×
Ad

ಅಬ್ಬಾಸ್ ಹಾಜಿ ಮರ್ವೇಲು

Update: 2016-05-29 20:12 IST

ಉಪ್ಪಿನಂಗಡಿ, ಮೇ 29: ಕೊಲ ಗ್ರಾಮದ ಕುದುಲೂರು ಮರ್ವೇಲು ನಿವಾಸಿ ಅಬ್ಬಾಸ್ ಹಾಜಿ ಮರ್ವೇಲು (85) ಎಂಬವರು ಕೆಲ ದಿನಗಳ ಅನಾರೋಗ್ಯದಿಂದ ಮೇ 29ರಂದು ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
 
ಅತ್ಯಂತ ಸಾಧು ಸ್ವಬಾವದ ಅಬ್ಬಾಸ್ ಹಾಜಿ ಕುದುಲೂರು ಜುಮಾ ಮಸೀದಿ ಸ್ಥಾಪಕಾಧ್ಯಕ್ಷರಾಗಿ ಸುಮಾರು 15 ವರ್ಷಗಳ ಕಾಲ ಮತ್ತು ಗಂಡಿಬಾಗಿಲು ಜುಮಾ ಮಸೀದಿಯಲ್ಲಿ ಸುಮಾರು 5 ವರ್ಷಗಳ ಕಾಲ ಉಪಾಧ್ಯಕ್ಷರಾಗಿ, ಪ್ರಸಕ್ತ ಎರಡೂ ಮಸೀದಿಯಲ್ಲಿ ಸಲಹಾ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಸ್ಥಳೀಯ ಹಲವಾರು ಧಾರ್ಮಿಕ ಸಂಘಟನೆಗಳಲ್ಲಿ ಸೇವೆ ಸಲ್ಲಿಸಿ ಚಿರಪರಿಚಿತರಾಗಿದ್ದರು.

ಮೃತರ ಮನೆಗೆ ಹಲವಾರು ಧಾರ್ಮಿಕ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭೇಟಿ ನೀಡಿ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.

ಮೃತರು ಪತ್ನಿ ಖತೀಜಮ್ಮ, ಪುತ್ರರಾದ ಅಬ್ದುರ್ರಹ್ಮಾನ್, ಅಬ್ದುರ್ರಝಾಕ್, ಇಸಾಕ್, ಅಬ್ದುಲ್ ಖಾದರ್‌ರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News