36 ಸಾವಿರ ಕಾಲೇಜುಗಳು ಭಾರತದಲ್ಲಿ ಎಲ್ಲಿವೆ?

Update: 2016-06-22 18:44 GMT

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ 2010ರಲ್ಲಿ ರಾಷ್ಟ್ರವ್ಯಾಪಿ ಸಮೀಕ್ಷೆ ನಡೆಸಲು ಒಂದು ಕಾರ್ಯಪಡೆಯನ್ನು ನೇಮಕ ಮಾಡಿತು. ಭಾರತದ ದೊಡ್ಡ ಸಂಖ್ಯೆಯ ಜನರಿಗೆ ಮಹತ್ವದ ಶಿಕ್ಷಣವನ್ನು ಒದಗಿಸಲು ಸಾಧ್ಯವೇ ಇಲ್ಲ ಎನ್ನುವಂಥ ಚಿತ್ರಣವನ್ನು ಸರಕಾರಕ್ಕೆ ಈ ಕಾರ್ಯಪಡೆ ನೀಡಿತು.

ಈ ಯೋಜನೆಗೆ ‘ಆಲ್ ಇಂಡಿಯಾ ಸರ್ವೇ ಆನ್ ಹೈಯರ್ ಎಜ್ಯುಕೇಶನ್’ ಎಂದು ಹೆಸರಿಸಲಾಯಿತು. ಪಾಶ್ಚಿಮಾತ್ಯ ನಾಗರಿಕತೆಗಳಂತೆ ಇದು ಒಂದು ಉತ್ತಮ ಯೋಚನೆ. ಸರಕಾರಿ ಕಾರಣಗಳಿಗಾಗಿ ಇದನ್ನು ಸ್ವಯಂಪ್ರೇರಿತ ಚಟುವಟಿಕೆಯಾಗಿ ಕೈಗೊಳ್ಳಲಾಯಿತು. ಅಂದರೆ ಈ ಸಮೀಕ್ಷಾ ತಂಡಕ್ಕೆ ಮಾಹಿತಿಗಳನ್ನು ನೀಡುವುದು ಯಾವ ಶಿಕ್ಷಣ ಸಂಸ್ಥೆಗಳಿಗೂ ಕಡ್ಡಾಯವಾಗಿರಲಿಲ್ಲ. ಇಂಥ ಮಹತ್ವದ ಮಾಹಿತಿಗಳನ್ನು ಪಡೆಯುವುದು ಸುಲಭ ಸಾಧ್ಯವೇನೂ ಅಲ್ಲ. ಆದ್ದರಿಂದ ಸಹಜವಾಗಿಯೇ ಇದರ ಉದ್ದೇಶ ಈಡೇರುವುದು ಅಸಂಭವ ಎನಿಸಿತು.

ಇಷ್ಟಾಗಿಯೂ ಈ ಸಮೀಕ್ಷಾ ಕಾರ್ಯ ಆರಂಭವಾದಾಗಿನಿಂದ ಬಲಗೊಳ್ಳುತ್ತಾ ಹೋಯಿತು. ಈ ವರ್ಷದ ಆರಂಭದಲ್ಲಿ ಮೊದಲ ಬಾರಿಗೆ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿತು. ಇದು ಅನರ್ಘ್ಯರತ್ನ; ಆದರೆ ದೋಷಯುಕ್ತ. ವಿಶ್ವವಿದ್ಯಾನಿಲಯಗಳು, ರಾಷ್ಟ್ರೀಯ ಸಂಸ್ಥೆಗಳು, ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕಾಲೇಜುಗಳನ್ನು ವಿಶ್ಲೇಷಿಸುವಾಗ ಯುಜಿಸಿ, ಎಂಸಿಐ ಹಾಗೂ ಎಐಸಿಟಿಇ ಅಂಕಿ ಅಂಶಗಳನ್ನೇ ಅವಲಂಬಿಸಬೇಕಾದಂತೆ, ದೇಶದಲ್ಲಿ ಇರುವ ಸರಿಸುಮಾರು 36 ಸಾವಿರ ಕಾಲೇಜುಗಳ ಸ್ಥಿತಿಗತಿಯ ಬಗ್ಗೆ ಯಾವುದೇ ಒಳನೋಟ ಲಭಿಸುವ ಸಾಧ್ಯತೆ ಇರಲಿಲ್ಲ. ಇದುವರೆಗೂ ಅದು ನಿಜವೂ ಆಗಿದೆ.

