×
Ad

ಕಲ್ಕಟ್ಟ ಹಸನಬ್ಬ ಹಾಜಿ

Update: 2016-06-14 22:55 IST

ಮಂಗಳೂರು, ಜೂ.14: ಮಂಜನಾಡಿ ಅಲ್-ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್‌ನ ಖಾದಿಂ ಕಲ್ಕಟ್ಟ ಹಸನಬ್ಬ ಹಾಜಿ (72) ಅಲ್ಪಕಾಲದ ಅಸೌಖ್ಯದಿಂದ ಮಂಜನಾಡಿಯ ಉರುಮಣೆಯ ಸ್ವಗೃಹದಲ್ಲಿ ಇಂದು ನಿಧನರಾದರು.

ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರು ಸೇರಿ ಬಂಧು, ಮಿತ್ರರನ್ನು ಅಗಲಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮಾಜಿ ಉಪಾಧ್ಯಕ್ಷರಾಗಿ, ಮಂಜನಾಡಿ ಕೇಂದ್ರ ಜುಮಾ ಮಸೀದಿಯ ಮಾಜಿ ಕೋಶಾಧಿಕಾರಿ, ಕಲ್ಕಟ್ಟ ಇಲ್ಯಾಸ್ ಜುಮಾ ಮಸೀದಿಯ ಮಾಜಿ ಉಪಾಧ್ಯಕ್ಷರು ಮತ್ತು ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಸಂತಾಪ: ರಾಜ್ಯ ಅರೋಗ್ಯ ಸಚಿವ ಯು.ಟಿ.ಖಾದರ್, ಕಾಂಗ್ರೆಸ್ ಮುಖಂಡರಾದ ಸಂತೋಷ್ ಶೆಟ್ಟಿ, ಎನ್.ಎಸ್.ಕರೀಂ, ಹೈದರ್ ಪರ್ತಿಪ್ಪಾಡಿ, ಎಸ್ಸೆಸ್ಸೆಫ್ ರಾಜ್ಯ ಮುಖಂಡ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಎಸ್‌ವೈಎಸ್ ಮಂಜನಾಡಿ ಸೆಂಟರ್ ಅಧ್ಯಕ್ಷ ಮಹ್ಮೂದ್ ಹಾಜಿ ಕಂಡಿಕ, ಎಸ್‌ವೈಎಸ್ ಕಲ್ಕಟ್ಟ ಅಧ್ಯಕ್ಷ ಕೆ.ಎಂ.ಮೋನು, ಎಸ್ಸೆಸ್ಸೆಫ್ ಕಲ್ಕಟ್ಟ ಘಟಕದ ಅಧ್ಯಕ್ಷ ಅಬ್ದುರ್ರಝಾಕ್ ಸಂತಾಪ ಸೂಚಿಸಿದ್ದಾರೆ,.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News