ಸಂತಸ ದುಬಾರಿಯಲ್ಲ, ಇಲ್ಲಿವೆ ಸರಳ ಸೂತ್ರಗಳು

Update: 2016-05-17 05:34 GMT

ಜೀವನ ಹೂವಿನ ಹಾಸಿಗೆಯಲ್ಲ ಎಂದು ಹಲವರು ಹೇಳುತ್ತಾರೆ. ಅದು ನಿಜ. ಜೀವನದಲ್ಲಿ ಎಲ್ಲವೂ ಸಂತಸದಿಂದಲೇ ನಡೆಯುವುದಿಲ್ಲ. ಜನರು ಹಲವು ಕಷ್ಟಗಳನ್ನು ಅನುಭವಿಸುತ್ತಾರೆ. ಉತ್ತಮ ಗುಲಾಬಿಗಳನ್ನು ಹೆಕ್ಕಬೇಕೆಂದರೆ ಮುಳ್ಳುಗಳೂ ತಾಗುತ್ತವೆ. ಒಟ್ಟಾರೆ ಅಂತಿಮವಾಗಿ ಕೈಯಲ್ಲಿ ಸುಂದರ ಗುಲಾಬಿ ಇರುತ್ತದೆ. ಸಂತೋಷ ಎನ್ನುವುದು ನಮ್ಮ ಮನಸ್ಸಿಗೆ ಸಂಬಂಧಿಸಿದೆ. ನಾವು ಮಾಡುವ ಆಯ್ಕೆಗಳಲ್ಲಿ ಅದು ಇರುತ್ತದೆಯೇ ವಿನಾ ಏಕಾಏಕಿ ಅದು ಸಿಗುವುದಿಲ್ಲ.

ಈ ವೆಬ್ ಪೋಸ್ಟಲ್ಲಿ ನಾವು ಸಂತೋಷದ ಕೆಲವು ಅಂಶಗಳನ್ನು ನೋಡೋಣ. ಜೀವನದಲ್ಲಿ ನೀವು ಸಂತೋಷದಿಂದ ಇದ್ದೆ ನಿಮ್ಮಲ್ಲಿ ಇದು ಇದ್ದೇ ಇರುತ್ತದೆ.

ಚಿಂತೆ ಮಾಡುವುದು ಬಿಡಿ

ಸತತ ಚಿಂತೆಯಿಂದ ಸಮಸ್ಯೆಗಳು ಪರಿಹಾರವಾಗದು. ಬದಲಾಗಿ ಶಾಂತಿಯುತವಾಗಿ ಪರಿಹಾರ ಹುಡುಕಿ. ಗುರಿಯ ಕಡೆಗೆ ಕೇಂದ್ರೀಕೃತ ಮನಸ್ಸು ಸಮಸ್ಯೆ ಪರಿಹಾರ ಮಾಡುತ್ತದೆ.

ಜನರನ್ನು ಇದ್ದ ಹಾಗೇ ಸ್ವೀಕರಿಸುವುದು

ಸಂತೋಷದಿಂದ ಇರಲು ಮನಸ್ಸಿನಲ್ಲಿ ನೆಮ್ಮದಿ ಬೇಕು. ವಾಸ್ತವವನ್ನು ಹಾಗೇ ಸ್ವೀಕರಿಸಿದಾಗ ಖುಷಿಯಾಗಿರುತ್ತೀರಿ. ಜೀವನ ಬಂದ ಹಾಗೇ ಸ್ವೀಕರಿಸಿ.

ನಿಮ್ಮಲ್ಲಿರುವುದಕ್ಕೆ ಖುಷಿ ಪಡಿ

ಕೊರಗುವುದು ಬಿಡಿ. ನೀವು ಬಯಸಿದಷ್ಟು ಶ್ರೀಮಂತಿಕೆ ಇಲ್ಲ ಎಂದು ಅಸಂತುಷ್ಟಿ ಇರಬಹುದು. ಆದರೆ ಜಗತ್ತಿನಲ್ಲಿ ಬಹಳಷ್ಟು ಮಂದಿಗೆ ಜೀವನಕ್ಕೆ ಅಗತ್ಯವಾದ ವಸ್ತುಗಳೇ ಕೈಗೆಟಕುವುದಿಲ್ಲ ಎನ್ನುವುದು ನೆನಪಿಡಿ.

ಪ್ರಸ್ತುತದಲ್ಲಿ ಬದುಕಿ

ಹಿಂದಿನ ನೋವನ್ನು ಮರೆಯಿರಿ. ಮತ್ತೆ ಇತಿಹಾಸಕ್ಕೆ ತೆರಳಿ ಆಗಿ ಹೋಗಿದ್ದನ್ನು ಬದಲಿಸಲು ಸಾಧ್ಯವಿಲ್ಲ. ಭವಿಷ್ಯದ ಬಗ್ಗೆ ಯೋಚಿಸಬೇಡಿ. ನಿಮ್ಮಲ್ಲಿ ಏನು ಇದೆ ಎಂದು ನಿಮಗೆ ಗೊತ್ತಿಲ್ಲ. ಪ್ರಸ್ತುತ ಸ್ಥಿತಿ ಹೇಗಿದೆಯೋ ಹಾಗೆ ಜೀವಿಸಿ.

ಕ್ಷಮಿಸಿ ಮತ್ತು ಮುಂದೆ ಸಾಗಿ

ನಿಮ್ಮನ್ನು ನೋಯಿಸಿದವರನ್ನು ಕ್ಷಮಿಸಿ. ಹೃದಯದಲ್ಲಿ ಅಪ್ಯಾಯಮಾನತೆ ಮೂಡಿಸಿಕೊಳ್ಳಿ ಮತ್ತು ಹಿಂದಿನ ಹತಾಶೆಗಳನ್ನು ಮರೆತುಬಿಡಿ. ಸಿಟ್ಟು ಇಟ್ಟುಕೊಂಡು ಧ್ವೇಷ ಕಾರುವುದು ಅಥವಾ ಕೋಪದಿಂದ ನಿಮಗೇ ನಷ್ಟವಾಗಲಿದೆ.

ಕೃಪೆ:zeenews.india.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News