ಅಬ್ದುಲ್ಲ ಬಸರ
ಮಂಗಳೂರು, ಜೂ. 2: ಸಿಗ್ಮಾ ಕಂಪ್ಯೂಟರ್ ಮತ್ತು ಟ್ಯುಟೋರಿಯಲ್‌ನ ವ್ಯವಸ್ಥಾಪಕ ನಿರ್ದೇಶಕ ಮಂಜನಾಡಿ ನಿವಾಸಿ ಅಬ್ದುಲ್ಲ ಬಸರ ಹೃದಯಾಘಾತದಿಂದ ತಮ್ಮ ಸ್ವಗೃಹದಲ್ಲಿ ಇಂದು ನಿಧನ ಹೊಂದಿದರು.
ಅವರಿಗೆ 48 ವರ್ಷ ವಯಸ್ಸಾಗಿತ್ತು. ಮೃತರು ತಾಯಿ, ಪತ್ನಿ ಹಾಗೂ ಓರ್ವ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಇಂದು ಬೆಳಗ್ಗೆ ಸುಮಾರು 7 ಗಂಟೆ ಹೊತ್ತಿಗೆ ಅವರು ಹೃದಯಾಘಾತಗೊಂಡು ಮೃತಪಟ್ಟಿದ್ದಾರೆ.
ಅಬ್ದುಲ್ಲ ಬಸರ ಸಿಗ್ಮಾ ಕಂಪ್ಯೂಟರ್ ಮತ್ತು ಟ್ಯುಟೋರಿಯಲ್ಸ್‌ನ್ನು ಸ್ಥಾಪಿಸಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ತಮ್ಮ ಸಂಸ್ಥೆಯಲ್ಲಿ ಉಚಿತವಾಗಿ ವಿದ್ಯಾಭ್ಯಾಸವನ್ನು ನೀಡುತ್ತಿದ್ದರಲ್ಲದೆ, ಶಿಕ್ಷಣದಿಂದ ವಂಚಿತರಾಗಿ ಮನೆಯಲ್ಲಿದ್ದ ಮಕ್ಕಳನ್ನು ತಮ್ಮ ಸಂಸ್ಥೆಯಲ್ಲಿ ಸೇರಿಸಿ ಹತ್ತನೆ ತರಗತಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದರು.
ಇಂದು ಸಂಜೆ ಮಗ್ರಿಬ್ ನಮಾಝಿನ ಬಳಿಕ ಮಂಜನಾಡಿ ಜುಮಾ ಮಸೀದಿಯಲ್ಲಿ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.