ದೇಶದ ಅತಿದೊಡ್ಡ ತ್ರಿವರ್ಣ ಧ್ವಜಕ್ಕೆ ಹಾನಿ

Update: 2016-06-07 03:57 GMT

ಹೈದರಾಬಾದ್, ಜೂ.7: ನಗರದ ಸಂಜೀವಯ್ಯ ಪಾರ್ಕ್‌ನಲ್ಲಿ ದೇಶದ ಅತಿದೊಡ್ಡ ತಿರಂಗಾವನ್ನು ಆರೋಹಣ ಮಾಡಿದ ನಾಲ್ಕೇ ದಿನಗಳಲ್ಲಿ ಅಧಿಕಾರಿಗಳು ಅದನ್ನು ಅವರೋಹಣ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಭೀಕರ ಗಾಳಿಯಿಂದಾಗಿ ಅತಿದೊಡ್ಡ ರಾಷ್ಟ್ರಧ್ವಜ ಹರಿದಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಈ ಅನಿವಾರ್ಯ ಕ್ರಮ ಕೈಗೊಂಡರು. ಅದಾಗ್ಯೂ ಮಧ್ಯರಾತ್ರಿ ವೇಳೆ ಧ್ವಜವನ್ನು ಬದಲಿಸಿ, ಹೊಸ ಧ್ವಜ ಹಾರಿಸಲಾಯಿತು.

ರಾಷ್ಟ್ರಧ್ವಜ ಸಂಹಿತೆಗೆ ಅನುಗುಣವಾಗಿಯೇ ಈ ಪ್ರಕ್ರಿಯೆ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹರಿದ ಅಥವಾ ಬಣ್ಣ ಮಾಸಿದ ಧ್ವಜಗಳನ್ನು ಬದಲಿಸಬೇಕು ಹಾಗೂ ಅದನ್ನು ಸುಡುವ ಅಥವಾ ಇನ್ಯಾವುದೇ ವಿಧಾನದ ಮೂಲಕ ಖಾಸಗಿಯಾಗಿ ಸಂಪೂರ್ಣ ನಾಶಮಾಡಬೇಕು. ಹಾಗೆ ಮಾಡುವಾಗ ರಾಷ್ಟ್ರಧ್ವಜದ ಗೌರವ ಕಾಪಾಡಬೇಕು ಎಂದು ಧ್ವಜಸಂಹಿತೆ ಹೇಳುತ್ತದೆ.

ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ತೆಲಂಗಾಣ ಸಂಸ್ಥಾಪನಾ ದಿನ ಸಮಾರಂದ ಅಂಗವಾಗಿ ಈ ಧ್ವಜವನ್ನು ಜೂನ್ 2ರಂದು ಹಾರಿಸಿದ್ದರು. ದೇಶದ ಎರಡನೇ ಅತಿದೊಡ್ಡ ಧ್ವಜಸ್ತಂ ಎನಿಸಿದ 291 ಅಡಿ ಎತ್ತರದ ಸ್ತಂದಲ್ಲಿ ಇದನ್ನು ಹಾರಿಸಲಾಗಿತ್ತು.

ರಾಷ್ಟ್ರಧ್ವಜ ಹರಿದದ್ದು ಗಮನಕ್ಕೆ ಬಂದ ತಕ್ಷಣ ಬದಲಿಸಲು ವ್ಯವಸ್ಥೆ ಮಾಡಲಾಗಿದೆ. ಅದೇ ಗಾತ್ರದ ಐದು ಧ್ವಜಗಳನ್ನು ಬದಲಿಗಾಗಿ ಮೀಸಲಿಡಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ. ತಜ್ಞರು ಮಾತ್ರ ಧ್ವಜದ ಗಾತ್ರವೇ ಸಮಸ್ಯೆಗೆ ಮೂಲ ಎಂದು ವಿಶ್ಲೇಷಿಸಿದ್ದಾರೆ. ಸ್ತಂಭದ ಎತ್ತರಕ್ಕೆ ಅನುಗುಣವಾಗಿ ಧ್ವಜದ ಉದ್ದ ಇಲ್ಲದಿರುವುದರಿಂದ ಧ್ವಜಕ್ಕೆ ಹಾನಿಯಾಗಿದೆ. ಜತೆಗೆ ಧ್ವಜಕ್ಕೆ ಬಳಸಿದ ಬಟ್ಟೆಯ ಬಗ್ಗೆ ಕೂಡಾ ಅನುಮಾನವಿದೆ. ಕೊಲ್ಕತ್ತಾದ ಸಂಸ್ಥೆಯೊಂದು 1.3 ಕೋಟಿ ರೂಪಾಯಿ ವೆಚ್ಚದಲ್ಲಿ ಇದನ್ನು ನಿರ್ಮಿಸಿತ್ತು.

ಮೊದಲು 303 ಅಡಿ ಎತ್ತರದ ಸ್ತಂಭದಲ್ಲಿ ಧ್ವಜಾರೋಹಣಕ್ಕೆ ತೆಲಂಗಾಣ ಸರಕಾರ ನಿರ್ಧರಿಸಿತ್ತು. ಆದರೆ ಇದಕ್ಕೆ ಬಾರತದ ವಿಮಾನ ನಿಲ್ದಾಣಗಳ ಪ್ರಾಧಿಕಾರ ಆಕ್ಷೇಪ ವ್ಯಕ್ತಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News