ಅಬೂಬಕ್ಕರ್
Update: 2016-06-07 22:57 IST
ಬಂಟ್ವಾಳ, ಜೂ. 7: ತಾಲೂಕಿನ ಕೊಯಿಲ ನಿವಾಸಿ, ಹೂವಿನ ಹಿರಿಯ ವ್ಯಾಪಾರಿ ಅಬೂಬಕ್ಕರ್ ಕೊಯಿಲ(70) ಅಸೌಖ್ಯದಿಂದ ಮಂಗಳವಾರ ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಮೃತರು ಮಂಗಳೂರಿನ ಹಂಪನ್‌ಕಟ್ಟೆಯಲ್ಲಿ ಹಲವಾರು ವರ್ಷ ’ಎಬಿಕೆ ಪ್ಲವರ್ ಮರ್ಚಂಟ್’ ಹೆಸರಿನಲ್ಲಿ ಹೂವಿನ ವ್ಯಾಪಾರ ನಡೆಸಿ ಬಳಿಕ ಬಂಟ್ವಾಳಕ್ಕೆ ಸ್ಥಳಾಂತರಿಸಿದ್ದರು.