ಡ್ರೈವಿಂಗ್ ಮಾಡುವಾಗ FM ಕೇಳುವವರು ಇದನ್ನೊಮ್ಮೆ ಓದಿಕೊಳ್ಳಿ

Update: 2016-05-05 05:46 GMT

ರೇಡಿಯೋದಲ್ಲಿ ಸಾರಿಗೆ ವಿವರಗಳನ್ನು ಕೇಳುವುದು ನಿಮ್ಮ ಪ್ರಯಾಣಕ್ಕೆ ಅಪಾಯಕಾರಿಯಾಗಬಹುದು. ರಸ್ತೆಯಲ್ಲಿರುವ ಆನೆ ಕೂಡ ನಿಮಗೆ ಕಾಣದೆ ಹೋಗಬಹುದು. ರೇಡಿಯೋ ಕೇಳುವುದು ಅಥವಾ ಹ್ಯಾಂಡ್ಸ್‌ಫ್ರೀ ಬಳಸಿ ಫೋನಿನಲ್ಲಿ ಮಾತನಾಡುವುದು... ಹೀಗೆ ಚಾಲನೆಯಿಂದ ಗಮನವನ್ನು ಮತ್ತೊಂದೆಡೆಗೆ ಸರಿಸುವ ಯಾವುದೇ ಆಗಿದ್ದರೂ ಸಮಸ್ಯೆ ಸೃಷ್ಟಿಸಲಿದೆ ಎಂದು ಐರ್ಲೆಂಡಿನ ಕಾರ್ಕ್ ಯುನಿವರ್ಸಿಟಿ ಕಾಲೇಜಿನ ಸಂಶೋಧಕ ಜಿಲಿಯನ್ ಮರ್ಫಿ ಹೇಳಿದ್ದಾರೆ.

ಸಂಶೋಧಕ ಜನರ ಗಮನಕ್ಕೆ ಸಂಬಂಧಿಸಿದ ಪ್ರಮುಖ ಸಿದ್ಧಾಂತವೊಂದನ್ನು ಮುಂದಿಟ್ಟಿದ್ದಾರೆ. ಚಾಲನೆಯ ಸಂದರ್ಭದಲ್ಲಿ ಗಮನ ಅತೀ ಅಗತ್ಯ ಎಂದು ಪರ್ಸೆಪ್ಚುವಲ್ ಲೋಡ್ ಥಿಯರಿ ಎನ್ನುವ ಈ ಸಿದ್ಧಾಂತ ಹೇಳಿದೆ. ಚಾಲನೆಯಲ್ಲಿದ್ದಾಗ ರೇಡಿಯೋದಲ್ಲಿ ಸಾರಿಗೆ ವಿವರಗಳನ್ನು ಪಡೆಯುವುದು ತಪ್ಪೇ ಎನ್ನುವುದನ್ನು ತಿಳಿಯಲು ಮರ್ಫಿ 36 ಮಂದಿಯನ್ನು ಪ್ರಶ್ನಿಸಿದ್ದಾರೆ. ಚಾಲನೆಯಲ್ಲಿರುವಾಗಲೇ 18 ಮಂದಿಗೆ ಸರಳ ಕೆಲಸ ಮಾಡಲು ಹೇಳಲಾಯಿತು. 18 ಮಂದಿಗೆ ಕಷ್ಟ ಕೆಲಸ ಹೇಳಲಾಯಿತು. ಸರಳ ಕೆಲಸವೆಂದರೆ ಬದಲಾದ ಲಿಂಗದ ಬಗ್ಗೆ ವಿವರ ನೀಡುವ ಧ್ವನಿ. ಕಠಿಣ ಕೆಲಸವೆಂದರೆ ನಿರ್ದಿಷ್ಟ ರಸ್ತೆಯ ಸುದ್ದಿಗಳನ್ನು ಕೇಳುವುದು. ಕಠಿಣ ಕೆಲಸ ಮಾಡಿದ ಶೇ 23ರಷ್ಟು ಮಂದಿ ಚಾಲನೆಯ ಸಂದರ್ಭದಲ್ಲಿ ರಸ್ತೆ ಬದಿ ಗೊರಿಲ್ಲಾ ಅಥವ ಆನೆ ಇದ್ದರೂ ತಿಳಿಯದಷ್ಟು ಗಮನ ಹರಿಸಿದ್ದರು. ಅದಕ್ಕೆ ಬದಲಾಗಿ ಸರಳ ಕೆಲಸ ಮಾಡಿದವರಲ್ಲಿ ಶೇ 71ರಷ್ಟು ಚಾಲಕರು ಅವುಗಳತ್ತ ಗಮನ ಹರಿಸಿದ್ದರು. ಕಠಿಣ ಕೆಲಸ ಮಾಡಿದ ಚಾಲಕರು ರಸ್ತೆ ಚಿಹ್ನೆಯನ್ನೂ ಗಮನಿಸಲಿಲ್ಲ. ಯಾವ ವಾಹನ ತಮ್ಮನ್ನು ದಾಟಿ ಮುಂದೆ ಹೋಗಿದೆ ಎನ್ನುವ ವಿವರವೂ ಅವರಲ್ಲಿ ಇರಲಿಲ್ಲ. ಅವರ ವೇಗ, ಲೇನ್ ಪೊಸಿಷನ್ ಮತ್ತು ಪ್ರತಿಕ್ರಿಯೆಯ ಸಮಯ ಎಲ್ಲದರ ಮೇಲೂ ಪರಿಣಾಮ ಬೀರಿದೆ. ಈ ಅಧ್ಯಯನವನ್ನು ಬ್ರಿಟಿಷ್ ಸೈಕಲಾಜಿಕಲ್ ಸೊಸೈಟಿಯ ವಾರ್ಷಿಕ ಸಮ್ಮೇಳನದಲ್ಲಿ ಸಲ್ಲಿಸಲಾಗಿದೆ. ರಸ್ತೆ ಸುರಕ್ಷೆಯ ಅಭಿಯಾನಗಳು ನಮ್ಮ ಗಮನವನ್ನು ರಸ್ತೆಯ ಮೇಲಿಡಲು ಹೇಳುತ್ತದೆ. ಆದರೆ ಇಷ್ಟು ಸಾಲದು. ನಮ್ಮ ಮೆದುಳೂ ರಸ್ತೆಯ ಮೇಲಿರುವುದರತ್ತ ಗಮನ ಹರಿಸಬೇಕು ಎಂದು ಮರ್ಫಿ ಹೇಳಿದ್ದಾರೆ.

ಕೃಪೆ: indianexpress.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News