ವಾಟ್ಸ್ಆ್ಯಪ್ ಅಲ್ಲಿ ಸಂದೇಶ ಕೋಟ್ ಮಾಡಬಹುದು

Update: 2016-06-11 07:19 GMT

ಆಂಡ್ರಾಯ್ಡ್ ಬೀಟಾ ಟೆಸ್ಟರ್‌ಗಳಿಗೆ ವಾಟ್ಸಪ್ ಹೊಸ ಫೀಚರನ್ನು ಬಿಟ್ಟಿದೆ. ಅದಯ ನಿರ್ದಿಷ್ಟ ಸಂದೇಶವನ್ನು ಕೋಟ್ ಮಾಡುವುದು ಮತ್ತು ಅದಕ್ಕೆ ಪ್ರತ್ಯುತ್ತರ ನೀಡುವ ಅವಕಾಶ ಕೊಟ್ಟಿದೆ. ಆಂಡ್ರಾಯ್ಡ್ ಬೀಟಾ ಬಿಲ್ಡ್ (version 2.16.118)  ಅಲ್ಲಿ ಈ ಅಪ್ ಡೇಟ್ ಇದೆ.

ವಾಟ್ಸ್ ಆ್ಯಪ್ ಅಪ್ ಡೇಟ್ ವ್ಯಕ್ತಿಯಿಂದ ವ್ಯಕ್ತಿಗೆ ಚಾಟ್ ಮತ್ತು ಗ್ರೂಪ್ ಗಳಿಗೆ ವಾಟ್ಸ್ಆ್ಯಪ್ ಅಪ್ ಡೇಟ್ ಇರುತ್ತದೆ. ಇದು ಬಳಸುವುದೂ ಸರಳ. ಬಳಕೆದಾರರು ಮೊದಲಿಗೆ ನಿರ್ದಿಷ್ಟ ಸಂದೇಶವನ್ನು ಕೋಟ್ ಮಾಡಲು ಆರಿಸಬೇಕು. ಅದು ಪಠ್ಯ ಅಥವಾ ಮೀಡಿಯಾ ಸಂದೇಶವೂ ಆಗಬಹುದು. ನಂತರ ಸಂದೇಶದ ಮೇಲೆ ಧೀರ್ಘವಾಗಿ ಒತ್ತಿದಾಗ ಪಾಪಪ್ ಜೊತೆಗೆ ಉತ್ತರ ಬರುತ್ತದೆ. ಅದನ್ನು ಫಾರ್ವರ್ಡ್ ಮತ್ತು ಡಿಲೀಟ್ ಮಾಡುವ ಆಯ್ಕೆಯು ಮೇಲ್ಭಾಗದಲ್ಲಿ ಬರುತ್ತದೆ.
ಮುಂದಿನ ಹಂತ ಇನ್ನೂ ಸರಳ. ರಿಪ್ಲೈ ಆಯ್ಕೆಯನ್ನು ಆರಿಸಿಕೊಳ್ಳಬೇಕು ಮತ್ತು ಕೋಟ್ ಮಾಡಿದ ಸಂದೇಶದ ಜೊತೆಗೆ ವಾಟ್ಸ್ಆ್ಯಪ್ ಪ್ರಿವ್ಯೂ ತೋರಿಸುತ್ತದೆ. ಸಣ್ಣ ಬಾಕ್ಸ್ ರಿಪ್ಲೈ ಮಾಡಲು ಸಿಗುತ್ತದೆ. ಈಗ ಬಳಕೆದಾರ ಉತ್ತರ ಟೈಪ್ ಮಾಡಿ ಸೆಂಡ್ ಬಟನ್ ಒತ್ತಿದರಾಯಿತು. ಒಮ್ಮೆ ನೀವು ರಿಪ್ಲೈ ಕೊಟ್ಟ ಮೇಲೆ ಅದು ಸಂಭಾಷಣೆಯ ಒಳಗೆ ಮೂಲ ಕೋಟ್ ಮಾಡಿದ ಸಂದೇಶಕ್ಕೆ ಅಟಾಚ್ ಆಗಿ ಅದರ ಮೇಲೆ ಇರುತ್ತದೆ. ಅದರ ಜೊತೆಗೆ ಕಳುಹಿಸಿದಾತನ ಕಲರ್ ಕೋಡ್ ಮಾಡಿದ ಹೆಸರೂ ಇರುತ್ತದೆ ಎನ್ನುತ್ತಾರೆ ಆಂಡ್ರಾಯ್ಡಾ ಪೊಲೀಸ್. ವಾಟ್ಸ್ಆ್ಯಪ್ ಗ್ರೂಪಲ್ಲಿ ವಿಭಿನ್ನ ಭಾಗವಹಿಸುವವರಿಗೆ ವಿಭಿನ್ನ ಬಣ್ಣಗಳ ಜೊತೆಗೆ ಕೋಡ್ ಮಾಡಲಿದೆ. ಗ್ರೂಪ್ ಚಾಟ್ ಗಳಿಗೆ ಇದು ಅತ್ಯುತ್ತಮವಾಗಿ ಹೊಂದಿಕೊಳ್ಳುತ್ತದೆ.