ಉನ್ನತ ಶಿಕ್ಷಣದ ಮೂಲಭೂತ ಅಂಶ ಎನಿಸಿದ ಕಾಲೇಜುಗಳು, ಅದರ ಬೀಜ ಕೂಡಾ. ಅಲ್ಲಿ ಸಾಮಾನ್ಯವಾಗಿ ನಿರೀಕ್ಷೆಯನ್ನು ಹೊಂದಿರುವ ಯುವ ಸಮೂಹ ತಮ್ಮ ಉನ್ನತ ಜೀವನದ ಹುಡುಕಾಟದಲ್ಲಿರುತ್ತದೆ. ದೀರ್ಘಕಾಲದವರೆಗೂ ಇಂಥ ಕಾಲೇಜುಗಳು ಎಷ್ಟು ಇವೆ ಎಂಬ ಬಗ್ಗೆಯೇ ನಮಗೆ ಕಲ್ಪನೆ ಇರಲಿಲ್ಲ. ಇಂದಿಗೂ ನಿಖರವಾದ ಅಂಕಿ ಸಂಖ್ಯೆ ಇಲ್ಲವಾದರೂ, ಇದೀಗ ಕಾರ್ಯಪಡೆಯ ಅಂಕಿ ಅಂಶವನ್ನೇ ನಂಬಬೇಕಾಗಿದೆ. 2014ರ ಅಂಕಿ ಅಂಶಗಳ ಪ್ರಕಾರ, ಮುಂದಿನ ಎಲ್ಲ ವಿಶ್ಲೇಷಣೆಗಳಿಗೂ 34 ಸಾವಿರಕ್ಕಿಂತಲೂ ಅಕ ಕಾಲೇಜುಗಳು ಎಂಬ ಅಂಕಿ ಅಂಶವನ್ನೇ ನಾವು ಬಳಸಿಕೊಳ್ಳಬೇಕಾಗುತ್ತದೆ. ಸುಮಾರು 32,500 ಕಾಲೇಜುಗಳು ಇರಬಹುದು ಎನ್ನುವುದು ನಮ್ಮ ಅಂದಾಜು.

ಅಂಕಿ ಅಂಶಗಳಿಂದ ತಿಳಿದುಬರುವ ಪ್ರಮುಖ ಅಂಶವೆಂದರೆ 2000ನೆ ಇಸವಿಯಿಂದೀಚೆಗೆ ಭಾರತದ ಶಿಕ್ಷಣ ಕ್ಷೇತ್ರ ಗಮನಾರ್ಹವಾಗಿ ಬದಲಾಗುತ್ತಿದೆ. 2003ರಿಂದೀಚೆಗೆ ಪ್ರತೀ ವರ್ಷ ಸುಮಾರು 1000 ಕಾಲೇಜುಗಳು ಸೇರ್ಪಡೆಯಾಗುತ್ತವೆ. ಇದರಲ್ಲೂ ಅತಿಹೆಚ್ಚು ಕಾಲೇಜುಗಳು ಆರಂಭವಾಗಿರುವುದು 2007ರಿಂದ 2009ರ ಅವಯಲ್ಲಿ. ಅಂದರೆ ಈ ಕಾಲಘಟ್ಟದಲ್ಲಿ ಒಟ್ಟು ಸಂಖ್ಯೆಯ ಐದನೆ ಒಂದರಷ್ಟು ಅಂದರೆ ಸುಮಾರು 7,206 ಕಾಲೇಜುಗಳು ಸೇರ್ಪಡೆಯಾದವು.

ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ಶೇ. 59ರಷ್ಟು ಕಾಲೇಜುಗಳು ಗ್ರಾಮೀಣ ಪ್ರದೇಶದಲ್ಲಿವೆ. ಹಿಮಾಚಲ ಪ್ರದೇಶ, ಕೇರಳ, ತಮಿಳುನಾಡು ಹಾಗೂ ಉತ್ತರ ಪ್ರದೇಶದಲ್ಲಿ ಶೇ. 75ಕ್ಕಿಂತಲೂ ಅಕ ಕಾಲೇಜುಗಳು ಗ್ರಾಮೀಣ ಪ್ರದೇಶದಲ್ಲಿವೆ. ಮಧ್ಯಪ್ರದೇಶ, ಮಿಜೋರಾಂ, ಮೇಘಾಲಯ ಹಾಗೂ ನಾಗಾಲ್ಯಾಂಡ್‌ನಲ್ಲಿ ಶೇ. 50ಕ್ಕಿಂತ ಅಕ ಕಾಲೇಜುಗಳು ನಗರ ಪ್ರದೇಶಗಳಲ್ಲಿವೆ.
ಶೇ. 12ರಷ್ಟು ಕಾಲೇಜುಗಳನ್ನು ಸ್ವಾಯತ್ತ ಕಾಲೇಜುಗಳು ಎಂದು ವರ್ಗೀಕರಿಸಲಾಗಿದೆ. ಇವುಗಳ ಪಠ್ಯ ಹಾಗೂ ಇತರ ವಿಷಯಗಳಲ್ಲಿ ಯಾವುದೇ ವಿಶ್ವವಿದ್ಯಾನಿಲಯಗಳ ಮಾನ್ಯತೆ ಅಥವಾ ಸಂಲಗ್ನತ್ವ ಇಲ್ಲ. ದಿಲ್ಲಿ ಹಾಗೂ ಹಿಮಾಚಲ ಪ್ರದೇಶದಲ್ಲಿ ಶೇ. 30ರಷ್ಟು ಸಂಸ್ಥೆಗಳು ಸ್ವಾಯತ್ತ ಶಿಕ್ಷಣ ಸಂಸ್ಥೆಗಳಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತ ತೀರಾ ಹೆಚ್ಚು. ಇದಕ್ಕೆ ವಿರುದ್ಧವಾಗಿ ತೆಲಂಗಾಣ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಹಾಗೂ ಸಿಕ್ಕಿಂಗಳಲ್ಲಿ ಬಹುತೇಕ ಸ್ವಾಯತ್ತ ಶಿಕ್ಷಣ ಸಂಸ್ಥೆಗಳಿಲ್ಲ.

ರಾಜ್ಯಗಳು

ಭಾರತದ ಒಕ್ಕೂಟ ವ್ಯವಸ್ಥೆ ಎಂದರೆ, ಎರಡು ರಾಜ್ಯಗಳು ಸಮನಾಗಿರಲು ಸಾಧ್ಯವೇ ಇಲ್ಲ. ವಿಶ್ವವಿದ್ಯಾನಿಲಯಗಳ ವಿಶ್ಲೇಷಣೆಯಿಂದ ಈಗಾಗಲೇ ತಿಳಿದು ಬಂದಿರುವ ಅಂಶವೆಂದರೆ, ಐದು ದಕ್ಷಿಣ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ಉನ್ನತ ಶಿಕ್ಷಣದಲ್ಲಿ ಸಿಂಹಪಾಲು ಹೊಂದಿವೆ. ಅದೇ ಪ್ರವೃತ್ತಿ ಕಾಲೇಜುಗಳ ವಿಚಾರದಲ್ಲೂ ಕಂಡುಬರುತ್ತದೆ.

ಉತ್ತರ ಪ್ರದೇಶದಲ್ಲಿ ಅಕ ಸಂಖ್ಯೆಯ ಕಾಲೇಜುಗಳಿದ್ದರೂ, ಪ್ರತೀ ಲಕ್ಷ ಜನಸಂಖ್ಯೆಗೆ ಹೋಲಿಸಿದರೆ, ಉತ್ತರ ಪ್ರದೇಶ, ರಾಷ್ಟ್ರೀಯ ಸರಾಸರಿಗಿಂತ ತೀರಾ ಕೆಳಗಿದೆ. ಪ್ರತೀ ಲಕ್ಷ ಜನಸಂಖ್ಯೆಗೆ ಒಂದಕ್ಕಿಂತ ಕಡಿಮೆ ಕಾಲೇಜುಗಳನ್ನು ಹೊಂದಿರುವ ಜಾರ್ಖಂಡ್ ಹಾಗೂ ಬಿಹಾರ ಪಟ್ಟಿಯ ತಳದಲ್ಲಿವೆ.

