×
Ad

ಎಚ್.ವಿಶ್ವನಾಥ್ ಕೃತಿ ‘ದಿ ಟಾಕಿಂಗ್ ಶಾಪ್’ ನಾಳೆ ಲೋಕಾರ್ಪಣೆ

Update: 2016-05-03 23:52 IST

ಬೆಂಗಳೂರು, ಮೇ 3: ಮಾಜಿ ಸಂಸದ ಅಡಗೂರು ಎಚ್.ವಿಶ್ವನಾಥ್ ಅವರ ‘ದಿ ಟಾಕಿಂಗ್ ಶಾಪ್’ ಕೃತಿಯ ಲೋಕಾರ್ಪಣೆ ಸಮಾರಂಭವನ್ನು ಮೇ 5ರಂದು ಬೆಳಗ್ಗೆ 10 ಗಂಟೆಗೆ ಇಲ್ಲಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದೆ.

 ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕೃತಿ ಬಿಡುಗಡೆಗೊಳಿಸಲಿದ್ದು, ವಿಧಾನಸಭಾ ಸ್ಪೀಕರ್ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ವೈ.ಎಸ್.ವಿ.ದತ್ತ, ಎಚ್.ಆರ್.ರಂಗನಾಥ್, ರವಿ ಬೆಳಗೆರೆ ಪಾಲ್ಗೊಳ್ಳಲಿದ್ದಾರೆ. ಕೃತಿಯ ಲೇಖಕ ಹಾಗೂ ಮಾಜಿ ಸಂಸದ ಅಡಗೂರು ಎಚ್.ವಿಶ್ವನಾಥ್ ಪ್ರಾಸ್ತಾವಿಕ ಮಾತುಗಳನ್ನು ಆಡಲಿದ್ದು, ಬಾಂಧವ್ಯ ಟ್ರಸ್ಟ್‌ನ ಡಾ.ಶುಭದಾ ಪ್ರಸಾದ್ ಪಾಲ್ಗೊಳ್ಳಲಿದ್ದಾರೆ ಎಂದು ಹಳ್ಳಿಹಕ್ಕಿ ಪ್ರಕಾಶನದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News