ಮಧುಮೇಹ ನಿವಾರಣೆಗೆ, ತ್ವಜೆಯ ಸುಧಾರಣೆಗೆ ಕೊತ್ತಂಬರಿ ಬೀಜ

Update: 2016-05-22 05:59 GMT

ಕೊತ್ತಂಬರಿ ಬೀಜವನ್ನು ಹಲವು ಆಹಾರ ತಯಾರಿಯಲ್ಲಿ ಬಳಸಲಾಗುತ್ತದೆ. ಜಗತ್ತಿನಾದ್ಯಂತ ಕೊತ್ತಂಬರಿ ಬೀಜದ ಬಳಕೆ ಇದೆ. ಕೊತ್ತಂಬರಿ ಬೀಜದ ಪೌಡರನ್ನೂ ಬಳಸಲಾಗುತ್ತದೆ. ಆಹಾರದ ರುಚಿ ಭಿನ್ನವಾಗಲು ಇದನ್ನು ಬಳಸಲಾಗುತ್ತದೆ. ಆದರೆ ಕೊತ್ತಂಬರಿ ಬೀಜಕ್ಕೆ ಉತ್ತಮ ಔಷದ ಗುಣಗಳೂ ಇವೆ ಎನ್ನುವುದು ನಮಗೆ ಗೊತ್ತಿಲ್ಲ. ಕೊತ್ತಂಬರಿಯ ಕೆಲವು ಲಾಭಗಳ ವಿವರ ಇಲ್ಲಿದೆ.

1. ಸುಂದರ ಚರ್ಮ

ಕ್ಯಾಲಿಫೋರ್ನಿಯ ಆಯುರ್ವೇದ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆಯ ಪ್ರಕಾರ ಕೊತ್ತಂಬರಿ ಬೀಜ ವಿಭಿನ್ನ ಚರ್ಮದ ರೋಗಗಳಾದ ಇಸೀಮ, ತುರಿಕೆ, ರಾಷಸ್ ಮತ್ತು ಉರಿಯೂತದ ಸಮಸ್ಯೆಯನ್ನು ನಿವಾರಿಸುತ್ತದೆ. ಕೊತ್ತಂಬರಿ ಬೀಜದಲ್ಲಿರುವ ನಿರೋಧಕ ಅಂಶಗಳು ಇದಕ್ಕೆ ನೆರವಾಗುತ್ತವೆ. ಬಾಯಿಯ ಅಲ್ಸರ್ ಮತ್ತು ಬೊಬ್ಬೆ ಬೀಳುವುದಕ್ಕೂ ಕೊತ್ತಂಬರಿ ಬೀಜ ಉತ್ತಮ. ಕೊತ್ತಂಬರಿ ಬೀಜಗಳಲ್ಲಿ ಲಿನೊಲಿಕ್ ಆಸಿಡ್ ಇರುವ ಕಾರಣ ಉರಿಯೂತ ನಿವಾರಿಸಲು ನೋವು ನಿವಾರಿಸುವ ತತ್ವಗಳನ್ನು ಹೊಂದಿವೆ.

2. ಮಧುಮೇಹ ನಿಯಂತ್ರಣಕ್ಕೆ ನೆರವು

ಭಾರತ ವೇಗವಾಗಿ ವಿಶ್ವದ ಮಧುಮೇಹಿ ರಾಜಧಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಪರಿಹಾರಕ್ಕಾಗಿ ಹುಡುಕುವವರ ಸಂಖ್ಯೆಯೂ ಏರುತ್ತಿದೆ. ಕೆಲವು ಪುರಾತನ ಅಭ್ಯಾಸಗಳ ಪ್ರಕಾರ ಕೊತ್ತಂಬರಿ ಬೀಜಗಳನ್ನು ನಿತ್ಯವೂ ಬಳಸುವುದರಿಂದ ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಬಹುದು. ಪೌಷ್ಠಿಕಾಂಶದ ಬ್ರಿಟಿಷ್ ಅಧ್ಯಯನವೊಂದು ಹೇಳಿರುವ ಪ್ರಕಾರ ಕೊತ್ತಂಬರಿ ಬೀಜಕ್ಕೆ ರಕ್ತದಲ್ಲಿ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸುವ ಗುಣವಿದೆ.

