×
Ad

ಡಾ.ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿಗೆ ಜಿ.ಪಿ.ಬಸವರಾಜು ‘ಬೆತ್ತಲೆಯ ಬೆಳಕನುಟ್ಟು’ ಕೃತಿ ಆಯ್ಕೆ

Update: 2016-05-17 23:40 IST

ಬೆಂಗಳೂರು, ಮೇ 17: ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದಿಂದ ನೀಡುವ ಪ್ರತಿಷ್ಠಿತ ಕಥಾ ಸಂಕಲನ ಪ್ರಶಸ್ತಿಯ 2015ನೆ ಸಾಲಿಗೆ ಹಿರಿಯ ಪತ್ರಕರ್ತ ಮತ್ತು ಸಾಹಿತಿ ಜಿ.ಪಿ.ಬಸವರಾಜು ಅವರ ‘ಬೆತ್ತಲೆಯ ಬೆಳಕನುಟ್ಟು’ ಕಥಾ ಸಂಕಲನ ಆಯ್ಕೆಯಾಗಿದೆ.

ಕವಿ, ವಿಮರ್ಶಕರಾದ ಡಾ.ವಿಕ್ರಮ್ ವಿಸಾಜಿ, ಪ್ರಾಧ್ಯಾಪಕರಾದ ಡಾ. ತಾರಿಣಿ ಶುಭದಾಯಿನಿ ಮತ್ತು ನಾಟಕಕಾರ ಡಾ.ಕೆ.ವೈ.ನಾರಾಯಣಸ್ವಾಮಿ ಅವರಿಗಳಿದ್ದ ತೀರ್ಪು ಸಮಿತಿ ‘ಬೆತ್ತಲೆಯ ಬೆಳಕನುಟ್ಟು’ ಕೃತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಿದೆ.

ಈ ಪ್ರಶಸ್ತಿಯು 25 ಸಾವಿರ ರೂ. ನಗದು ಬಹುಮಾನ, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಪ್ರಶಸ್ತಿಯನ್ನು ಜೂ.11 ರಂದು ಮಂಡ್ಯದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತದೆ. ಹಿರಿಯ ಸಂಶೋಧಕ ಪ್ರೊ.ಶೆಟ್ಟರ್ ಮತ್ತು ಸಾಹಿತಿ ದೇವನೂರ ಮಹಾದೇವ ಅತಿಥಿಗಳಾಗಿ ಭಾಗವಹಿಸುತ್ತಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ಕೆ.ಪುಟ್ಟಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News