ಹಲಾಲ್ ಮಾಂಸದ ರಫ್ತು ಕಂಪೆನಿಯ ಸ್ಥಾಪಕ ನಾನೇ ಎಂದು ಒಪ್ಪಿಕೊಂಡ ಬಿಜೆಪಿ ಶಾಸಕ ಸಂಗೀತ್ ಸೋಮ್

Update: 2016-06-21 04:13 GMT

ಲಕ್ನೋ,ಜೂ.21: ಗೋಮಾಂಸ ವಿರೋಧಿ ಚಳವಳಿಯ ಮುಂಚೂಣಿ ನಾಯಕ, ಮುಝಫ್ಫರ್‌ನಗರ ಗಲಭೆಯ ಆರೋಪಿ ಹಾಗೂ ಬಿಜೆಪಿ ಶಾಸಕ ಸಂಗೀತ್ ಸೋಮ್, ಹಲಾಲ್ ಮಾಂಸ ರಫ್ತು ಕಂಪನಿಯ ಮಾಲಕ ಎಂಬ ಸತ್ಯ ಇದೀಗ ಬಹಿರಂಗವಾಗಿದೆ. ಅಲ್- ದುವಾ ಫುಡ್ ಪ್ರೊಸೆಸಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ಸೋಮ್, ಮೊಯಿನುದ್ದೀನ್ ಖುರೇಶಿ ಹಾಗೂ ಮತ್ತೊಬ್ಬ ಪಾಲುದಾರನ ಜತೆ ಸೇರಿ 2005ರಲ್ಲಿ ಆರಂಭಿಸಿದ್ದರು. ಕಂಪನಿಯ ವೆಬ್‌ಸೈಟ್ ಪ್ರಕಾರ, ಇದು ಈಗ ಹಲಾಲ್ ಮಾಂಸ ಉತ್ಪಾದನೆ ಹಾಗೂ ರಫ್ತಿನ ಪ್ರಮುಖ ಕಂಪನಿಯಾಗಿದೆ.

ದೇಶದಲ್ಲಿ ಮಾಂಸ ರಫ್ತು ದಂಧೆ ಹೆಚ್ಚುತ್ತಿದೆ ಎಂಬ ಬಿಜೆಪಿ ಕೂಗಿಗೆ ವಿರುದ್ಧವಾಗಿ ಪಕ್ಷದ ಶಾಸಕನೇ ಈ ವಹಿವಾಟಿನಲ್ಲಿ ತೊಡಗಿಸಿಕೊಂಡಿರುವುದು ಪಕ್ಷವನ್ನು ತೀವ್ರ ಮುಜುಗರಕ್ಕೆ ಸಿಲುಕಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 2014ನೇ ಚುನಾವಣಾ ಪ್ರಚಾರದಲ್ಲಿ "ಅಧಿಕ ಮಾಂಸ ರಫ್ತು ಹೆಚ್ಚು ಗೋಹತ್ಯೆಗೆ ಕಾರಣವಾಗುತ್ತದೆ" ಎಂದು ಪ್ರತಿಪಾದಿಸಿದ್ದರು.

ಸೋಮ್ ಮಾಂಸ ರಫ್ತು ವಹಿವಾಟಿನಲ್ಲಿ ತೊಡಗಿಸಿಕೊಂಡಿರುವುದಕ್ಕೆ ದಾಖಲೆ ಸಿಕ್ಕಿದ್ದರೂ, ಅವರನ್ನು ಸಂಪರ್ಕಿಸಿದಾಗ, ಸೋಮ್ ನಿರಾಕರಿಸಿದ್ದಾರೆ. "ನಾನು ಮಾಂಸ ಮಾರಾಟ ವಹಿವಾಟಿನಲ್ಲಿ ತೊಡಗಿಸಿಕೊಂಡಿಲ್ಲ. ನಾನು ಅಪ್ಪಟ ಹಿಂದೂ. ಹಿಂದೂ ಭಾವನೆಗಳಿಗೆ ವಿರುದ್ಧವಾದ ಯಾವ ಕೆಲಸವೂ ಮಾಡುವುದಿಲ್ಲ. ನಾನು ಠಾಕೂರ್ ಆಗಿದ್ದೂ, ಮೊಟ್ಟೆ ಕೂಡಾ ಸೇವಿಸುವುದಿಲ್ಲ" ಎಂದು ಸ್ಪಷ್ಟನೆ ನೀಡಿದರು.

ಆದರೆ 2005 ಡಿಸೆಂಬರ್ 19ರಂದು ಸಲ್ಲಿಸಿದ, ಅಲ್- ದುವಾ ಆಹಾರ ಸಂಸ್ಕರಣೆ ಕಂಪನಿಯ ಪಾಲುದಾರಿಕೆ ಪತ್ರದ ಅನ್ವಯ, ಅರಬ್ ದೇಶಗಳಿಗೆ ಹಲಾಲ್ ಮಾಂಸ ಮಾರಾಟ ಮಾಡುತ್ತಿರುವ ಕಂಪನಿಯ ಕಾರ್ಯಚಟುವಟಿಕೆಗಳು ಮುಖ್ಯವಾಗಿ "ಮಾಂಸ ಹಾಗೂ ಮಾಂಸದ ಉತ್ಪನ್ನಗಳ ಉತ್ಪಾದನೆ, ಸಂಸ್ಕರಣೆ, ಖರೀದಿ ಮತ್ತು ಮಾರಾಟ"

ಈ ಕಂಪನಿ ಸಾಲ ನೀಡಿರುವುದು ಮತ್ತು ಪಡೆದಿರುವುದು, 2005-06ರಲ್ಲಿ 30.78 ಲಕ್ಷ ರೂಪಾಯಿಗೆ ಭೂಮಿ ಖರೀದಿಸಿರುವುದಕ್ಕೂ ದಾಖಲೆಗಳು ಲಭ್ಯವಾಗಿವೆ. 2008ರ ಮಾರ್ಚ್ 27ರಂದು ಕಂಪನಿಯ 20 ಸಾವಿರ ಷೇರುಗಳನ್ನು ಮಾರಾಟ ಮಾಡಿ ನಿರ್ದೇಶಕತ್ವವನ್ನು ನಸೀರಾ ಬೇಗಂ ಎಂಬವರಿಗೆ ವಹಿಸಿಕೊಟ್ಟಿದ್ದಾರೆ. ಸೋಮ್ ಅವರು ಪ್ರಮುಖ ಮಾಂಸ ರಫ್ತುದಾರ ಖುರೇಷಿ ಜತೆ ಅಲ್ ಅನಾಮ್ ಆಗ್ರೊ ಫುಡ್ಸ್‌ನಲ್ಲೂ ಪಾಲುದಾರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News