ಡಿ. 26ರಿಂದ ರೈಲು ದರ ಏರಿಕೆ; 500 ಕಿ.ಮೀ.ಗೆ 10ರೂ. ಹೆಚ್ಚಳ
PhotoCredit : PTI
ಹೊಸದಿಲ್ಲಿ: ಡಿ. 26ರಿಂದ ಜಾರಿಗೆ ಬರುವಂತೆ ರೈಲ್ವೆ ಟಿಕೆಟ್ ದರವನ್ನು ಹೆಚ್ಚಿಸಿದೆ. ಪರಿಷ್ಕೃತ ದರಗಳಂತೆ, ಎಸಿ ಅಲ್ಲದ ಕೋಚ್ಗಳಲ್ಲಿ 500 ಕಿ.ಮೀ. ವರೆಗೆ ಪ್ರಯಾಣಿಸುವವರು ಹೆಚ್ಚುವರಿಯಾಗಿ 10ರೂ. ಪಾವತಿಸಬೇಕಾಗುತ್ತದೆ.
ಆದರೆ ಈ ದರ ಪರಿಷ್ಕರಣೆ ಉಪನಗರ (ಸ್ಥಳೀಯ) ರೈಲು ಸೇವೆಗಳು ಹಾಗೂ ಮಾಸಿಕ ಸೀಸನ್ ಟಿಕೆಟ್ಗಳಿಗೆ (ಎಂಎಸ್ಟಿ) ಅನ್ವಯಿಸುವುದಿಲ್ಲ. ಸಾಮಾನ್ಯ ವರ್ಗದಲ್ಲಿ 215 ಕಿ.ಮೀ.ವರೆಗಿನ ಪ್ರಯಾಣಕ್ಕೆ ಯಾವುದೇ ದರ ಏರಿಕೆಯಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.
ಮೇಲ್ ಹಾಗೂ ಎಕ್ಸ್ಪ್ರೆಸ್ ರೈಲುಗಳ ಎಸಿ ಅಲ್ಲದ ಕೋಚ್ ಗಳಲ್ಲಿ ಪ್ರತಿ ಕಿ.ಮೀ.ಗೆ 2 ಪೈಸೆ ದರ ಹೆಚ್ಚಳ ಮಾಡಲಾಗಿದೆ. ಎಸಿ ಕೋಚ್ ಗಳ ಪ್ರಯಾಣಕ್ಕೆ ಪ್ರತಿ ಕಿ.ಮೀ.ಗೆ 2 ಪೈಸೆ ಹೆಚ್ಚಿಸಲಾಗಿದೆ. ಈ ಕ್ರಮದಿಂದ ಈ ವರ್ಷ ಸುಮಾರು 600 ಕೋಟಿ ರೂ. ಹೆಚ್ಚುವರಿ ಆದಾಯ ಲಭಿಸುವ ನಿರೀಕ್ಷೆಯಿದೆ ಎಂದು ರೈಲ್ವೆ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
ಕಳೆದ ಕೆಲ ವರ್ಷಗಳಿಂದ ತನ್ನ ಜಾಲವನ್ನು ವಿಸ್ತರಿಸಿರುವ ರೈಲ್ವೆ , ಕಾರ್ಯಾಚರಣೆ ಮತ್ತು ಸುರಕ್ಷತೆಯನ್ನು ಬಲಪಡಿಸಲು ಸಿಬ್ಬಂದಿಗಳನ್ನು ಹೆಚ್ಚಿಸಲು ಚಿಂತನೆ ನಡೆಸಿದೆ. ಇದರ ಪರಿಣಾಮವಾಗಿ ವೆಚ್ಚವು 1,15,000 ಕೋಟಿ ರೂ.ಗೆ, ಪಿಂಚಣಿ ವೆಚ್ಚವು 60,000 ಕೋಟಿ ರೂ.ಗೆ ಏರಿಕೆಯಾಗಿದೆ. 2024–25ರಲ್ಲಿ ಒಟ್ಟು ಕಾರ್ಯಾಚರಣಾ ವೆಚ್ಚವು 2,63,000 ಕೋಟಿ ರೂ. ತಲುಪಿದೆ ಎಂದು ತಿಳಿಸಿದೆ.