ಐಪಿಎಲ್‌: ಮುಂಬೈಗೆ ಶರಣಾದ ಆರ್‌ಸಿಬಿ

Update: 2016-05-11 18:44 GMT

  ಬೆಂಗಳೂರು, ಮೇ 11: ಅಂಬಟಿ ರಾಯುಡು (44),ಕೀರನ್ ಪೊಲಾರ್ಡ್(35) ಹಾಗೂ ಜೋಸ್ ಬಟ್ಲರ್(29) ಜವಾಬ್ದಾರಿಯುತ ಬ್ಯಾಟಿಂಗ್‌ನ ನೆರವಿನಿಂದ ಮುಂಬೈಇಂಡಿಯನ್ಸ್ ತಂಡ ಐಪಿಎಲ್‌ನ 41ನೆ ಪಂದ್ಯದಲ್ಲಿ ಆತಿಥೇಯ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು 6 ವಿಕೆಟ್‌ಗಳ ಅಂತರದಿಂದ ಮಣಿಸಿತು.

ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಗೆಲ್ಲಲು 152 ರನ್ ಸವಾಲು ಪಡೆದಿದ್ದ ಮುಂಬೈ ನಿಗದಿತ 18.4 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 153 ರನ್ ಗಳಿಸಿತು. ಮುಂಬೈ 2ನೆ ಓವರ್‌ನ ಮೊದಲ ಎಸೆತದಲ್ಲಿ ಆರಂಭಿಕ ದಾಂಡಿಗ ಪಾರ್ಥಿವ್ ಪಟೇಲ್(1)ರನ್ನು ಅಲ್ಪ ಮೊತ್ತಕ್ಕೆ ಕಳೆದುಕೊಂಡಿತು.

ಆಗ 2ನೆ ವಿಕೆಟ್‌ಗೆ 58 ರನ್ ಜೊತೆಯಾಟ ನಡೆಸಿದ ನಾಯಕ ರೋಹಿತ್ ಶರ್ಮ(25) ಹಾಗೂ ರಾಯುಡು ತಂಡವನ್ನು ಆಧರಿಸಿದರು. ರೋಹಿತ್ ಹಾಗು ರಾಣಾ  ಔಟಾದಾಗ ಜೊತೆಯಾದ ಪೊಲಾರ್ಡ್(35) ಹಾಗೂ ಬಟ್ಲರ್ (29) 5ನೆ ವಿಕೆಟ್ ಮುರಿಯದ ಜೊತೆಯಾಟದಲ್ಲಿ 55 ರನ್ ಸೇರಿಸಿ ಇನ್ನೂ 8 ಎಸೆತಗಳು ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸಿದರು. ಬೆಂಗಳೂರಿನ ಪರ ವರುಣ್ ಆ್ಯರೊನ್(2-37) ಯಶಸ್ವಿ ಬೌಲರ್ ಎನಿಸಿಕೊಂಡರು. 10ನೆ ಪಂದ್ಯದಲ್ಲಿ 6ನೆ ಸೋಲು ಅನುಭವಿಸಿರುವ ಬೆಂಗಳೂರು ಮುಂದಿನ ಸುತ್ತಿಗೇರಲು ಉಳಿದ ನಾಲ್ಕೂ ಪಂದ್ಯಗಳನ್ನು ಜಯಿಸಲೇಬೇಕಾಗಿದೆ.

ಆರ್‌ಸಿಬಿ 151/4: ಇದಕ್ಕೆ ಮೊದಲು ಲೋಕೇಶ್ ರಾಹುಲ್ ಬಾರಿಸಿದ ಅರ್ಧಶತಕದ(ಅಜೇಯ 68 ರನ್) ನೆರವಿನಿಂದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 4 ವಿಕೆಟ್‌ಗಳ ನಷ್ಟಕ್ಕೆ 151 ರನ್ ಗಳಿಸಿತು. ರಾಹುಲ್(68, 53 ಎಸೆತ, 3 ಬೌಂಡರಿ, 4 ಸಿಕ್ಸರ್) ಹಾಗೂ ಸಚಿನ್ ಬೇಬಿ(ಔಟಾಗದೆ 25) 5ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ ಕೇವಲ 27 ಎಸೆತಗಳಲ್ಲಿ 53 ರನ್ ಸೇರಿಸಿ ತಂಡವನ್ನು ಆಧರಿಸಿದರು.

