ನಿಷೇಧದ ವಿರುದ್ಧ ಶರಪೋವಾ ಮೇಲ್ಮನವಿ

Update: 2016-06-14 18:34 GMT

ಝೂರಿಕ್, ಜೂ.14: ಅಂತಾರಾಷ್ಟ್ರೀಯ ಟೆನಿಸ್ ಸಂಸ್ಥೆ(ಐಟಿಎಫ್) ತನಗೆ ಟೆನಿಸ್‌ನಿಂದ ಎರಡು ವರ್ಷಗಳ ಕಾಲ ನಿಷೇಧ ವಿಧಿಸಿರುವುದನ್ನು ಪ್ರಶ್ನಿಸಿ ರಶ್ಯದ ಆಟಗಾರ್ತಿ ಮರಿಯಾ ಶರಪೋವಾ ಕ್ರೀಡಾ ಪಂಚಾಯ್ತಿ ನ್ಯಾಯಾಲಯಕ್ಕೆ (ಸಿಎಎಸ್) ಮೇಲ್ಮನವಿ ಸಲ್ಲಿಸಿದ್ದಾರೆ.

ತನಗೆ ವಿಧಿಸಿರುವ ನಿಷೇಧ ಶಿಕ್ಷೆಯನ್ನು ಸಂಪೂರ್ಣವಾಗಿ ಹಿಂಪಡೆಯಬೇಕು ಅಥವಾ ಕಡಿಮೆ ಮಾಡಬೇಕು ಎಂದು ಶರಪೋವಾ ಮೇಲ್ಮನವಿಯಲ್ಲಿ ಆಗ್ರಹಿಸಿದ್ದಾರೆ.

29ರ ಹರೆಯದ ಶರಪೋವಾರ ನಿಷೇಧಿತ ಡ್ರಗ್ ಮೆಲ್ಡೊನಿಯಮ್ ಸೇವಿಸಿ ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಕಾರಣ ಐಟಿಎಫ್ ಇತ್ತೀಚೆಗೆ ಅವರಿಗೆ 2 ವರ್ಷ ನಿಷೇಧಿಸಿತ್ತು.

 ಲಾೌಸನ್ ಮೂಲದ ಸಿಎಎಸ್ ಶರಪೋವಾ ಸಲ್ಲಿಸಿರುವ ಮೇಲ್ಮನವಿಯನ್ನು ಜು.18ಕ್ಕೆ ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News