ಯೋಗ ದಿನಕ್ಕೆ ಸಾರ್ವಜನಿಕ ರಜೆಯಿಲ್ಲ

Update: 2016-06-20 18:30 GMT

ಹೊಸದಿಲ್ಲಿ, ಜೂ.20: ದೇಶವು 2ನೆ ಅಂತಾರಾಷ್ಟ್ರೀಯ ಯೋಗದಿನವನ್ನು ಆಚರಿಸಲಿರುವ ಮಂಗಳವಾರದಂದು ಸಾರ್ವಜನಿಕ ರಜೆ ಇರುವುದಿಲ್ಲ. ಕೇಂದ್ರ ಸರಕಾರಿ ನೌಕರರಿಗೆ ಯೋಗವು ಸ್ವಯಂ ಇಚ್ಛೆಯದಾಗಿದೆ. ಎಲ್ಲ ಸರಕಾರಿ ಕಚೇರಿಗಳು ನಾಳೆ ತೆರೆದಿರುತ್ತವೆಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಹಿರಿಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.ಇದು ಸ್ವಯಂ ಇಚ್ಛೆಯದಾಗಿದೆಯೇ ಹೊರತು ಕಡ್ಡಾಯವಲ್ಲ. ದೇಶಾದ್ಯಂತ ನಡೆಯಲಿರುವ ಯೋಗ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶವನ್ನು ನೌಕರರಿಗೆ ನೀಡುವಂತೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆಯೆಂದು ಅವರು ಹೇಳಿದ್ದಾರೆ. ಕೇಂದ್ರ ಸರಕಾರದ ಅಧೀನ ಸುಮಾರು 50 ಲಕ್ಷ ನೌಕರರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News