×
Ad

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

Update: 2016-05-28 20:44 IST

ಬೆಂಗಳೂರು, ಮೇ 28: ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್‌ಗಾಂಧಿ ಅನುಮೋದನೆ ನೀಡಿದ್ದಾರೆ.
ಕರ್ನಾಟಕದಿಂದ ಮಾಜಿ ಕೇಂದ್ರ ಸಚಿವ ಆಸ್ಕರ್‌ಫರ್ನಾಂಡೀಸ್‌ಗೆ ಮತ್ತೊಂದು ಅವಕಾಶ ನೀಡಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದೆ. ಅವರೊಂದಿಗೆ, ಜೈರಾಂ ರಮೇಶ್‌ರನ್ನು ಕರ್ನಾಟಕದಿಂದ ಎರಡನೆ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಹಸಿರು ನಿಶಾನೆ ತೋರಿದೆ.
 
ಹಾಗೆಯೇ ವಿಧಾನ ಪರಿಷತ್ತಿಗೆ ಆರ್.ಬಿ.ತಿಮ್ಮಾಪುರ್, ಅರ್ಶದ್ ರಿಜ್ವಾನ್, ಅಲ್ಲಂ ವೀರಭದ್ರಪ್ಪ ಮತ್ತು ವೀಣಾ ಅಚ್ಚಯ್ಯರನ್ನು ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಲು ಕಾಂಗ್ರೆಸ್ ಹೈಕಮಾಂಡ್ ಹಸಿರು ನಿಶಾನೆ ತೋರಿದೆ. ಇದಲ್ಲದೆ, ಮಹಾರಾಷ್ಟ್ರ-ಪಿ.ಚಿದಂಬರಂ, ಪಂಜಾಬ್-ಅಂಬಿಕಾ ಸೋನಿ, ಉತ್ತರಪ್ರದೇಶ-ಕಪಿಲ್‌ಸಿಬಲ್, ಉತ್ತರಾಖಂಡ-ಪ್ರದೀಪ್ ತಮ್ಟಾ, ಮಧ್ಯಪ್ರದೇಶ- ವಿವೇಕ್ ತನ್ಕಾ ಹಾಗೂ ಛತ್ತೀಸ್‌ಗಡ-ಛಾಯಾ ವರ್ಮಾರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿ ಎಐಸಿಸಿ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News