ಜೂ.21 ರಿಂದ ಚಿಂತನಾ ಶಿಬಿರ
ಬೆಂಗಳೂರು, ಮೇ 27: ಪ್ರಗತಿಪರ ಮಠಾಧೀಶರ ವೇದಿಕೆ ವತಿಯಿಂದ ಜೂ.20ರಂದು ನಗರದ ಅಂಬೇಡ್ಕರ್ ಭವನದಲ್ಲಿ 125 ನೆ ಅಂಬೇಡ್ಕರ್ ಜನ್ಮದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಇದೇ ವೇಳೆಯಲ್ಲಿ ಜೂ.21 ರಿಂದ ‘ಅಂತರ್‌ನಿರೀಕ್ಷಣೆಯ ಹಾದಿಯಲ್ಲಿ ಮಠಾಧೀಶರು’ ಎಂಬ 3 ದಿನಗಳ ಚಿಂತನಾ ಶಿಬಿರವನ್ನು ಜಯಂತಿಯ ಅಂಗವಾಗಿ ಹಮ್ಮಿಕೊಳ್ಳಲಾಗಿದೆ.
ಅಂಬೇಡ್ಕರ್ ಜಯಂತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ. ನಂತರ ಚಿಂತನಾ ಶಿಬಿರ ನಗರದ ನಿಡುಮಾಮಿಡಿ ಮಠದಲ್ಲಿ ನಡೆಯಲಿದೆ ಎಂದು ವೇದಿಕೆಯ ಅಧ್ಯಕ್ಷ ವೀರಭದ್ರ ಚನ್ನಮಲ್ಲಿಕಾರ್ಜುನ ಸ್ವಾಮಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಶಿಬಿರದಲ್ಲಿ ‘ಮಠಾಧೀಶರು ವಿಮರ್ಶೆಗೆ ಅತೀತರೇ?’, ‘ಮಠಾಧೀಶರು ಮತ್ತು ಜಾತಿ ಪದ್ಧತಿ’, ‘ಮಠಾಧೀಶರು ಮತ್ತು ಅಸ್ಪಶ್ಯತೆ ಸಮಸ್ಯೆ’, ‘ವುಠಾಧೀಶರು ಮತ್ತು ಲಿಂಗ ತಾರತಮ್ಯ’, ‘ಮಠಾಧೀಶರು ಮತ್ತು ಕೋಮುವಾದ’, ‘ಮಠಾಧೀಶರು ಮತ್ತು ಭ್ರಷ್ಟಾಚಾರ’, ‘ಮಠಾಧೀಶರು ಮತ್ತು ರಾಜಕೀಯ’, ‘ಧಾರ್ಮಿಕ ಕ್ಷೇತ್ರದವರು ನಡೆಸುತ್ತಿರುವ ಧ್ಯಾನ,ಯೋಗ, ಆಯುರ್ವೇದ ಇವು ಲಾಭದಾಯಕ ಉದ್ಯಮವಾಗುತ್ತಿದೆಯೇ’, ‘ಮಠಾಧೀಶರು ಮತ್ತು ವೌಢ್ಯಾಚರಣೆಗಳು’, ‘ಮಠಾಧೀಶರು ಮತ್ತು ಮಾನವೀಯ ವೌಲ್ಯಗಳು’ ಎಂಬಂತಹ ವಿಷಯಗಳ ಕುರಿತು ಚರ್ಚೆಗಳು ನಡೆಯುತ್ತವೆ ಎಂದು ತಿಳಿಸಿದ್ದಾರೆ.