ಸೆಲ್ಫಿ ಗೀಳು ಇರುವವರು ಈ ಸಮಸ್ಯೆಯಿಂದ ಬಳಲುತ್ತಿದ್ದೀರಿ!

Update: 2016-05-24 12:40 GMT

ಫೇಸ್ಬುಕ್ ಮತ್ತು ಇನ್ ಸ್ಟಾಗ್ರಾಂ ಸಾಮಾಜಿಕ ತಾಣಗಳಲ್ಲಿ ನಿಮ್ಮ ಸೆಲ್ಫಿಗಳನ್ನು ಹಾಕುವುದರಲ್ಲಿ ನಿಮಗೆ ಸುಸ್ತಾಗುವುದೇ ಇಲ್ಲ ಎಂದಾದಲ್ಲಿ ಮೊದಲು ಕುಳಿತು ನಿಮ್ಮ ಮುಖದ ಕಡೆಗೆ ಗಮನ ಕೊಡಿ. ಸಂಶೋಧಕರ ಪ್ರಕಾರ ನಿತ್ಯವೂ ಸೆಲ್ಫೀ ಹಾಕುವ ಬಹುತೇಕ ಮಂದಿ ಆಕರ್ಷಕವೂ ಅಲ್ಲ ಮತ್ತು ತಮ್ಮ ಸೌಂದರ್ಯದ ಬಗ್ಗೆ ಅತಿಯಾದ ಕಲ್ಪನೆಗಳನ್ನು ಹೊಂದಿರುತ್ತಾರೆ. ಹೀಗಾಗಿ ಅವರು ಆತ್ಮರತಿ ಇರುವವರು.

ಟೊರಾಂಟೊ ವಿಶ್ವವಿದ್ಯಾನಿಲಯದ ತಂಡವೊಂದು ಹೇಳಿರುವ ಪ್ರಕಾರ ಆಗಾಗ್ಗೆ ಸೆಲ್ಫಿ ತೆಗೆದುಕೊಳ್ಳುವ ವ್ಯಕ್ತಿಗಳು ಕಡಿಮೆ ಆಕರ್ಷಕರಾಗಿದ್ದರು. ಸೆಲ್ಫಿ ಫೋಟೋಗಳನ್ನು ಹಾಕುವ ಹವ್ಯಾಸ ಇಲ್ಲದವರಿಗೆ ಹೋಲಿಸಿದರೆ ಇವರನ್ನು ಜನರು ಇಷ್ಟಪಡುವುದು ಕಡಿಮೆ. ಒಟ್ಟಾರೆಯಾಗಿ ಡೇನಿಯಲ್ ರೇ ನೇತೃತ್ವದ ಅಧ್ಯಯನವು 198 ಕಾಲೇಜು ವಿದ್ಯಾರ್ಥಿಗಳ ಸೆಲ್ಫಿ ತೆಗೆಯುವ ಹುಚ್ಚನ್ನು ವಿಶ್ಲೇಷಿಸಿದೆ. ಸೆಲ್ಫಿ ಪ್ರಿಯರನ್ನು ಅಧ್ಯಯನಕಾರರು ಸೆಲ್ಫಿ ತೆಗೆಯಲು ಹೇಳಿದ್ದರು. ನಂತರ ತಂಡದ ಸದಸ್ಯರೊಬ್ಬರು ಅವರ ಫೋಟೋ ತೆಗೆದಿದ್ದರು. ಸಂಶೋಧಕರು ಸೆಲ್ಫಿಗಳು ಮತ್ತು ಸಾಮಾನ್ಯ ಫೋಟೋಗಳನ್ನು ವಿಶ್ಲೇಷಿಸಿದ್ದರು.

ಸೆಲ್ಫಿ ತೆಗೆದುಕೊಳ್ಳುವ ಸಮೂಹ ಮತ್ತು ತೆಗೆದುಕೊಳ್ಳದ ಸಮೂಹ ಇಬ್ಬರೂ ಸಹ ತಾವು ತಮ್ಮ ಫೋಟೋಗಳಲ್ಲಿ ಹೆಚ್ಚು ಆಕರ್ಷಕವಾಗಿ ಕಂಡು ಇತರರು ತಮ್ಮನ್ನು ಇಷ್ಟಪಡುತ್ತಾರೆ ಎಂದೇ ಅಂದುಕೊಂಡಿದ್ದರು. ವಾಸ್ತವದಲ್ಲಿ ಅವರಿಗೆ ಸಿಕ್ಕ ರೇಟಿಗಿಂತ ಅವರು ಬಹಳ ಹೆಚ್ಚು ಅಂದಾಜು ಮಾಡಿದ್ದರು. ಸೆಲ್ಫಿ ತೆಗೆದುಕೊಳ್ಳುವವರು ಸ್ವತಃ ಹೆಚ್ಚು ಸುಂದರರಾಗಿದ್ದೇವೆ ಎಂದು ತಿಳಿದುಕೊಂಡಿದ್ದರು. ಸೆಲ್ಫಿಗಳಿಗೆ ಕಡಿಮೆ ರೇಟಿಂಗ್ ಸಿಕ್ಕಿದ್ದು, ಸ್ವತಂತ್ರವಾಗಿ ತೆಗೆದ ಫೋಟೋಗಳಿಗೆ ಹೆಚ್ಚು ರೇಟಿಂಗ್ ಸಿಕ್ಕಿತ್ತು. ಅಲ್ಲದೆ ಅಧ್ಯಯನದಲ್ಲಿ ಸೆಲ್ಫಿ ತೆಗೆದುಕೊಳ್ಳುವವರು, ಸೆಲ್ಫಿ ತೆಗೆದುಕೊಳ್ಳದವರಿಗೆ ಹೋಲಿಸಿದರೆ ಹೆಚ್ಚು ಆತ್ಮಶ್ಲಾಘನೆ ಗುಣವನ್ನು ಹೊಂದಿರುವುದು ಪತ್ತೆಯಾಗಿದೆ.

ಅಧ್ಯಯನ ತಂಡದ ಪ್ರಕಾರ ಪದೇ ಪದೇ ಸೆಲ್ಫಿ ತೆಗೆಯುವವರು, ಇತರರು ಸಾಮಾನ್ಯವಾಗಿ ಫೋಟೋಗಳನ್ನು ಒಪ್ಪಿಕೊಳ್ಳುವ ಸ್ವಭಾವವನ್ನೇ ತಮ್ಮನ್ನು ಜನ ಇಷ್ಟಪಡುತ್ತಾರೆ ಎನ್ನುವ ಮನೋಭಾವದಲ್ಲಿ ಸ್ವತಃ ಫೋಟೋದ ಸೌಂದರ್ಯವನ್ನು ವಾಸ್ತವಕ್ಕಿಂತ ಹೆಚ್ಚು ತೂಕದಲ್ಲಿ ನೋಡುತ್ತಾರೆ.

ಕೃಪೆ:indiatoday.intoday.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News