ಅಪರಾಧ ತಡೆಗೆ ಕ್ಯಾಮರಾ

Update: 2016-05-03 18:27 GMT

ಬೆಂಗಳೂರು, ಮೇ 3: ಸಿಲಿಕಾನ್ ಸಿಟಿ ಬೆಂಗಳೂರು ವ್ಯಾಪ್ತಿಯಲ್ಲಿ ಸಂಭವಿಸಬಹುದಾದ ಕಾನೂನುಬಾಹಿರ ಕೃತ್ಯಗಳ ಮೇಲೆ ನಿಗಾ ವಹಿಸಲು ಸಿಟಿ ಸರ್ವೆಲೆನ್ಸ್ ಕ್ಯಾಮರಾ ವಿಭಾಗವನ್ನು ಸ್ಥಾಪಿಸಲಾಗಿದೆ.

ಹೊಸ ವಿಭಾಗದಲ್ಲಿ ನಗರದ ಮಧ್ಯಭಾಗದಲ್ಲಿನ 16 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 153 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಅದರಲ್ಲಿ 360 ಡಿಗ್ರಿ ಕ್ಯಾಮರಾಗಳು ಹಾಗೂ 129 ಐಪಿ ಬುಲೆಟ್ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 8ರಿಂದ 10 ಸಿಸಿಟಿವಿ ಕ್ಯಾಮರಾ ಕೆಲವು ಕಡೆ 12 ರಿಂದ 13 ಸಿಸಿಟಿವಿ ಕ್ಯಾಮರಾಗಳನ್ನು ಹಾಕಲಾಗಿದೆ. ಐಪಿ ಬುಲೆಟ್, ಸಿಪಿಝಡ್ ಕ್ಯಾಮರಾಗಳು ಹವಾಮಾನ ಕವಚವನ್ನು ಒಳಗೊಂಡಿವೆ. ನಗರ ಪೊಲೀಸ್ ನಿಯಂತ್ರಣ ಕೊಠಡಿಯ ಸಿಸಿಟಿವಿ ಕ್ಯಾಮರಾದ ದೃಶ್ಯವನ್ನು ಪ್ರತ್ಯೇಕ ಪರದೆಯಲ್ಲಿ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News