚೋದನಾ ಹಾರ್ಮೋನಿನಲ್ಲಿರುವ ರಾಸಾಯನಿಕವು ಮೊಟ್ಟೆಗಳು ಫಲಿತಗೊಳ್ಳಲು ನೆರವಾಗುತ್ತವೆ. ಇಂತಹ ವಂಶವಾಹಿನಿ ಹೆಚ್ಚಾಗಿದ್ದಾಗ ಸರಪಣಿಯೊಂದರಲ್ಲಿ ಪ್ರತೀ ಅಂಡಾಶಯಕ್ಕೊಂದರಂತೆ ಎರಡು ಮೊಟ್ಟೆಗಳ ಬದಲಾಗಿ ಹೆಚ್ಚು ಬಿಡುಗಡೆಯಾಗುತ್ತಿದ್ದವು.

ವಂಶವಾಹಿನಿಯು ಮತ್ತೊಂದು ವಂಶವಾಹಿನಿ SMAD3ಯಲ್ಲಿ ಸಾಮಾನ್ಯ ಮಟ್ಟದ FSHಗಳನ್ನು ಮಹಿಳೆಯರು ಉತ್ಪಾದಿಸಿದ್ದಾರೆ. ಆದರೆ ಹಾರ್ಮೋನಿಗೆ ಹೆಚ್ಚು ಸಂವೇದನೆ ಹೊಂದಿರುವ ಅಂಡಾಶಯ ಹೊಂದಿದ್ದಾರೆ. ಹೀಗಾಗಿ ತಿಂಗಳಿಗೆ ಎರಡು ಓಸೈಟ್ಸ್ ಬಿಡುಗಡೆಯಾಗುತ್ತಿದೆ.

ಇನ್ನೂ ಈ ಎರಡು ರೀತಿಯ ವಂಶವಾಹಿನಿಯ ಬಗ್ಗೆ ಹೆಚ್ಚು ಅಧ್ಯಯನವಾಗಿಲ್ಲ. ಇವು ಜೊತೆಯಾಗಿ ಅವಳಿಗಳಾಗುವ ಸಾಧ್ಯತೆಯನ್ನು ಶೇ 29ರಷ್ಟು ಮಾತ್ರ ಏರಿಸಲಿದೆ. ಅವಳಿಗಳು ಹುಟ್ಟಲು ಇನ್ನೂ ಹಲವು ಕಾರಣಗಳಿವೆ ಎಂದು ಅಧ್ಯಯನ ಹೇಳಿದೆ.

ಕೃಪೆ: www.foxnews.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News