ಅಬ್ದುಲ್ ರಶೀದ್
Update: 2016-06-14 23:03 IST
ಮಂಗಳೂರು, ಜೂ. 14: ಬೋಳಾರದ ಮುಳಿಹಿತ್ಲು ನಿವಾಸಿ, ಬ್ರೈಟ್ ಕ್ಯಾಟರರ್ಸ್‌ನ ಮಾಲಕ ಅಬ್ದುಲ್ ರಶೀದ್ (49) ಹೃದಯಾಘಾತದಿಂದ ಸೋಮವಾರ ತಡರಾತ್ರಿ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು.
ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಸೋಮವಾರ ರಾತ್ರಿ ಸುಮಾರು 12 ಗಂಟೆಗೆ ಮನೆಯಲ್ಲಿದ್ದ ಸಂದರ್ಭದಲ್ಲಿ ಹೃದಯಾಘಾತಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿರುವುದಾಗಿ ಅವರ ಕುಟುಂಬ ಮೂಲ ತಿಳಿಸಿದೆ.