ಸಾವ್ನೆ ಮೊಂತೆರೊ
Update: 2016-05-14 20:38 IST
ಮಂಗಳೂರು, ಮೇ 14: ಮಂಗಲೋರಿಯನ್ ಅಂತರ್ಜಾಲ ತಾಣದ ವರದಿಗಾರ ವಾಮಂಜೂರು ಸಂತೋಷ್ ನಗರದ ಸಾವ್ನೆ ಮೊಂತೆರೊ (22) ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕಳೆದ ಮೂರು ವರ್ಷಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಸಾವ್ನೆ ಮೊಂತೆರೊ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ಚಿಕಿತ್ಸೆಗೆ ದಾಖಲಾಗಿದ್ದ ಸಾವ್ನೆ ಅವರಿಗೆ ಚಿಕಿತ್ಸೆಯ ಸಂದರ್ಭದಲ್ಲಿಯೆ ಸಿಡುಬು ರೋಗ ಕಾಣಿಸಿಕೊಂಡಿತ್ತು. ಶುಕ್ರವಾರದಂದು ರಾತ್ರಿ ಐದು ಬಾರಿ ಹೃದಯಾಘಾತವಾಗಿತ್ತು. ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದರು.
ಸಾವ್ನೆ ಮೊಂತೆರೋ ಬಿಎಸ್ಸಿ ಪದವೀದರರಾಗಿದ್ದರು. ಮೃತರು ತಂದೆ ,ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಸೋಮವಾರ ಸಂಜೆ 4 ಗಂಟೆಗೆ ವಾಮಂಜೂರು ಸೈಂಟ್ ಜೋಸೆಫ್ ಚರ್ಚ್‌ನಲ್ಲಿ ಪೂಜೆ ನೆರವೇರಿದ ನಂತರ ನಡೆಯಲಿದೆ.