3. ಕೂದಲ ಬೆಳವಣಿಗೆಗೆ ಸಹಾಯಕ

ಕೂದಲು ನಷ್ಟವಾಗಲು ಕೂದಲಿನ ಫಾಲಿಕಲ್ ಗಳು, ಹಾರ್ಮೋನುಗಳ ಅಸಮತೋಲನ ಮತ್ತು ಒತ್ತಡವೂ ಕಾರಣವಾಗಬಹುದು. ಅಲ್ಲದೆ ಶಿಸ್ತಿಲ್ಲದ ಆಹಾರ ಸೇವನೆಯೂ ಕಾರಣ ಇರಬಹುದು. ಕೊತ್ತಂಬರಿ ಬೀಜಗಳು ಕೂದಲು ಉದುರುವುದನ್ನು ತಡೆಯುತ್ತವೆ. ಹೊಸ ಕೂದಲಿನ ಅಭಿವೃದ್ಧಿಗೆ ನೆರವಾಗುತ್ತವೆ. ಇವುಗಳು ಕೂದಲಿನ ಫಾಲಿಕಲ್ ಗಳನ್ನು ವೃದ್ಧಿಗೊಳಿಸಿ ಹೆಚ್ಚಿನ ಅಭಿವೃದ್ಧಿಗೆ ಕಾರಣವಾಗುತ್ತವೆ. ಹೀಗೆ ಕೂದಲು ಉದುರುವ ಸಮಸ್ಯೆಯನ್ನು ನಿಯಂತ್ರಿಸುತ್ತವೆ.

4. ಉತ್ತಮ ಜೀರ್ಣಕ್ರಿಯೆ

ಕೊತ್ತಂಬರಿ ಬೀಜಗಳಲ್ಲಿ ಆಂಟಿ ಆಕ್ಸಿಡೇಶನ್ ಗುಣ ಮತ್ತು ಡಯಟರಿ ಫೈಬರ್ ಇರುವ ಕಾರಣ ಯಕೃತ್ತು ಮತ್ತು ಜಠರದ ಚಲನೆಯನ್ನು ಆರೋಗ್ಯಕರವಾಗಿಸುತ್ತದೆ. ಜೀರ್ಣಕ್ರಿಯೆಗೆ ನೆರವಾಗುತ್ತದೆ. ಅಜೀರ್ಣವಾದಲ್ಲಿ ಕೊತ್ತಂಬರಿ ಬೀಜವನ್ನು ಆಹಾರದಲ್ಲಿ ಸೇವಿಸಬಹುದು. ಅಲ್ಲದೆ ಕೊತ್ತಂಬರಿ ಬೀಜ ಆಹಾರಕ್ಕೆ ಸ್ವಾದವನ್ನು ಕೊಡುವ ಜೊತೆಗೆ ಜೀರ್ಣಕ್ರಿಯೆಗೂ ನೆರವಾಗುತ್ತದೆ. ಉತ್ತಮ ಫೈಬರ್, ಫಾಸ್ಪರಸ್ ಮತ್ತು ಕ್ಯಾಲ್ಸಿಯಂ ಮೂಲ ಕೊತ್ತಂಬರಿ ಬೀಜ.

