ಅಶ್ರಫ್ ಹಾಜಿ
Update: 2016-06-11 22:44 IST
ಮಂಗಳೂರು, ಜೂ. 11: ಉದ್ಯಮಿ ಅಶ್ರಫ್ ಹಾಜಿ ಮಂಗಳೂರು (58) ಇಂದು ಮುಂಜಾನೆ ಕೇರಳದ ಕೊಚ್ಚಿನ್‌ನಲ್ಲಿ ಹೃದಯಾಘಾತದಿಂದ ನಿಧನರಾದರು.
ಅವರು ಕುತ್ತಾರ್‌ನಲ್ಲಿರುವ ಎಚ್.ಎಚ್. ಫೂಯೆಲ್ಸ್ ಸಂಸ್ಥೆಯನ್ನು ನಡೆಸುತ್ತಿದ್ದರು. ಮಂಗಳೂರಿನ ನಿವಾಸಿಯಾದ ಅಶ್ರಫ್ ಹಾಜಿ ಇತ್ತೀಚೆಗೆ ವಿದೇಶಕ್ಕೆ ತೆರಳಿ ಅಲ್ಲಿಂದ ಕೊಚ್ಚಿನ್‌ನ ತನ್ನ ಸಂಬಂಧಿಕರ ಮನೆಯಲ್ಲಿದ್ದರು. ಈ ಸಂದರ್ಭದಲ್ಲಿ ಅವರಿಗೆ ಹೃದಯಾಘಾತ ಉಂಟಾಗಿ ಸಾವನ್ನಪ್ಪಿದ್ದಾರೆ.
ಮೃತರು ಪತ್ನಿ ನಾಲ್ವರು ಗಂಡು ಹಾಗೂ ಒಂದು ಹೆಣ್ಣು ಮಗಳ ಸಹಿತ ಬಂಧು ಬಳಗವನ್ನು ಅಗಲಿದ್ದಾರೆ.