ನೀವು ಸರಿಯಾಗಿ ಹಲ್ಲುಜ್ಜುತ್ತಿದ್ದೀರಾ? ಇದನ್ನು ಓದಿ ತಿಳಿದುಕೊಳ್ಳಿ

Update: 2016-06-01 05:50 GMT

ಸಾಮಾನ್ಯವಾಗಿ ಹಲ್ಲುಜ್ಜುವಾಗ ಮಾಡುವ ತಪ್ಪೆಂದರೆ ಸರಿಯಾದ ಆಕಾರ ಮತ್ತು ಗಾತ್ರದ ಬ್ರಶ್ ಗಳನ್ನು ಆರಿಸದೆ ಇರುವುದು. ತಲೆ ದೊಡ್ಡದಾಗಿರುವ ಬ್ರಶ್ ನಿಮ್ಮ ದವಡೆಗಳ ಮೇಲೆ ಒತ್ತಡ ಹಾಕಲಿದೆ. ಬ್ರಶ್ ಮಾಡುವಾಗ ದವಡೆಯನ್ನು ಹೆಚ್ಚು ತೆರೆಯಬೇಕಾಗಿ ಬರಬಹುದು. ಅಲ್ಲದೆ ಹಲ್ಲಿನ ಎಲ್ಲಾ ಮೂಲೆಗಳಿಗೂ ಬ್ರಶ್ ಕೊಂಡೊಯ್ಯುವುದು ಕಷ್ಟವಾಗಬಹುದು. ಅತೀ ಸಣ್ಣದಾದ ಬ್ರಶ್ ಕೂಡ ಪರಿಣಾಮಕಾರಿಯಲ್ಲ.

ಎರಡನೆಯದಾಗಿ ಬ್ರಶ್‌ನ ಬಿರುಸಾದ ಕೂದಲುಗಳ ಭಾಗ ಹೇಗೆ ನಮ್ಮ ದವಡೆಗಳ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ. ಸ್ವಲ್ಪ ಕೋನೀಯವಾದ ಕೂದಲುಗಳು ಇದ್ದು, ಮೃದುವಾದ ದವಡೆಯ ಭಾಗಕ್ಕೆ ಗಾಯವಾಗದಂತೆ ಉಜ್ಜಬೇಕು. ಆದರೆ ಗಟ್ಟಿಯಾಗಿದ್ದ ಕೂದಲಗಳು ಹೆಚ್ಚು ಆಳಕ್ಕೆ ಹೊಕ್ಕು ಬಿಡುತ್ತವೆ.

ಮೂರನೇ ತಪ್ಪೆಂದರೆ ನಿತ್ಯವೂ ಯಾವ ರೀತಿ ಬ್ರಶ್ ಮಾಡಬೇಕು ಎನ್ನುವುದೂ ನಮಗೆ ಗೊತ್ತಿರುವುದಿಲ್ಲ. ಗಿಡ್ಡನೆಯ, ನಿಧಾನವಾದ 45 ಡಿಗ್ರಿ ಕೋನದಲ್ಲಿ ಬ್ರಶ್ ಮಾಡಬೇಕು. ಹಿಂದೆ ಮತ್ತು ಮುಂದೆ ಚಲನೆಯಲ್ಲಿ ಸುತ್ತಲೂ ಉಜ್ಜಿ. ನಂತರ ಸುತ್ತಾಕಾರ/ ನೇರ ಚಲನೆಗೆ ಹೋಗಿ. ನಿಮ್ಮ ನಾಲಗೆಯನ್ನೂ ಮೆಲ್ಲಗೆ ಉಜ್ಜಿ. ಕೆನ್ನೆಯ ಒಳಗಡೆ ಭಾಗದಲ್ಲೂ ಬ್ಯಾಕ್ಟೀರಿಯ ಇರಬಹುದು. ಬಾಯಿಯನ್ನು ಚೆನ್ನಾಗಿ ಮುಕ್ಕಳಿಸಬೇಕು.

