ಎಣ್ಣೆ ಮಸಾಲೆಯುಕ್ತ ಆಹಾರ ಪ್ರಿಯರಿಗೆ ಶುಭ ಸುದ್ದಿ

Update: 2016-05-17 06:19 GMT

ಚೋಲೆ ಬಟೂರೆ ಎಲ್ಲರೂ ತಿಂದೇ ಇರುತ್ತೇವೆ. ದೊಡ್ಡದಾಗಿ ಮಾಡಿದ ಪೂರಿ ಮತ್ತು ಅದಕ್ಕೆ ಕಡಲೆ ಕಾಳು ಸಾರು ಹಾಕಿ ತಿನ್ನುವುದೇ ಚೋಲೆ ಬಟೂರೆ. ಇದನ್ನು ತಟ್ಟೆಯಲ್ಲಿಟ್ಟು ತಿನ್ನುವುದು ಎಷ್ಟು ಮಜಾ ಕೊಡುತ್ತದೋ, ಅಷ್ಟೇ ಪಶ್ಚಾತ್ತಾಪ ಆಮೇಲೆ ಆಗುತ್ತದೆ. ಏಕೆಂದರೆ ಇದರಿಂದ ನಾವು ಬಹಳ ಕೊಬ್ಬನ್ನು ದೇಹಕ್ಕೆ ಸೇರಿಸಿಕೊಳ್ಳುತ್ತೇವೆ. ಕೆಲವರು ಪೂರಿಯ ಸುತ್ತ ಇರುವ ಎಣ್ಣೆಯನ್ನು ಟಿಶ್ಯೂ ಹಿಡಿದು ಒರೆಸುತ್ತಾರೆ. ನಮ್ಮಲ್ಲಿ ಪ್ರತಿಯೊಬ್ಬರೂ ಚೋಲೆ ಬಟೂರೆ ತಿಂದ ಮೇಲೆ ಕೊಬ್ಬಿಗಾಗಿ ಪರಿತಪಿಸಿಯೇ ಇರುತ್ತೇವೆ. ಆದರೆ ನಮ್ಮ ನಿತ್ಯದ ಆಹಾರದಿಂದ ಹೀಗೆ ಸಾಕಷ್ಟು ಎಣ್ಣೆ ದೇಹಕ್ಕೆ ಹೋಗುತ್ತದೆ. ರುಚಿಕರ ಆಹಾರ ಸೇವಿಸಬೇಕೆಂದರೆ ಎಣ್ಣೆ ಬಿಡಲು ಸಾಧ್ಯವಿಲ್ಲದ ಪರಿಸ್ಥಿತಿ.

ಆದರೆ ಹೀಗೆ ಪಕೋಡ, ಪೂರಿ ತಿನ್ನುವಾಗ ಸಿಗುವ ಹೆಚ್ಚುವರಿ ಎಣ್ಣೆಯನ್ನು ಜಾದೂ ರೀತಿಯಲ್ಲಿ ಆಹಾರದಿಂದ ತೆಗೆಯುವ ತಂತ್ರಜ್ಞಾನ ಬಂದರೆ? ಹೌದು, ನಿಮ್ಮ ಆಹಾರವನ್ನು ಈ ತಟ್ಟೆಯ ಮೇಲಿಡಿ. ಅದು ಹೆಚ್ಚುವರಿ ಎಣ್ಣೆಯನ್ನೆಲ್ಲ ಹೀರಿಬಿಡುತ್ತದೆ. ಆ ಮೂಲಕ ಅನಾರೋಗ್ಯಕರ ಎಂದು ನಮಗೆ ಅನಿಸಿದ್ದ ಆಹಾರವನ್ನೂ ಆರೋಗ್ಯಕರವಾಗಿಸುತ್ತದೆ. ಸದ್ಯಕ್ಕೆ ಈ ಕ್ರಾಂತಿ ನಡೆಯುತ್ತಿರುವುದು ಥಾಯ್ಲಂಡ್ ದೇಶದಲ್ಲಿ. ಥಾಯ್ಲಂಡ್ ಈಗಷ್ಟೇ ತನ್ನ ಹೊಸ ಅಬ್ಸಾರ್ಬ್ ಪ್ಲೇಟನ್ನು ಪಡೆದುಕೊಂಡಿದೆ. ಥಾಯ್ ಜಾಹೀರಾತು ಸಂಸ್ಥೆಯಾದ ಬಿಬಿಡಿಒ ಈ ಎಣ್ಣೆ ಹೀರಲು 500 ತೂತುಗಳಿರುವ ವಿಶಿಷ್ಟ ತಟ್ಟೆಯನ್ನು ವಿನ್ಯಾಸಗೊಳಿಸಿದೆ. ಥಾಯ್ ಆರೋಗ್ಯ ಫೌಂಡೇಶನ್ ಥಾಯ್ಲಂಡಲ್ಲಿ ಬೊಜ್ಜು ಹೆಚ್ಚಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲೇ ಈ ತಟ್ಟೆ ಬಂದಿದೆ.

ಥಾಯ್ ಆಹಾರವನ್ನು ಸೇವಿಸದೆ ಇರಲು ಸಾಧ್ಯವೇ ಆಗುವುದಿಲ್ಲ. ಆದರೆ ಅದರಲ್ಲಿ ಎಣ್ಣೆ ಅಂಶ ಹೆಚ್ಚಾಗಿಯೇ ಇರುತ್ತದೆ. ಈಗ ಕ್ರಾಂತಿಕಾರಿ ತಟ್ಟೆಯು ವಿಶಿಷ್ಟ ವಿನ್ಯಾಸದಲ್ಲಿ ಬಂದಿದೆ. ಆರೋಗ್ಯ ಫೌಂಡೇಶನ್ ಪ್ರಕಾರ ತಟ್ಟೆಯು ಸುಮಾರು 30 ಕ್ಯಾಲರಿಗಳಷ್ಟು ಎಣ್ಣೆಯನ್ನು ಹೀರಿಕೊಳ್ಳಲಿದೆ.

ಈ ತಟ್ಟೆಯು ಆಹಾರವನ್ನು ಸಂಪೂರ್ಣ ಆರೋಗ್ಯಕರವಾಗಿಸುತ್ತದೆ ಎಂದು ಹೇಳಲಾಗದು. ಆದರೆ ಹೆಚ್ಚು ಎಣ್ಣೆ ತಿಂದ ಪರಿತಾಪವನ್ನು ದೂರ ಮಾಡಲಿದೆ. ಬೊಜ್ಜು ಬಿಕ್ಕಟ್ಟಿನ ಥಾಯ್ಲಂಡಲ್ಲಿ ಇದು ಬಹಳ ಉಪಯುಕ್ತ ವಸ್ತುವೇ. ಆಗ್ನೇಯ ಏಷ್ಯಾದಲ್ಲಿಯೇ ಅತೀ ಹೆಚ್ಚು ಬೊಜ್ಜಿನ ಸಮಸ್ಯೆ ಇರುವ ದೇಶ ಥಾಯ್ಲಂಡ್. ಹೀಗಾಗಿ ಅಬ್ಸಾರ್ಬ್‌ಪ್ಲೇಟ್ ಅಲ್ಲಿಗೆ ಪರಿಪೂರ್ಣ ಉತ್ಪ್ನ ಎನ್ನುವುದರಲ್ಲಿ ಸಂಶಯವಿಲ್ಲ.

Full View

ಕೃಪೆ: food.ndtv.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News