×
Ad

ಅಡುಗೆಗೆ ಆಲಿವ್ ಆಯಿಲ್ ಬಳಕೆ ಆರೋಗ್ಯಕ್ಕೆ ಉತ್ತಮ ಎಂದು ನಂಬಿದ್ದೀರಾ? ಇದನ್ನು ಓದಿ

Update: 2016-05-25 13:53 IST

ನಾವು ಭಾರತೀಯರು ಬಳಸುವ ಎಲ್ಲದರಲ್ಲೂ ಇರುವ ಒಂದು ವಸ್ತು ಎಂದರೆ ಎಣ್ಣೆ. ಆದರೆ ನಮ್ಮ ಆಯ್ಕೆ ಹೇಗಿರುತ್ತದೆ? ಆಲಿವ್ ಆಯಿಲ್ ಉತ್ತಮ ಎಂದು ಖರೀದಿಸೋಣ. ತೆಂಗಿನೆಣ್ಣೆ ತೂಕ ಕಡಿಮೆ ಮಾಡುತ್ತದೆ ಎಂದರೆ ಉತ್ತಮ. ಎಣ್ಣೆ ತೂಕವನ್ನೂ ಕಡಿಮೆ ಮಾಡುತ್ತದೆ ಎಂದರೆ ಇನ್ನೇನು ಬೇಕು? ಇತರರ ಮಾತಿನ ಮೇಲೆ ಅತಿಯಾಗಿ ನಂಬಿಕೆ ಇಡುವ ಕಾರಣ ಇಂತಹ ಪೊಳ್ಳು ಭಾವನೆಗಳನ್ನು ನಾವು ಹೊಂದಿರುತ್ತೇವೆ. ಆರೋಗ್ಯದ ಹೆಸರಲ್ಲಿ ಸುಳ್ಳು ನಂಬಿಕೆ ಇಟ್ಟುಕೊಳ್ಳುವುದು ಸರಿಯಲ್ಲ.

ಅಂತಹ ಒಂದು ಸುಳ್ಳೆಂದರೆ ಆಲಿವ್ ತೈಲದಲ್ಲಿ ಮಾಡಿದ ಅಡುಗೆ ಆರೋಗ್ಯಕರ ಎನ್ನುವುದು. ಆಲಿವ್ ತೈಲವು ಅದರ ವರ್ಜಿನ್ ಮತ್ತು ಎಕ್ಸ್ಟ್ರಾ ವರ್ಜಿನ್ ಗಳಿಗಿಂತ ಅಡುಗೆಗೆ ಉತ್ತಮವಾಗಿದ್ದರೂ, ನಮ್ಮ ಹೊಗೆಯ ಅಡುಗೆಗೆ ಇವು ಯಾವುವೂ ಉತ್ತಮವಲ್ಲ.

ಭಾರತೀಯ ಅಡುಗೆಯಲ್ಲಿ ವರ್ಜಿನ್ ಮತ್ತು ಎಕ್ಸ್ಟ್ರಾ ವರ್ಜಿನ್ ಆಲಿವ್ ಆಯಿಲ್ ಬಳಸಬಾರದು. ಭಾರತೀಯ ಅಡುಗೆ ಬಿಸಿ ಮಾಡಬೇಕಾಗುತ್ತದೆ ಮತ್ತು ಅತೀ ಉಷ್ಣತೆಯಲ್ಲಿ ತಯಾರಾಗುತ್ತದೆ. ಅಥವಾ ಆಳವಾಗಿ ಕರಿಯುತ್ತೇವೆ. ಈ ಎಣ್ಣೆಗಳು ಕಡಿಮೆ ಸ್ಮೋಕ್ ಪಾಯಿಂಟ್ ಹೊಂದಿರುತ್ತವೆ. ವಿದೇಶಿ ಆಹಾರ ತಯಾರಿಸಲು, ಸಲಾಡ್ ಮತ್ತು ಡ್ರೆಸ್ಸಿಂಗಿಗೆ ಅವು ಉತ್ತಮ ಎನ್ನುತ್ತಾರೆ ಗುರುಗಾಂವ್ ಫಾರ್ಟಿಸ್ ಮೆಮೊರಿಯಲ್ ರೀಸರ್ಚ್ ಸಂಸ್ಥೆಯ ಮುಖ್ಯ ಕ್ಲಿನಿಕಲ್ ನ್ಯುಟ್ರಿಶನಿಸ್ಟ್ ಸಂಧ್ಯಾ ಪಾಂಡೆ.

ಆಲಿವ್ ಆಯಿಲಲ್ಲಿ ಒಮೆಗಾ 3 ಫ್ಯಾಟಿ ಆಸಿಡುಗಳಿರುತ್ತವೆ. ಅದರಲ್ಲಿ ಪೌಷ್ಠಿಕಾಂಶ ಇರುವುದು ಸುಳ್ಳಲ್ಲ. ಆದರೆ ಅತೀ ಉಷ್ಣತೆಯಲ್ಲಿ ಅಡುಗೆಯಾಗುವಾಗ ಈ ಗುಣ ಒಡೆದು ಹೋಗುತ್ತದೆ. ಹಸಿಯಾಗಿ ಆಯಿಲನ್ನು ಹಾಕಿ ಸೇವಿಸುವುದು ಉತ್ತಮ ಎನ್ನುತ್ತಾರೆ.

http://timesofindia.indiatimes.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News