ಸ್ಪರ್ಧಾತ್ಮಕ ಪರೀಕ್ಷೆಯ ಕೀ ಉತ್ತರ ಪ್ರಕಟ
ಬೆಂಗಳೂರು, ಮೇ 3: ಕರ್ನಾಟಕ ಲೋಕಸೇವಾ ಆಯೋಗವು ಸರಕಾರದ ವಿವಿಧ ಇಲಾಖೆಗಳಲ್ಲಿನ ತಾಂತ್ರಿಕ, ತಾಂತ್ರಿಕೇತರ ಹುದ್ದೆಗಳು ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದಲ್ಲಿನ ಹುದ್ದೆಗಳಿಗೆ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆ, ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಗಳ ಕೀ ಉತ್ತರಗಳನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಆಯೋಗದ ವೆಬ್‌ಸೈಟ್ “http://kpsc.kar.nic.in/Key Answers”ನಲ್ಲಿ ಪ್ರಕಟಿಸಲಾಗಿದೆ. ಕೀ ಉತ್ತರಗಳ ಕುರಿತಂತೆ ಆಕ್ಷೇಪಣೆಗಳನ್ನು ಸಲ್ಲಿಸುವ ಅಭ್ಯರ್ಥಿಗಳು ಅದನ್ನು ಪುಷ್ಟೀಕರಿಸುವ ಆಧಾರಗಳುಳ್ಳ ಪುಸ್ತಕಗಳ ಹೆಸರು, ಲೇಖಕರ ಹೆಸರು, ಪ್ರಕಾಶನದ ಪ್ರತಿ, ವಿಷಯ, ಪ್ರಶ್ನೆ ಪುಸ್ತಿಕೆಯ ಶ್ರೇಣಿ, ಪ್ರಶ್ನೆ ಸಂಖ್ಯೆ ಇತ್ಯಾದಿ ವಿವರಗಳು ಹಾಗೂ ಪ್ರತಿ ಪ್ರಶ್ನೆಗೆ 50 ರೂ. ಶುಲ್ಕದೊಂದಿಗೆ (ಐಪಿಒ/ಡಿಡಿ ಮೂಲಕ) ಪರೀಕ್ಷಾ ನಿಯಂತ್ರಕರು, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು ಇವರಿಗೆ ಕೀ-ಉತ್ತರದೊಂದಿಗೆ ಪ್ರಕಟಿಸಿದ ನಮೂನೆಯಲ್ಲಿ ಮೇ.7 (ಕಚೇರಿ ವೇಳೆಯಲ್ಲಿ) ಲಿಖಿತ ಮನವಿಯ ಮೂಲಕ (ದ್ವಿಪ್ರತಿಯಲ್ಲಿ) ಸಲ್ಲಿಸಬಹುದಾಗಿದೆ. ನಂತರ ಬರುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.