ಕೀರನ್ ಪೋಲಾರ್ಡ್ 18ನೆ ಓವರ್‌ನಲ್ಲಿ 23 ರನ್ ನೀಡಿದರು. ರಾಹುಲ್ ಹಾಗೂಬೇಬಿ ವೆಸ್ಟ್‌ಇಂಡೀಸ್ ಆಟಗಾರ ಎಸೆದಿದ್ದ ಓವರ್‌ನಲ್ಲಿ 3 ಸಿಕ್ಸರ್ ಹಾಗೂ 1 ಬೌಂಡರಿ ಸಿಡಿಸಿದ್ದರು.

ಐಪಿಎಲ್‌ನಲ್ಲಿ ಶ್ರೇಷ್ಠ ಫಾರ್ಮ್‌ನ್ನು ಮುಂದುವರಿಸಿದ ರಾಹುಲ್ 42 ಎಸೆತಗಳಲ್ಲಿ ನಾಲ್ಕನೆ ಅರ್ಧಶತಕ ಬಾರಿಸಿದರು. ಬೆಂಗಳೂರು ಒಂದು ಹಂತದಲ್ಲಿ 15.3 ಓವರ್‌ಗಳಲ್ಲಿ 98 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ರಾಹುಲ್‌ರೊಂದಿಗೆ ಕೈಜೋಡಿಸಿದ ಸಚಿನ್ ಬೇಬಿ 13 ಎಸೆತಗಳಲ್ಲಿ ತಲಾ 2 ಸಿಕ್ಸರ್ ಹಾಗೂ ಬೌಂಡರಿಗಳ ಸಹಿತ ಔಟಾಗದೆ 25 ರನ್ ಗಳಿಸಿ ಉತ್ತಮ ಸಾಥ್ ನೀಡಿದರು.

ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಆರ್‌ಸಿಬಿಯ ಆರಂಭ ಅತ್ಯಂತ ಕಳಪೆಯಾಗಿತ್ತು. ನಾಯಕ ವಿರಾಟ್‌ಕೊಹ್ಲಿ 2ನೆ ಓವರ್‌ನ ಮೊದಲ ಎಸೆತದಲ್ಲೇ ಔಟಾದರು. ಕೇವಲ 5 ರನ್ ಗಳಿಸಿ ಟಿಮ್ ಸೌಥಿಗೆ ವಿಕೆಟ್ ಒಪ್ಪಿಸಿದ ಕ್ರಿಸ್ ಗೇಲ್ ಮತ್ತೆ ಲಭಿಸಿದ ಅವಕಾಶವನ್ನು ಬಳಸಿಕೊಳ್ಳಲು ವಿಫಲರಾದರು.

ಎಬಿ ಡಿವಿಲಿಯರ್ಸ್ 3ನೆ ವಿಕೆಟ್‌ಗೆ ರಾಹುಲ್‌ರೊಂದಿಗೆ 43 ರನ್ ಜೊತೆಯಾಟ ನಡೆಸಿದರು. 27 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ ಬೌಂಡರಿ ಬಾರಿಸಿದ್ದ ವಿಲಿಯರ್ಸ್ ಸ್ಪಿನ್ನರ್ ಕ್ರುನಾಲ್ ಪಾಂಡ್ಯಗೆ ವಿಕೆಟ್ ಒಪ್ಪಿಸಿ ನಿರಾಸೆಗೊಳಿಸಿದರು.