2000ನೇ ಇಸ್ವಿಯಿಂದೀಚಿನ ಬೆಳವಣಿಗೆಯನ್ನು ಗಮನಿಸಿದರೆ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಕರ್ನಾಟಕದಲ್ಲಿ ಒಂದು ವರ್ಷದಲ್ಲಿ 350 ಕಾಲೇಜುಗಳು ಹೊಸದಾಗಿ ಆರಂಭವಾಗಿವೆ. ಅಂದರೆ ದಿನಕ್ಕೊಂದು ಹೊಸ ಕಾಲೇಜು!. ಉತ್ತರಪ್ರದೇಶದಲ್ಲಿ 2014ರಲ್ಲಿ 490 ಕಾಲೇಜುಗಳು ಸ್ಥಾಪನೆಯಾಗಿದ್ದು, ದಿನಕ್ಕೆ ಒಂದಕ್ಕಿಂತಲೂ ಹೆಚ್ಚು ಕಾಲೇಜುಗಳು ಇಲ್ಲಿ ತಲೆ ಎತ್ತಿವೆ. ಹಲವು ರಾಜ್ಯಗಳಲ್ಲಿ 2000ನೆ ಇಸವಿ ಬಳಿಕ ಈ ಗಣನೀಯ ಪ್ರಗತಿ ಕಂಡುಬಂದಿದ್ದರೂ, ಕೆಲ ರಾಜ್ಯಗಳಲ್ಲಿ ಭಿನ್ನ ಪರಿಸ್ಥಿತಿಯೂ ಇದೆ.

ಅಸ್ಸಾಂ ಹಾಗೂ ಬಿಹಾರದಲ್ಲಿ ಹಿಂದಿನ ಕೆಲ ದಶಕಗಳಿಗೆ ಹೋಲಿಸಿದರೆ, 2000ನೆ ಇಸವಿಯ ಬಳಿಕ ಬೆಳವಣಿಗೆ ಕುಂಠಿತವಾಗಿದೆ. ಅಸ್ಸಾಂನಲ್ಲಿ 1990ರ ದಶಕದಲ್ಲಿ 140 ಹೊಸ ಕಾಲೇಜುಗಳು ಆರಂಭವಾಗಿವೆ. ಇದು ಬಹುಶಃ ಆ ರಾಜ್ಯದ ಅತ್ಯುತ್ತಮ ಸಾಧನೆಯ ಅವ. ಬಿಹಾರದಲ್ಲಿ ಈ ಗಣನೀಯ ಪ್ರಗತಿ ಕಂಡುಬಂದದ್ದು 1970ರ ದಶಕದಲ್ಲಿ ಮತ್ತು 1980ರ ದಶಕದ ಮೊದಲಾರ್ಧದಲ್ಲಿ. ದೇಶದ ಇತರ ಎಲ್ಲ ಕಡೆಗಳಲ್ಲೂ ಕಾಲೇಜುಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಅವಯಲ್ಲಿ ಈ ರಾಜ್ಯಗಳಲ್ಲಿ ಏಕೆ ಆಗಿಲ್ಲ?

ಶಾಸನಬದ್ಧ ಸಂಸ್ಥೆಗಳು
ಪ್ರತೀ ಕಾಲೇಜುಗಳಲ್ಲಿ ಕೂಡಾ ಬೋಧನೆಯಾಗುವ ಕೋರ್ಸ್ ಗಳಿಗೆ ಅನುಗುಣವಾಗಿ ಆ ಕಾಲೇಜು ಒಂದು ಶಾಸನಬದ್ಧ ಸಂಸ್ಥೆಯ ನಿಯಂತ್ರಣದಲ್ಲಿ ಬರುತ್ತದೆ. ಅಂದರೆ ಅದರ ಮೇಲುಸ್ತುವಾರಿ ಹೊಣೆ ಒಂದು ಶಾಸನಬದ್ಧ ಸಂಸ್ಥೆಯದ್ದಾಗಿರುತ್ತದೆ. ವಿಜ್ಞಾನ ಹಾಗೂ ಕಲಾ ಕಾಲೇಜುಗಳು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ನೇರ ಸುಪರ್ದಿಯಲ್ಲಿ ಬರುತ್ತವೆ. ಇಂಜಿನಿಯರಿಂಗ್ ಮತ್ತು ವ್ಯವಸ್ಥಾಪನಾ ಕಾಲೇಜುಗಳು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಂಸ್ಥೆ ಮಂಡಳಿಯ ಅೀನದಲ್ಲಿ ಬಂದರೆ, ಕಾನೂನು, ವೈದ್ಯಕೀಯ, ವಾಸ್ತುಶಿಲ್ಪ ಸಂಸ್ಥೆಗಳಿಗೆ ಅವುಗಳದ್ದೇ ಪ್ರತ್ಯೇಕ ಮಂಡಳಿಗಳಿವೆ. ಆದರೆ ಉನ್ನತ ಶಿಕ್ಷಣದ ನಂಬಿಕೆ ದ್ರೋಹದ ವಿಚಾರ ಬಂದಾಗ ಮೊದಲಿಗೆ ಕಾಣುವುದು ಇಂಥ ಶಿಕ್ಷಣ ಸಂಸ್ಥೆಗಳನ್ನು. ಆದರೆ ನ್ಯಾಷನಲ್ ಕೌನ್ಸಿಲ್ ಾರ್ ಟೀಚರ್ಸ್‌ ಎಜ್ಯುಕೇಶನ್‌ಗೆ ಸಂಲಗ್ನತ್ವ ಹೊಂದಿದ 5,032 ಕಾಲೇಜುಗಳಿವೆ ಎನ್ನುವ ವಿಚಾರ ನಿಮಗೆ ತಿಳಿದಿದೆಯೇ? ಅಂದರೆ ಈ ಸಂಖ್ಯೆ ಎಲ್ಲ ಇಂಜಿನಿಯರಿಂಗ್ ಹಾಗೂ ವ್ಯವಸ್ಥಾಪನಾ ಕಾಲೇಜುಗಳ ಸಂಖ್ಯೆಗಿಂತ ಅಧಿಕ.

