ಸಿಬಿಎಸ್‌ಇ ಫಲಿತಾಂಶ ಪ್ರಕಟ: ಅಧೋಕ್ಷಜ ರಾಜ್ಯಕ್ಕೆ ಪ್ರಥಮ
Update: 2016-05-21 20:51 IST
ಬೆಂಗಳೂರು, ಮೇ 21: ಪ್ರಸಕ್ತ ಸಾಲಿನ ಸಿಬಿಎಸ್‌ಇ ಹನ್ನೆರಡನೆ ತರಗತಿ ಫಲಿತಾಂಶ ಪ್ರಕಟವಾಗಿದ್ದು, ಬೆಂಗಳೂರಿನ ಶ್ರೀ ಚೈತನ್ಯ ಟೆಕ್ನೊ ಸ್ಕೂಲ್‌ನ ವಿದ್ಯಾರ್ಥಿ ಅಧೋಕ್ಷಜ ವಿ. ಮಧ್ವರಾಜ್ 500 ಅಂಕಗಳಿಗೆ 490 ಅಂಕಗಳನ್ನು (ಶೇ.98) ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ ಎಂದು ಶಾಲೆ ತಿಳಿಸಿದೆ.
ಅದೇ ಶಾಲೆಯ ವಿದ್ಯಾರ್ಥಿನಿ ಹರ್ಷಿತಾ-ಶೇ.97.8, ಪೂಸರ್ಲ ಸಶಾಂಕ್-ಶೇ.96.8, ಆರ್.ಶರಣ್-96.6 ಹಾಗೂ ಲಕ್ಷ್ಮಿ ವಸಂತ ಮಜೇಟಿ-ಶೇ.96ರಷ್ಟು ಅಂಕ ಪಡೆಯುವ ಮೂಲಕ ಶಾಲೆಗೆ ಉತ್ತಮ ಫಲಿತಾಂಶ ತಂದುಕೊಟ್ಟಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.