14 ಎಸೆತಗಳಲ್ಲಿ 15 ರನ್ ಗಳಿಸಿ ಕ್ರೀಸ್‌ನಲ್ಲಿ ನೆಲೆವೂರಲು ಯತ್ನಿಸುತ್ತಿದ್ದ ಆಸೀಸ್ ಆಲ್‌ರೌಂಡರ್ ವ್ಯಾಟ್ಸನ್‌ರನ್ನು ರೋಹಿತ್ ಶರ್ಮ ನೇರ ಎಸೆತದ ಮೂಲಕ ರನೌಟ್ ಮಾಡಿದರು. ವ್ಯಾಟ್ಸನ್ ಔಟಾಗುವ ಮೊದಲು ರಾಹುಲ್‌ರೊಂದಿಗೆ 4ನೆ ವಿಕೆಟ್‌ಗೆ 38 ರನ್ ಜೊತೆಯಾಟ ನಡೆಸಿದ್ದರು.

ಸ್ಕೋರ್ ವಿವರ

ರಾಯಲ್ ಚಾಲೆಂಜರ್ಸ್‌ ಬೆಂಗಳೂರು:

20 ಓವರ್‌ಗಳಲ್ಲಿ 151/4

ವಿರಾಟ್ ಕೊಹ್ಲಿ ಸಿ ಹರ್ಭಜನ್ ಬಿ ಮೆಕ್ಲಿನಘನ್ 07

ಕ್ರಿಸ್ ಗೇಲ್ ಸಿ ಶರ್ಮ ಬಿ ಸೌಥಿ 05

ಎಬಿಡಿ ವಿಲಿಯರ್ಸ್ ಸಿ ರಾಯುಡು ಬಿ ಪಾಂಡ್ಯ 24

ಕೆಎಲ್ ರಾಹುಲ್ ಔಟಾಗದೆ 68

ವ್ಯಾಟ್ಸನ ರನೌಟ್ 15

ಸಚಿನ್ ಬೇಬಿ ಔಟಾಗದೆ 25

ಇತರ 07

ವಿಕೆಟ್ ಪತನ: 1-8, 2-17, 3-60, 4-98

ಬೌಲಿಂಗ್ ವಿವರ:

ಟಿಮ್ ಸೌಥಿ 4-0-27-1

ಮೆಕ್ಲಿನಘನ್ 4-0-35-1

ಬುಮ್ರಾ 4-0-28-0

ಹಾರ್ದಿಕ್ ಪಾಂಡ್ಯ 4-0-15-1

ಹರ್ಭಜನ್ ಸಿಂಗ್ 3-0-19-0

 ಕೀರನ್ ಪೊಲಾರ್ಡ್ 1-0-22-0

ಮುಂಬೈ ಇಂಡಿಯನ್ಸ್: 18.4 ಓವರ್‌ಗಳಲ್ಲಿ 153/4

ರೋಹಿತ್ ಶರ್ಮ ಸಿ ವಿಲಿಯರ್ಸ್ ಬಿ ಆ್ಯರೊನ್ 25

ಪಾರ್ಥಿವ್ ಪಟೇಲ್ ಸಿ ವ್ಯಾಟ್ಸನ್ ಬಿ ಅರವಿಂದ್ 01

ರಾಯುಡು ಸಿ ವಿಲಿಯರ್ಸ್ ಬಿ ಆ್ಯರೊನ್ 44

ರಾಣಾ ಸಿ ಬಿನ್ನಿ ಬಿ ಚಾಹಲ್ 09

ಪೊಲಾರ್ಡ್ ಔಟಾಗದೆ 35

ಬಟ್ಲರ್ ಔಟಾಗದೆ 29

ಇತರ 10

ವಿಕೆಟ್ ಪತನ: 1-2, 2-60, 3-79, 4-98

ಬೌಲಿಂಗ್ ವಿವರ:

ಸ್ಟುವರ್ಟ್ ಬಿನ್ನಿ 1-0-2-0

ಎಸ್.ಅರವಿಂದ್ 4-0-23-1

ಜೋರ್ಡನ್ 3-0-37-0

ವ್ಯಾಟ್ಸನ್ 3-0-38-0

ಚಾಹಲ್ 4-0-16-1

ಆ್ಯರೊನ್ 3.4-0-37-2

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News