ದಿಲ್ಲಿಯಲ್ಲಿ ವಾಯು ಗುಣಮಟ್ಟ ‘ಅತಿ ಕಳಪೆ’ ಮಟ್ಟಕ್ಕೆ ಇಳಿಕೆ
Update: 2025-12-21 10:34 IST
Photo Credit: ANI
ಹೊಸ ದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ರವಿವಾರ ಬೆಳಿಗ್ಗೆ ದಟ್ಟ ವಿಷಪೂರಿತ ಮಂಜು ಆವರಿಸಿದ್ದು, ವಾಯು ಗುಣಮಟ್ಟ ಸೂಚ್ಯಂಕ 438ಕ್ಕೆ ಕುಸಿದಿದೆ.
ರವಿವಾರ ಬೆಳಗ್ಗೆ 7 ಗಂಟೆ ವೇಳೆ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ 390 ದಾಖಲಾಗಿದ್ದು, ಇದು ಅತ್ಯಂತ ಕಳಪೆ ಪ್ರವರ್ಗಕ್ಕೆ ಸೇರಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.
ಆದರೆ, ನಗರದ ಇನ್ನೂ ಕೆಲವು ಭಾಗಗಳಲ್ಲಿ ವಾಯು ಗುಣಮಟ್ಟ ಮತ್ತಷ್ಟು ಹದಗೆಟ್ಟಿದೆ. ದಿಲ್ಲಿಯ ವಿವಿಧ ಭಾಗಗಳಲ್ಲಿ ದಟ್ಟ ಮಂಜು ಆವರಿಸಿದೆ. ಮಾಲಿನ್ಯದ ಮಟ್ಟ ಅಪಾಯಕಾರಿಯಾಗಿ ಮುಂದುವರಿದಿದೆ.
ಅಕ್ಷರಧಾಮ ಪ್ರದೇಶದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 438ಕ್ಕೆ ಇಳಿಕೆಯಾಗಿದ್ದು, ಇದನ್ನು ಗಂಭೀರ ಪ್ರವರ್ಗವೆಂದು ಪರಿಗಣಿಸಲಾಗಿದೆ. ಇದೇ ರೀತಿಯ ಪರಿಸ್ಥಿತಿ ಘಾಝಿಪುರ್ ಪ್ರದೇಶದಲ್ಲೂ ಕಂಡು ಬಂದಿದೆ. ಅಲ್ಲಿ ವಾಯು ಗುಣಮಟ್ಟ ಸೂಚ್ಯಂಕ 438 ದಾಖಲಾಗಿದೆ ಎಂದು ಕೇಂದ್ರ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.