×
Ad

ದೂಮ ಮಡಿವಾಳ

Update: 2016-05-14 20:44 IST

ಉಪ್ಪಿನಂಗಡಿ, ಮೇ 14: ಇಲ್ಲಿನ ನಟ್ಟಿಬೈಲು ದೂಜಮೂಲೆ ನಿವಾಸಿ ದೂಮ ಮಡಿವಾಳ (85) ಕೆಲ ದಿನಗಳ ಅನಾರೋಗ್ಯದಿಂದ ಮೇ 13ರಂದು ರಾತ್ರಿ ನಿಧನ ಹೊಂದಿದರು.

ದೂಮ ಮಡಿವಾಳರು ಉಪ್ಪಿನಂಗಡಿಯಲ್ಲಿ ಸುಧಾ ಲಾಂಡ್ರಿ ಹೊಂದಿದ್ದು, ಸುಮಾರು 40 ವರ್ಷಗಳ ಕಾಲ ಸೇವೆ ನೀಡಿ ಇತ್ತೀಚಿನ ಕೆಲ ವರ್ಷಗಳಿಂದ ವಿಶ್ರಾಂತಿ ಜೀವನ ನಡೆಸುತ್ತಿದ್ದರು.

ಮೃತರು ಉಪ್ಪಿನಂಗಡಿ ಅಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಸುರೇಶ್ ಮಡಿವಾಳ, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಶೇಖರ ಮಡಿವಾಳ, ದಿನೇಶ್ ಮಡಿವಾಳ ಸೇರಿದಂತೆ ಮೂವರು ಪುತ್ರರನ್ನು ಅಗಲಿದ್ದಾರೆ.

ಮೃತರ ಮನೆಗೆ ಜಿ.ಪಂ.ಸದಸ್ಯೆ ಶಯನಾ ಜಯಾನಂದ, ತಾ.ಪಂ. ಸದಸ್ಯೆ ಸುಜಾತ ಕೃಷ್ಣ, ಗ್ರಾ.ಪಂ. ಅಧ್ಯಕ್ಷ ಕೆ. ಅಬ್ದುರ್ರಹ್ಮಾನ್, ಸದಸ್ಯರುಗಳಾದ ಸುರೇಶ್ ಅತ್ರಮಜಲು, ಸುನಿಲ್ ದಡ್ಡು, ಗೋಪಾಲ ಹೆಗ್ಡೆ, ರಮೇಶ್ ಬಂಡಾರಿ, ಉಮೇಶ್ ಗೌಡ, ಭಾರತಿ, ಕವಿತಾ, ಜಿಪಂ. ಮಾಜಿ ಸದಸ್ಯ ಕೇಶವ ಗೌಡ, ಗ್ರಾಪಂ ಮಾಜಿ ಸದಸ್ಯರಾದ ಅಬ್ಬಾಸ್ ಬಸ್ತಿಕ್ಕಾರ್, ಜಯಂತ ಪೊರೋಳಿ ಮತ್ತಿತರ ಪ್ರಮುಖರು ಭೇಟಿ ನೀಡಿ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News