ಪ್ರತೀ ಊಟದ ನಂತರ ಬ್ರಶ್ ಮಾಡುವವರು ಇದನ್ನು ಓದಿ

Update: 2016-05-20 11:46 GMT

ನಿಮ್ಮ ಹಲ್ಲುಗಳನ್ನು ಬ್ರಶ್ ಮಾಡುವುದು ಯೋಚನೆಯೇ ಮಾಡದಷ್ಟು ಸಾಮಾನ್ಯ ಕೆಲಸ. ಎಷ್ಟು ಸಲ ಮಾಡುತ್ತೀರಿ ಎನ್ನುವ ಸಂಖ್ಯೆಯೂ ನಿಮಗೆ ನೆನಪಿರದು. ಕೆಲವರಂತೂ ತಮ್ಮ ದಂತದ ಆರೋಗ್ಯವನ್ನು ಗಂಭೀರವಾಗಿ ಪರಿಗಣಿಸಿ ಪ್ರತೀ ಆಹಾರ ಸೇವನೆಯ ನಂತರವೂ ಬ್ರಶ್ ಮಾಡುತ್ತಾರೆ? ಇದು ನಿಜಕ್ಕೂ ಅಗತ್ಯವೆ?

ತಜ್ಞರು ಹೇಳುವ ಪ್ರಕಾರ ಅತಿಯಾದ ಬ್ರಷಿಂಗ್ ಕೆಟ್ಟದನ್ನೇ ಮಾಡಲಿದೆ. ಕಾಫಿ ಕುಡಿದ ಕೂಡಲೇ ಅಥವಾ ಊಟ ಮಾಡಿದ ಕೂಡಲೇ ಬ್ರಶ್ ಮಾಡಿದರೆ ಹಲ್ಲಿಗೆ ಹಾನಿಯಾಗಲಿದೆ. ನೀವು ಅಸಿಡಿಕ್ ಪಾನೀಯ ಕುಡಿದಿದ್ದರೆ ಈ ಹಾನಿ ಹೆಚ್ಚಾಗಲಿದೆ. ಪಾನೀಯದಲ್ಲಿ ಆಸಿಡ್ ನಿಮ್ಮ ಎನಮೆಲ್ ಸುಡುತ್ತದೆ ಮತ್ತು ಬ್ರಷ್ ಮಾಡುವಾಗ ಹಲ್ಲಿನ ಒಳಗೆ ಆಸಿಡನ್ನು ದೂಡಿ ಇನ್ನಷ್ಟು ಕ್ಲಿಷ್ಟ ಸ್ಥಿತಿ ನಿರ್ಮಿಸುತ್ತೀರಿ.

ಭಾರತೀಯ ದಂತ ಸಂಘಟನೆಯ ಜನರಲ್ ಮ್ಯಾನೇಜರ್ ಡಾ ಬುಷ್ರಾ ಪ್ರಕಾರ, ದಿನಕ್ಕೆ ಎರಡು ಬಾರಿ ಬ್ರಷ್ ಮಾಡಬೇಕು. ಪ್ರತೀ ಊಟದ ನಂತರ ಬ್ರಷ್ ಮಾಡುವ ಅಗತ್ಯವಿಲ್ಲ. ಊಟದ ತಕ್ಷಣ ಬ್ರಷ್ ಮಾಡುವುದು ವಿವಿಧ ಕಾರಣಗಳಿಂದ ಅಪಾಯಕಾರಿ. ಹೆಚ್ಚು ಬ್ರಷ್ ಮಾಡುವುದು ದಂತದ ಡ್ಯುಬುಲಸ್ ಅನ್ನು ಹೊರ ಮಾಡಿ ಸೆನ್ಸಿಟಿವಿಟಿಗೆ ಕಾರಣವಾಗುತ್ತದೆ .

ನವದೆಹಲಿಯ ಮ್ಯಾಕ್ಸಿಲೊಫೇಶಿಯಲ್ ಸರ್ಜರಿಯ ಸಲಹೆಗಾರ ಡಾ ಅನುರಾಗ್ ಸಿಂಗ್ ಪ್ರಕಾರ, ಉಪಹಾರವಾದ ಮೇಲೆ ಒಮ್ಮೆ ಬ್ರಷ್ ಮಾಡಬಹುದು ಮತ್ತು ರಾತ್ರಿಯೂಟವಾದ ಮೇಲೆ 30 ನಿಮಿಷಗಳ ನಂತರ ಬ್ರಷ್ ಮಾಡಬಹುದು.

ಅತಿಯಾಗಿ ಬ್ರಷ್ ಮಾಡುವುದು ಮತ್ತು ಒತ್ತಿ ಒತ್ತಿ ಬ್ರಷ್ ಮಾಡುವುದು ಗಮ್ ಸಡಿಲವಾಗಲು ಕಾರಣವಾಗುತ್ತದೆ. ಅಲ್ಲದೆ ಟೂತ್ ಬ್ರಷ್ ತುದಿಗಳು ಸವೆದು ಹೋದಾಗ ಇನ್ನಷ್ಟು ಸಮಸ್ಯೆ ಒಡ್ಡುತ್ತವೆ.

ಕೃಪೆ: timesofindia.indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News