5. ಕೊಲೆಸ್ಟರಾಲ್ ನಿಯಂತ್ರಣ

ಕೊಲೆಸ್ಟರಾಲ್ ಕಡಿಮೆ ಮಾಡಲು ಕೊತ್ತಂಬರಿ ಬೀಜ ಬಳಕೆ ಮಾಡಬಹುದು. ಕೋಲ್ಕತ್ತದ ಅಪೋಲೊ ಆಸ್ಪತ್ರೆಯ ಇಂದ್ರಾಣಿ ಸುಬ್ರಹ್ಮಣಿ ಪ್ರಕಾರ ಕೊತ್ತಂಬರಿ ಬೀಜದಲ್ಲಿರುವ ಕೊರಿಯಂಡ್ರಿನ್ ಎನ್ನುವ ಸಂಯುಕ್ತ ಲಿಪಿಡ್ ಜೀರ್ಣಕ್ರಿಯೆಯನ್ನು ನಿಯಂತ್ರಿಸುತ್ತ ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಆಯುರ್ವೇದದ ಪ್ರಕಾರ ಕೊತ್ತಂಬರಿ ಬೀಜಗಳು, ದೇಹವು ಆಹಾರವನ್ನು ಜೀರ್ಣಿಸುವುದು ಮತ್ತು ಕೊಬ್ಬನ್ನು ಕರಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

6. ಶೀತ ಮತ್ತು ಜ್ವರಕ್ಕೆ ಔಷಧಿ

ವಿಟಮಿನ್ ಸಿ ಶಕ್ತಿಯುತ ಆಂಟಿ ಆಕ್ಸಿಡಂಟ್. ಕೊತ್ತಂಬರಿ ಬೀಜಗಳಲ್ಲಿ ಫಾಲಿಕ್ ಆಸಿಡ್, ವಿಟಮಿನ್ ಎ ಮತ್ತು ಬೀಟಾ ಕೆರಾಟಿನ್ ಹಾಗೂ ಮುಖ್ಯವಾಗಿ ವಿಟಮಿನ್ ಸಿ ಇದೆ. ವೇದಿಕ್ ಹೀಲಿಂಗಿನ ಮಾಧವಿ ರಾಥೋಡ್ ಪ್ರಕಾರ ಕೊತ್ತಂಬರಿ ಬೀಜಗಳು ಶೇ. 30ರಷ್ಟು ವಿಟಮಿನ್ ಸಿ ಹೊಂದಿರುವ ಕಾರಣ ಶೀತ ಮತ್ತು ಜ್ವರ ನಿವಾರಿಸಲು ಉತ್ತಮ.

7. ಋತುಸ್ರಾವದ ಏರುಪೇರು ನಿವಾರಣೆ

ಅತಿಯಾದ ಋತುಸ್ರಾವದ ಸಮಸ್ಯೆಯಿರುವ ಮಹಿಳೆಯರಿಗೆ ಕೊತ್ತಂಬರಿ ಬೀಜಗಳು ನಿತ್ಯದ ಆಹಾರವಾಗಿರುತ್ತವೆ. ಕೋಲ್ಕತ್ತಾದ ಅಪೋಲೊ ಆಸ್ಪತ್ರೆಯ ಡಾ ಇಂದ್ರಾಣಿ ಜಾನ ಪ್ರಕಾರ, ಕೊತ್ತಂಬರಿ ಬೀಜಗಳು ಸಹಜವಾದ ಪ್ರಚೋದಕಗಳನ್ನು ಹೊಂದಿವೆ. ಇವು ಎಂಡೊಕ್ರೈನ್ ಗ್ರಂಥಿಗಳನ್ನು ಪ್ರಚೋದಿಸಿ ಹಾರ್ಮೋನ್ಗಳು ಸಮತೋಲನ ಕಾಪಾಡಲು ನೆರವಾಗುತ್ತವೆ. ಹೀಗಾಗಿ ಋತುಸ್ರಾವದ ನೋವು, ಅತಿಯಾದ ಸ್ರಾವವನ್ನು ತಡೆಯುತ್ತವೆ. ಅಲ್ಲದೆ ಋತುಸ್ರಾವ ಏರುಪೇರನ್ನೂ ನಿಲ್ಲಿಸುತ್ತದೆ.

ಈ ಲಾಭಗಳು ತಿಳಿದ ಮೇಲೆ ಕೊತ್ತಂಬರಿ ಬೀಜವನ್ನು ಆಹಾರದಲ್ಲಿ ಬೆರೆಸುವುದಕ್ಕೆ ಹಿಂಜರಿಯಬೇಡಿ.

ಕೃಪೆ: food.ndtv.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News