ಇನ್ನೊಂದೆಡೆ ನ್ಯಾಷನಲ್ ಕೌನ್ಸಿಲ್ ಾರ್ ಹೋಟೆಲ್ ಮ್ಯಾನೇಜ್‌ಮೆಂಟ್ ಆ್ಯಂಡ್ ಕೇಟರಿಂಗ್ ಟೆಕ್ನಾಲಜಿ ಅೀನದಲ್ಲಿ ಕೇವಲ 26 ಕಾಲೇಜುಗಳಿವೆ. ಹೋಟೆಲ್ ಮ್ಯಾನೇಜ್‌ಮೆಂಟ್ ಎಂಬ ಪದವನ್ನು ನೀವು ಸರ್ಚ್ ಇಂಜಿನ್‌ಗಳಲ್ಲಿ ಹಾಕಿ ನೋಡಿದರೆ 93 ಕಾಲೇಜುಗಳ ವಿವರ ಸಿಕ್ಕಿದರೂ, ಎನ್‌ಸಿಎಚ್‌ಎಂಸಿ ಸಂಲಗ್ನತ್ವ ಪಡೆದಿರುವುದು ಕೇವಲ 26 ಮಾತ್ರ. ಅಂದರೆ ಅರ್ಧಕ್ಕಿಂತಲೂ ಹೆಚ್ಚು ಕಾಲೇಜುಗಳು, ಯುಜಿಸಿ ಅಥವಾ ಎಐಸಿಟಿಇ ಸಂಲಗ್ನತ್ವ ಹೊಂದಿರುವುದಾಗಿ ಘೋಷಿಸಿಕೊಂಡಿವೆ. ಆದರೆ ಎಐಸಿಟಿನಲ್ಲಿ ಅಖಿತ ಭಾರತ ಆತಿಥ್ಯ ಹಾಗೂ ಪ್ರವಾಸೋದ್ಯಮ ನಿರ್ವಹಣೆ ಮಂಡಳಿ ಎಂಬ ಅಂಗಸಂಸ್ಥೆ ಇಲ್ಲ. ಇದನ್ನು ಪ್ರತ್ಯೇಕವಾಗಿ ಆರಂಭಿಸಲು ಉದ್ದೇಶಿಸಿದೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಭಾರತೀಯ ಅಕಾರಿಗಳು ಆಯುಷ್ ಸಚಿವಾಲಯದಡಿ ಹೋಮಿಯೋಪತಿ ಹಾಗೂ ಭಾರತೀಯ ವೈದ್ಯಪದ್ಧತಿಗಳಿಗಾಗಿ ಎರಡು ಪ್ರತ್ಯೇಕ ಮಂಡಳಿ ಸ್ಥಾಪನೆಯ ಅಗತ್ಯತೆಯನ್ನೂ ಮನಗಂಡಿದ್ದಾರೆ. ಸೆಂಟ್ರಲ್ ಕೌನ್ಸಿಲ್ ಆ್ ಹೋಮಿಯೋಪತಿ ಹಾಗೂ ಸೆಂಟ್ರಲ್ ಕೌನ್ಸಿಲ್ ಆ್ ಇಂಡಿಯನ್ ಮೆಡಿಸಿನ್‌ನಲ್ಲಿ ಆಯುರ್ವೇದ, ಯುನಾನಿ ಹಾಗೂ ಸಿದ್ಧ ಔಷಧ ಪದ್ಧತಿಯನ್ನು ಸೇರಿಸಲು ಉದ್ದೇಶಿಸಲಾಗಿದೆ.

