×
Ad

ಸಂಶಯದಲ್ಲಿ ವ್ಯಕ್ತಿಯನ್ನು ಕೊಂದು ಹಾಕಿದ ಗುಂಪು: ಏಳು ಮಂದಿಯ ಬಂಧನ

Update: 2016-06-29 13:23 IST

   ಕೇರಳ,ಮಂಕಡ,ಜೂನ್ 29: ಮನೆಯೊಂದರ ಬಳಿ ಅನುಮಾನಾಸ್ಪದವಾಗಿ ಕಂಡುಬಂದ ಎಂದು ಆರೋಪಿಸಿ ವ್ಯಕ್ತಿಯೊಬ್ಬರನ್ನು ಥಳಿಸಿ ಕೊಂದ ಪ್ರಕರಣದ ಏಳು ಮಂದಿ ಆರೋಪಿಗಳನ್ನು ಪೆರಿಂದಲ್ ಮಣ್ಣ ಪೊಲೀಸರು ಬಂಧಿಸಿದ್ದು ಇಂದು ಕೋರ್ಟ್‌ಗೆ ಹಾಜರು ಪಡಿಸಲಿದ್ದಾರೆ. ತಲೆತಪ್ಪಿಸಿಕೊಂಡಿರುವ ಮುಖ್ಯ ಆರೋಪಿಗಳಾದ ಸುಹೈಲ್, ಶಾಕೀರ್‌ರ ಪತ್ತೆಗಾಗಿ ಪೊಲೀಸರು ವ್ಯಾಪಕ ಬಲೆಬೀಸಿದ್ದಾರೆ.

 ಮಂಕಡ ಕೂಟ್ಟಿಲ್ ಕುನ್ನಶ್ಶೆರಿ ನಝೀರ್ ಹುಸೈನ್(41)ರನ್ನು ಯುವಕರ ತಂಡವೊಂದು ಹೊಡೆದು ಕೊಂದು ಹಾಕಿತ್ತು. ಮಂಕಡ ಸಮೀಪದ ಕೂಟ್ಟಿಲ್‌ನಲ್ಲಿ ಮಂಗಳವಾರ ಬೆಳಗ್ಗೆ ಎರಡೂವರೆ ಗಂಟೆಗೆ ಈ ಘಟನೆ ನಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ನಝೀರ್ ಹುಸೈನ್ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತನಾಗಿದ್ದ. ಪೆರಿಂದಲ್‌ಮಣ್ಣ ಪೊಲೀಸರು ಕೇಸು ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News