ನಾಲ್ಕನೆಯದಾಗಿ ದಿನಕ್ಕೆ ಕನಿಷ್ಠ ಎರಡು ಬಾರಿ ಬ್ರಶ್ ಮಾಡಬೇಕು. 3 ಬಾರಿ ಬ್ರಶ್ ಮಾಡುವುದರಿಂದ ಇನ್ನೂ ಹೆಚ್ಚು ಸ್ವಚ್ಛವಾಗಿಡಬಹುದು. ಬ್ರಶ್ ಸ್ವಚ್ಛತೆ ಆಹಾರದಲ್ಲಿದ್ದ ಅಸಿಡಿಟಿಯನ್ನು ತಟಸ್ಥಗೊಳಿಸುತ್ತದೆ. ಐದನೆಯದಾಗಿ ದಿನಕ್ಕೆ ಮೂರಕ್ಕಿಂತ ಹೆಚ್ಚು ಬಾರಿ ಬ್ರಷ್ ಮಾಡಬಾರದು. ಅದರಿಂದ ದವಡೆಗೆ ಹಾನಿ.

ಆರನೆಯದಾಗಿ ಬ್ರಶ್ ಮಾಡುವ ಶೈಲಿ ಬದಲಿಸಿ. ಮೇಲುಗಡೆಗೆ ಮೊದಲು ಮತ್ತು ನಂತರ ಕೆಳಗಿನ ಹಲ್ಲು ಉಜ್ಜಿ. ಹಾಗಿದ್ದಾಗ ಹೆಚ್ಚು ಸ್ವಚ್ಛವಾಗುತ್ತದೆ.

ಏಳನೆಯದಾಗಿ ಹಲ್ಲಿನ ಒಳಭಾಗ ಸ್ವಚ್ಛ ಮಾಡಲು ಮರೆಯಬಾರದು. ಹಲ್ಲಿನೊಳಗೇ ಹೆಚ್ಚು ಬ್ಯಾಕ್ಟೀರಿಯ ಹುಟ್ಟುತ್ತದೆ.

ಎಂಟನೆಯದಾಗಿ ಬ್ರಶ್ ಮಾಡುವ ಮೊದಲು ಬ್ರಶ್ ತಲೆ ಭಾಗವನ್ನು ಚೆನ್ನಾಗಿ ತೊಳೆದುಕೊಳ್ಳಿ. ನಂತರ ಬಳಸಿ.

ಒಂಬತ್ತನೆಯದಾಗಿ ನಿಮ್ಮ ಬ್ರಶ್ ತಲೆ ಭಾಗವನ್ನು ಹೇಗೆ ಬಿಡುತ್ತೀರಿ ಎಂದು ಗಮನಿಸಿ. ಸಾಕಷ್ಟು ಒಣಗಿದಂತೆ ಇರಲಿ. ಇಲ್ಲದಿದ್ದರೆ ಇಟ್ಟಲ್ಲೇ ಬ್ಯಾಕ್ಟೀರಿಯ ಬೀಳಬಹುದು. ಬ್ರಶ್ ಅನ್ನು ಚೆನ್ನಾಗಿ ಮುಚ್ಚಿಡಿ.

ಕೊನೆಯದಾಗಿ ಒಂದೇ ಬ್ರಶ್ ಅನ್ನು ತುಂಬಾ ಸಮಯ ಬಳಸಬೇಡಿ. ಬ್ರಶ್ ತಲೆಭಾಗ ಹಾಳಾಗುತ್ತಿದೆ ಎಂದು ಅನಿಸಿದಾಗ ಬ್ರಶ್ ಬದಲಿಸಿ. ಸ್ವಲ್ಪವೇ ಬಾಗಿದ್ದರೂ ಬದಲಿಸಬೇಕು.

ಕೃಪೆ:www.wellnessbin.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News