 ಆಯುಷ್ ಸಚಿವಾಲಯವು ಏಳು ಸಂಶೋಧನಾ ಮಂಡಳಿಗಳನ್ನೂ ಹೊಂದಿದೆ. ಸೆಂಟ್ರಲ್ ಕೌನ್ಸಿಲ್ ಾರ್ ರಿಸರ್ಚ್ ಇನ್ ಆಯುರ್ವೇದ ಸೈನ್ಸಸ್, ಸೆಂಟ್ರಲ್ ಕೌನ್ಸಿಲ್ ಾರ್ ರಿಸರ್ಚ್ ಇನ್ ಸಿದ್ಧ, ಸೆಂಟ್ರಲ್ ಕೌನ್ಸಿಲ್ ಾರ್ ರಿಸರ್ಚ್ ಇನ್ ಯುನಾನಿ ಮೆಡಿಸಿನ್, ಸೆಂಟ್ರಲ್ ಕೌನ್ಸಿಲ್ ಾರ್ ರಿಸರ್ಚ್ ಇನ್ ಹೋಮಿಯೋಪತಿ, ಸೆಂಟ್ರಲ್ ಕೌನ್ಸಿಲ್ ಾರ್ ರಿಸರ್ಚ್ ಇನ್ ಯೋಗ ಆ್ಯಂಡ್ ನ್ಯಾಚುರೋಪತಿ, ಾರ್ಮಕೊಪಿಯಲ್ ಲ್ಯಾಬೊರೇಟರಿ ಾರ್ ಇಂಡಿಯನ್ ಮೆಡಿಸಿನ್ ಹಾಗೂ ಹೋಮಿಯೊಪತಿಕ್ ಾರ್ಮಕೊಪಿಯಾ ಲ್ಯಾಬೊರೇಟರಿ ಆಯುಷ್ ಸಚಿವಾಲಯದಡಿ ಕಾರ್ಯ ನಿರ್ವಹಿಸುತ್ತಿವೆ.

ಸಂಶೋಧನೆ ಮಾತ್ರ ಅತ್ಯಲ್ಪ

ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ ಅಂಕಿ ಅಂಶಗಳಿಂದ ತಿಳಿದು ಬರುವಂತೆ ದೇಶದಲ್ಲಿ 379 ವೈದ್ಯಕೀಯ ಕಾಲೇಜುಗಳಿವೆ. ಆದರೆ ಎಐಎಸ್‌ಎಚ್‌ಇ ಸಮೀಕ್ಷೆಯ ಅಂಕಿ ಅಂಶದಂತೆ ಈ ಕಾಲೇಜುಗಳ ಸಂಖ್ಯೆ 318. ಅಂದರೆ 52 ಕಾಲೇಜುಗಳು ಎಐಎಸ್‌ಎಚ್‌ಇ ಅಂಕಿ ಅಂಶಗಳಿಂದ ನಾಪತ್ತೆಯಾಗಿವೆ.

ಕೆಲ ಕಾಲೇಜುಗಳು ಒಂದಕ್ಕಿಂತ ಹೆಚ್ಚು ಶಾಸನಬದ್ಧ ಸಂಸ್ಥೆಯ ಸಂಲಗ್ನತ್ವ ಹೊಂದಿವೆ. ಉದಾಹರಣೆಗೆ ತಮಿಳುನಾಡಿನ ಅನ್ನಾಮಲೈಯಾರ್ ಕಾಲೇಜ್ ಆ್ ಪ್ಯಾರಾ ಮೆಡಿಕಲ್ ಸೈನ್ಸಸ್, ಪ್ರತಿಯೊಂದು ಶಾಸನಬದ್ಧ ಸಂಸ್ಥೆಯ ಸಂಲಗ್ನತ್ವವನ್ನು ಹೊಂದಿರುವುದಾಗಿಯೂ ಹೇಳಿಕೊಂಡಿದೆ. ಪಂಜಾಬ್‌ನ ತಾರಾ ವಿವೇಕ್ ಕಾಲೇಜು, ಮೊದಲ ಒಂಬತ್ತು ಸಂಸ್ಥೆಗಳ ಸಂಲಗ್ನತ್ವ ಹೊಂದಿರುವುದಾಗಿ ಹೇಳಿಕೊಂಡಿದೆ.

