ನಿವೃತ್ತ ಅಧ್ಯಾಪಕ ಶಿವರಾಮ ಮಯ್ಯ
Update: 2016-06-02 17:08 IST
ಮಂಗಳೂರು, ಜೂ.2: ಶಿವಣ್ಣ ಮಾಸ್ಟರ್ ಎಂದೇ ಪರಿಚಿತರಾಗಿದ್ದ ನಿವೃತ್ತಅಧ್ಯಾಪಕ ಕೆ.ಶಿವರಾಮ ಮಯ್ಯ (83) ಅವರು ಹೃದಯಾಘಾತದಿಂದ ಜೂ. 1ರಂದು ನಿಧನರಾಗಿದ್ದಾರೆ.
ಮಂಚಿ ಕುಕ್ಕಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 34 ವರ್ಷ ಶಿಕ್ಷಕರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಮಂಚಿ ಶಾಲೆಯಲ್ಲಿ ಮಾದರಿ ಶಾಲೆಯಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಯಕ್ಷಗಾನ ತಾಳ ಮದ್ದಳೆಯಲ್ಲಿ ಆಸಕ್ತರಾಗಿದ್ದ ಅವರು ಹವ್ಯಾಸಿ ಮೃದಂಗ ವಾದಕರಾಗಿಯೂ ಜನಾನುರಾಗಿಯಾಗಿದ್ದರು. ಸ್ಥಳೀಯವಾಗಿ ಧಾರ್ಮಿಕ ಹಾಗೂ ಸಾಮಾಜಿಕ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು, ಸಂಘ ಸಂಸ್ಥೆಗಳಲ್ಲಿ ಜವಾಬ್ದಾರಿಯುತ ಹುದ್ದೆಯನ್ನು ನಿರ್ವಹಿಸಿದ್ದರು.