ಹೊಸ ವಾಟ್ಸ್ಆ್ಯಪ್ ಫೀಚರ್ ಮುಖ್ಯವಾಗಿ ಬಳಕೆದಾರರಿಗೆ ಅಗತ್ಯವಿದ್ದಾಗ ಸಂದೇಶಕ್ಕೆ ಸಂದರ್ಭ ಸೇರಿಸಲು ನೆರವಾಗುತ್ತದೆ. ಹಳೇ ಸಂದೇಶಗಳನ್ನು ಉಲ್ಲೇಖಿಸಿ ಮುಂದಿನ ಮಾತು ಆಡಲು ನೆರವಾಗುವಂತೆ ಬಳಕೆದಾರರಿಗೆ ವಾಟ್ಸ್  ಆ್ಯಪ್ ಈ ಅವಕಾಶ ಕೊಟ್ಟಿದೆ. ಈ ಅಪ್ ಡೇಟ್ ಕೇವಲ  ಬೀಟಾ ಟೆಸ್ಟರ್ ಗಳಿಗೆ ಮಾತ್ರ ಈಗ ಲಭ್ಯವಿದೆ. ಇದು ಬಳಕೆದಾರರಿಗೆ ಬೇಗನೇ ತಲುಪಲಿದೆ. ಆದರೆ ಅದು ಐಒಎಸ್ ಗೆ ಬೇಗನೇ ರಿಲೀಸ್ ಆಗಲಿದೆಯೇ ಎನ್ನುವುದು ಖಚಿತವಾಗಿಲ್ಲ. ವಾಟ್ಸ್  ಆ್ಯಪ್ ಇತ್ತೀಚೆಗೆ ತನ್ನ ವೇದಿಕೆಯನ್ನು ಬಳಕೆದಾರರಿಗೆ ಹಿತವಾಗಿಸುವಂತೆ ಮಾಡಲು ಹಲವು ಹೊಸ ಫೀಚರ್ ಗಳನ್ನು ತಂದಿದೆ. ಪಿಡಿಎಫ್, ಡಾಕ್ ಫೈಲ್ಸ್ ಇತ್ಯಾದಿಗಳನ್ನು ಶೇರ್ ಮಾಡುವ ಅವಕಾಶವನ್ನೂ ಕಲ್ಪಿಸಿಕೊಟ್ಟಿದೆ. ತೃತೀಯ ಹಸ್ತದ ಆ್ಯಪ್ ಆಗಿರುವ ಗೂಗಲ್ ಡ್ರೈವ್, ಒನ್ ಡ್ರೈವ್ ಅಂತಹ ಆಪ್ ಗಳನ್ನು ಬಳಸಲೂ ಅವಕಾಶವಿದೆ. ಈಗ ವಾಟ್ಸ್ಆ್ಯಪ್ ಸಂಪೂರ್ಣ ಎನ್ ಕ್ರಿಪ್ಟೆಡ್ ಸಂದೇಶವನ್ನು ಕಳುಹಿಸಲು ಅವಕಾಶ ಕೊಟ್ಟಿದೆ. ಹೀಗಾಗಿ ಮೂರನೆಯವರು ಸಂದೇಶ ಓದಲು ಸಾಧ್ಯವೇ ಇಲ್ಲ. ವಿಡಿಯೋ ಕಾಲ್ ಲಕ್ಷಣಕ್ಕಾಗಿ ಈಗ ವಾಟ್ಸ್ಆ್ಯಪ್ ಪ್ರಯತ್ನಿಸುತ್ತಿದೆ. ಮೊದಲಿಗೆ ಇದನ್ನು ಆಂಡ್ರಾಯ್ಡ್ ಬೀಟಾ ಬಿಲ್ಡ್ ನಲ್ಲಿ ಕೊಡಲಾಗಿತ್ತಾದರೂ ನಂತರ ತೆಗೆಯಲಾಗಿದೆ.

ಕೃಪೆ: www.happytrips.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News