ವ್ಯವಸ್ಥಾಪನೆ

ಎಐಎಸ್‌ಎಚ್‌ಇ ಮಾಹಿತಿಯಲ್ಲಿ ಏಳು ವಿಭಿನ್ನ ಬಗೆಯ ವ್ಯವಸ್ಥಾಪನಾ ವಿಧಾನಗಳನ್ನು ಪಟ್ಟಿ ಮಾಡಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರ, ಸ್ಥಳೀಯ ಸಂಸ್ಥೆ, ವಿಶ್ವವಿದ್ಯಾನಿಲಯ, ಅನುದಾನಿತ ಕಾಲೇಜು ಹಾಗೂ ಖಾಸಗಿ ಅನುದಾನರಹಿತ ಸಂಸ್ಥೆಗಳು. ಸರಕಾರಿ ಒಡೆತನದ ಕಾಲೇಜುಗಳು ಸಹಜವಾಗಿಯೇ ಸರಕಾರದಿಂದ ಅನುದಾನ ಪಡೆಯುತ್ತವೆ. ಖಾಸಗಿ ಅನುದಾನಿತ ಕಾಲೇಜುಗಳ ಮಾಲಕತ್ವ ಖಾಸಗಿಯವರ ಕೈಯಲ್ಲಿದ್ದರೂ, ಇವು ಸರಕಾರದಿಂದ ನಿರಂತರವಾಗಿ ನಿರ್ವಹಣಾ ನಿಯನ್ನು ಪಡೆಯುತ್ತವೆ. ಇದಕ್ಕೆ ಶುಲ್ಕದಲ್ಲಿ ರಿಯಾಯಿತಿಯಂಥ ಕೆಲವೊಂದು ಷರತ್ತುಗಳನ್ನು ವಿಸಲಾಗುತ್ತದೆ.

ವಿಶ್ವವಿದ್ಯಾನಿಲಯದ ಆಯ್ಕೆಯಲ್ಲಿ ವಿಶ್ವವಿದ್ಯಾನಿಲಯಗಳ ಅಂಗಸಂಸ್ಥೆಗಳಾದ ಕಾಲೇಜುಗಳು, ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯಗಳ ಪರ್ಯಾಯ ಕ್ಯಾಂಪಸ್‌ಗಳು ಸೇರುತ್ತವೆ. ಉದಾಹರಣೆಗೆ ದಿಲ್ಲಿ ವಿಶ್ವವಿದ್ಯಾನಿಲಯ ಅೀನದ ಸೈಂಟ್ ಜೋಸ್‌ಸೆ ಅಥವಾ ಮಿರಂಡಾ ಹೌಸ್‌ಗಳಿಗೆ ಸಹ ಸಂಸ್ಥೆಗಳಿವೆ. ಮದ್ರಾಸ್ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ಗಳು ನಗರದಿಂದ ಹೊರಗೂ ಇವೆ.

