ಮೂಸಕುಂಞಿ ಹಾಜಿ
Update: 2016-06-02 19:08 IST
ಮಂಗಳೂರು, ಜೂ.2: ನಗರದ ಮಾರ್ಗನ್‌ಗೇಟ್ ನಿವಾಸಿ ಮೀನು ವ್ಯಾಪಾರಸ್ಥ ಮೂಸಕುಂಞಿ ಹಾಜಿ (86) ಇಂದು ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೂಲತಃ ಮಂಜೇಶ್ವರದವರಾದ ಮೂಸಕುಂಞಿ ಮಂಗಳೂರು ಬಂದರ್‌ನಲ್ಲಿ ಮೀನು ವ್ಯಾಪಾರ ಮಾಡಿಕೊಂಡಿದ್ದರು. ಇಂದು ಮಧ್ಯಾಹ್ನ ಸುಮಾರು 1 ಗಂಟೆ ಹೊತ್ತಿಗೆ ನಿಧನ ಹೊಂದಿದರು.
ಅವರು ಪತ್ನಿ, ಇಬ್ಬರು ಪುತ್ರರ ಸಹಿತ ಬಂಧು, ಬಳಗವನ್ನು ಅಗಲಿದ್ದಾರೆ.
ಇಂದು ಸಂಜೆಯ ಹೊತ್ತಿಗೆ ಅವರ ಮೃತದೇಹವನ್ನು ಮಂಜೇಶ್ವರಕ್ಕೆ ರವಾನಿಸಲಾಗಿದ್ದು, ಶುಕ್ರವಾರ ಬೆಳಗ್ಗೆ 9 ಗಂಟೆಗೆ ಮಂಜೇಶ್ವರದ ಮೈಮುನಾ ಮಸೀದಿಯಲ್ಲಿ ಅಂತ್ಯ ಕ್ರಿಯೆ ನೆರವೇರಲಿದೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.