ಕ್ರಿಸ್ ಗೇಲ್ ಪತ್ರಕರ್ತೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದ ಪ್ರಕರಣ: ಗೇಲ್ ತಂಡಕ್ಕೆ ಮರಳುವ ಸೂಚನೆ ನೀಡಿದ ತಂಡದ ಕೋಚ್!

Update: 2016-05-05 05:09 GMT

ಮೆಲ್‌ಬೋನ್, ಮೇ 5: ವಿವಾದ ಮತ್ತು ಟೀಕೆಗೊಳಗಾಗಿದ್ದ ಜಗತ್ತಿನ ಅತ್ಯಂತ ಪ್ರಮುಖ ವಿಸ್ಫೋಟಕ ಬ್ಯಾಟ್ಸ್‌ಮ್ಯಾನ್ ವೆಸ್ಟ್‌ಇಂಡೀಸ್‌ನ ಕ್ರಿಸ್‌ಗೇಲ್‌ಗೆ ಸ್ವಲ್ಪ ಸಮಾಧಾನದ ನಿಟ್ಟುಸಿರು, ಆಸ್ಟ್ರೇಲಿಯದ ಬಿಗ್‌ಬ್ಯಾಶ್(ಬಿಬಿಎಲ್) ಟ್ವೆಂಟಿ-20 ಟೂರ್ನಿಯಲ್ಲಿ ದೊರಕಿದೆ. ಬಿಗ್‌ಬ್ಯಾಶ್‌ನಲ್ಲಿ ಅವರು ಆಡುತ್ತಿದ್ದ ಮೆಲ್‌ಬೋರ್ನ್ ರೆನೆಗೆಡ್ಸ್ ಟೀಮ್‌ಗೆ ಮರಳುವ ಬಗ್ಗೆ ಎದ್ದಿದ್ದ ಸಂದೇಹ ಈಗ ಬಹುತೇಕ ದೂರವಾಗಿದೆ ಎಂದು ವರದಿಗಳು ತಿಳಿಸಿವೆ. ರೆನೆಗೆಡ್ಸ್‌ನ ಕೋಚ್ ಡೇವಿಡ್ ಸಾಕೆರ್ ಬುಧವಾರ ಗೇಲ್ ಮಹಿಳಾ ಪತ್ರಕರ್ತೆಯೊಂದಿಗೆ ಆಡಿದ ಮಾತು ಖಂಡಿತಾ ತಪ್ಪಾದದ್ದು. ಆದರೆ ಈ ಕಾರಣದಿಂದ ತಂಡಕ್ಕೆ ಅವರು ಮರಳು ವಿಚಾರದಲ್ಲಿ ಪರಿಣಾಮವಾಗಬಹುದೆಂದು ನನಗನಿಸುತ್ತಿಲ್ಲ ಎಂದು ಹೇಳಿದ್ದಾರೆ.

ಕ್ರಿಸ್‌ಗೇಲ್ ಜನವರಿಯಲ್ಲಿ ಪಂದ್ಯದ ವೇಳೆ ಟೆನ್‌ನೆಟ್‌ವರ್ಕ್‌ನ ಮಹಿಳಾಪತ್ರಕರ್ತೆ ಮೆಕ್‌ಲಾಗಿನ ವಿರುದ್ಧ ವಿವಾದಸ್ಪದ ಮಾತುಗಳನ್ನಾಡಿದ್ದರು. ಡೋಂಟ್ ಬ್ಲಾಶ್ ಬೇಬಿ ಎಂದು ಕ್ರಿಕೆಟ್ ಜಗತ್ತಿನಲ್ಲಿ ಕೋಲಾಹಲಕ್ಕೆ ಕಾರಣರಾಗಿದ್ದರು. ಗೇಲ್ ಕ್ರಿಕೆಟ್ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಾರೆ ಮತ್ತು ಮಹಿಳಾ ಪತ್ರಕರ್ತೆಯೊಂದಿಗೆ ಸಂದರ್ಶನದ ವೇಳೆ ನಿಮ್ಮ ಕಣ್ಣುಗಳು ತುಂಬ ಸುಂದರವಾಗಿದೆ ಎಂದು ಮಿತಿ ಮೀರಿ ವರ್ತಿಸಿದ್ದಾರೆ. ಈ ಹೇಳಿಕೆಗಾಗಿ ಅವರಿಗೆ ಮೆಲ್‌ಬೋರ್ನ್ ಟೀಮ್ ಹತ್ತು ಸಾವಿರ ಡಾಲರ್ ದಂಡ ವಿಧಿಸಿತ್ತು. ನಂತರ ಈ ಘಟನೆಗಾಗಿ ಕ್ರಿಸ್‌ಗೇಲ್ ಕ್ಷಮೆ ಯಾಚಿಸಿದ್ದರು.

ತಾನು ಕೇವಲ ಆಟಗಾರರನ್ನು ಆಯ್ಕೆ ಮಾಡುತ್ತೇನೆ. ಇದರ ಬಗ್ಗೆ ಅಂತಿಮ ನಿರ್ಧಾರವನ್ನು ತಂಡದ ಪದಾಧಿಕಾರಿಗಳು ಕೈಗೊಳ್ಳುತ್ತಾರೆ. ಹಾಗೆಯೇ ಗೇಲ್ ಪ್ರಕರಣ ಈಗ ಹಳತಾಗಿದೆ ಎಂದು ಕೋಚ್ ಹೇಳಿದ್ದಾರೆ. ಕೋಚ್‌ರ ಈ ಅಭಿಪ್ರಾಯ ಗೇಲ್ ಮೆಲ್‌ಬೋರ್ನ್ ತಂಡಕ್ಕೆ ಮರಳುವ ಹಾದಿಯಲ್ಲಿ ಪೂರಕವಾಗಿ ವರ್ತಿಸಲಿದೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News