ಶೇ. 7ರಷ್ಟು ಕಾಲೇಜುಗಳನ್ನು ಸ್ಥಳೀಯ ಸಂಸ್ಥೆಗಳು ನಿರ್ವಹಿಸುತ್ತವೆ. ಎಐಎಸ್‌ಎಚ್‌ಇ ವರದಿ ಪ್ರಕಾರ ಇವುಗಳಲ್ಲಿ ಪಂಚಾಯತ್‌ಗಳು, ನಗರ ಸ್ಥಳೀಯ ಸಂಸ್ಥೆಗಳು, ಕಂಟೋನ್ಮೆಂಟ್ ಮಂಡಳಿ, ನಗರ ಪ್ರದೇಶ ಸಮಿತಿ ಹಾಗೂ ಸ್ವಯಂ ಸರಕಾರಗಳನ್ನು ಹೊರತುಪಡಿಸಿದ ಇತರ ಸ್ಥಳೀಯಸಂಸ್ಥೆಗಳು ಸೇರಿವೆ. ಬಹುತೇಕ ರಾಜ್ಯಗಳಲ್ಲಿ ಖಾಸಗಿ ಅನುದಾನಿತ ಕಾಲೇಜುಗಳು ಹಾಗೂ ರಾಜ್ಯ ಸರಕಾರಿ ಕಾಲೇಜುಗಳು ಕಂಡುಬರುತ್ತವೆ. ಆದರೆ ಕೆಲ ರಾಜ್ಯಗಳಲ್ಲಿ, ಒಂದೇ ಬಗೆಯ ಸಂಸ್ಥೆಗಳತ್ತ ಪಕ್ಷಪಾತ ನಿಲುವು ಕಂಡುಬರುತ್ತದೆ.

ಮಹಾರಾಷ್ಟ್ರದಲ್ಲಿ ಈ ಸಂಬಂಧ ಸ್ಪಷ್ಟವಾದ ನೀತಿ ಇದ್ದು, ಖಾಸಗಿ ಕಾಲೇಜುಗಳ ಸಂಪೂರ್ಣ ಹೊಣೆ ಹೊರುವ ಬದಲು ಖಾಸಗಿ ಮಾಲಕತ್ವದ ಕಾಲೇಜುಗಳಿಗೆ ಅನುದಾನವನ್ನು ನೀಡಲು ಮಹಾರಾಷ್ಟ್ರ ಸರಕಾರ ಆದ್ಯತೆ ನೀಡುತ್ತದೆ. ಒಡಿಶಾದಲ್ಲೂ ಇದೇ ಪದ್ಧತಿ ಜಾರಿಯಲ್ಲಿದೆ. ಆದರೆ ಛತ್ತೀಸ್‌ಗಡ ಹಾಗೂ ಅಸ್ಸಾಂನಲ್ಲಿ ತದ್ವಿರುದ್ಧ ಪರಿಸ್ಥಿತಿ ಇದೆ. ಸರಕಾರವೇ ಬಹುತೇಕ ಕಾಲೇಜುಗಳನ್ನು ನಿರ್ವಹಿಸುತ್ತದೆ ಮತ್ತು ಅಸ್ಸಾಂನಲ್ಲಂತೂ ಅನುದಾನಿತ ಸಂಸ್ಥೆಗಳು ತೀರಾ ಕಡಿಮೆ.

2007ರಲ್ಲಿ ಒಂದು ಕುತೂಹಲಕಾರಿ ಅಸಂಗತತೆ ಕರ್ನಾಟಕದಲ್ಲಿ ಕಂಡುಬಂತು. ಆ ವರ್ಷ ರಾಜ್ಯದಲ್ಲಿ 346 ಹೊಸ ಕಾಲೇಜುಗಳು ಆರಂಭವಾದವು. ಇಲ್ಲಿ ವಿಚಿತ್ರವೆಂದರೆ ಈ ಪೈಕಿ 166 ರಾಜ್ಯ ಸರಕಾರ ಆರಂಭಿಸಿದ ಕಾಲೇಜುಗಳು. ಅಂದರೆ ಪ್ರತೀ ಎರಡು ದಿನಗಳಿಗೆ ಒಂದರಂತೆ ಹೊಸ ಕಾಲೇಜುಗಳನ್ನು ಆರಂಭಿಸಿತು. ಶಿಕ್ಷಣ ಕ್ಷೇತ್ರದಲ್ಲಿ ಕಂಡುಬಂದ ಉಬ್ಬರ ಮುಖ್ಯವಾಗಿ ಖಾಸಗಿ ವಲಯದ ಬೆಳವಣಿಗೆ. ಸರಕಾರ ತನ್ನ ಶಿಕ್ಷಣ ನೀಡುವ ಸಾಮರ್ಥ್ಯವನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಿಕೊಳ್ಳಲು ಪ್ರಯತ್ನ ನಡೆಸಿದ ನಿದರ್ಶನ ಬೇರೆಲ್ಲೂ ಸಿಗುವುದಿಲ್ಲ.

Writer - ಥಾಮಸ್ ಮಾನ್ಯುಯಲ್

contributor

Editor - ಥಾಮಸ್ ಮಾನ್ಯುಯಲ್

contributor

Similar News